ಬೀದರ, ಏ. 14ಃ ಭಾರತ ರತ್ನ, ಸಂವಿಧಾನ ಶಿಲ್ಪಿ, ಮಹಾಮಾನತಾವಾದಿ, ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ರವರ 128 ನೆಯ ಜಯಂತಿಯನ್ನು ಏಪ್ರೀಲ್ 14 ರಂದು ನಗರದ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬೀದರ ಲೋಕಸಭೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಡಾ. ಭೀಮರಾವ ರಾಮಜಿ ಅಂಬೇಡ್ಕರ್ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆಗೈದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಡಾ. ಬಿ.ಆರ್. ಅಂಬೇಡ್ಕರ್ರವರು ರಚಿಸಿದ ಭಾರತ ದೇಶದ ಸಂವಿಧಾನ ವಿಶ್ವದಲ್ಲಿಯೇ ಸರ್ವಶ್ರೇಷ್ಠವಾಗಿದೆ. ಅಸ್ಪ್ರಶ್ಯ ಸಮಾಜವನ್ನು ಮೇಲಸ್ತರಕ್ಕೆ ಒಯ್ಯಲು ಸಂವಿಧಾನದಲ್ಲಿ ಅವರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಮುಂತಾದ ಸೌಲಭ್ಯಗಳು ದೊರೆಯುವಂತೆ ಅವಕಾಶ ಸಂವಿಧಾನದಲ್ಲಿ ಕಲ್ಪಿಸಲಾಗಿದೆ ಎಂದರು.
ವಿಶ್ವದಲ್ಲಿಯೇ ಅತ್ಯಧಿಕ ಜಾತಿಗಳು ಹೊಂದಿರುವ ಭಾರತ ದೇಶದಲ್ಲಿ ಸರ್ವ ಸಮಾಜದವರಿಗೆ ಸಾಮಾಜಿಕ ನ್ಯಾಯವನ್ನು ಸಂವಿಧಾನದ ಮೂಲಕ ನೀಡಿದ್ದ ಶ್ರೇಯಸ್ಸು ಬಾಬಾ ಸಾಹೇಬ್ ಅಂಬೇಡ್ಕರ ಅವರಿಗೆ ಸಲ್ಲುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪರಿಷತ್ತಿನ ಸದಸ್ಯರಾದ ಶಿವರಾಜ ಕುದರೆ ಅವರು ಮಾತನಾಡಿ, ಪ್ರಜಾಪ್ರಭುತ್ವದ ದೇಗುಲ ಎನ್ನುಸಿಕೊಂಡಿರುವ ಲೋಕಸಭೆಯು ಡಾ. ಅಂಬೇಡ್ಕರ್ರವರು ರಚಿಸಿದ ಸಂವಿಧಾನ ಕಾಯ್ದೆಯಂತೆ ನಡೆಯುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಡಾ. ಅಂಬೇಡ್ಕರ್ರವರು ಓದಿದ ಲಂಡನಿನಲ್ಲಿರುವ ಮನೆ ಖರೀದಿಸಿ, ರಾಷ್ಟ್ರೀಯ ಸ್ಮರಾಕವನ್ನಾಗಿ ಮಾಡುವ ಮೂಲಕ ಡಾ. ಅಂಬೇಡ್ಕರ್ರವರಿಗೆ ಗೌರವ ಸೂಚಿಸಿದ್ದಾರೆ ಬಿಜೆಪಿಯಲ್ಲಿ ಅಸ್ಪ್ರಶ್ಯತೆ ಇಲ್ಲ. ಬಿಜೆಪಿಯಲ್ಲಿಅಸ್ಪ್ರಶ್ಯತೆ ಇತೆ ಎಂದು ವಿರೋಧ ಪಕ್ಷಗಳು ಮಾಡುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಬಿಜೆಪಿಯ ನಡೆ ಪರಿಶಿಷ್ಟರ ಪ್ರಗತಿಯ ಕಡೆ ಎಂಬ ಕರಪತ್ರವನ್ನು ಬಿಡುಗಡೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಬಾಬುವಾಲಿ, ಬಾಬುರಾವ ಕಾರಬಾರಿ, ಬಸವರಾಜ ಪವಾರ, ಈಶ್ವರಸಿಂಗ ಠಾಕೂರ, ಜಯರಾಜ ಕಾಂಗೆ, ಶಿವರಾಜ ಗಂದಗೆ, ಮಹೇಶ ಪಾಲಂ, ಶಿವಪುತ್ರ ವೈದ್ಯ, ಉಪೇಂದ್ರ ದೇಶಪಾಂಡೆ, ಗುರುನಾಥ ಜ್ಯಾಂತಿಕರ್, ಹಣಮಂತ ಬುಳ್ಳಾ, ರಾಜಕುಮಾರ ಪಾಟೀಲ ನೇಮತಾಬಾದ, ಕಿರಣ ಪಾಲಂ, ದತ್ತಾತ್ರಿ ತುಗಾಂವಕರ್, ಬಸವರಾಜ ಮಲ್ಕಪ್ಪ ಹಾಗೂ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.
ಈ ಕಾರ್ಯಕ್ರಮದ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷರಾದ ಅರಹತ ಸಾವಲೆ ಅವರು, ಸ್ವಾಗತಿಸಿ, ನಿರೂಪಿಸಿ, ಕೊನೆಯಲ್ಲಿ ವಂದಿಸಿದರು ಎಂದು ಬೀದರ ಲೋಕಸಭೆ ಕ್ಷೇತ್ರದ ಬಿಜೆಪಿ ಚುನಾವಣಾ ಮಾಧ್ಯಮ ಘಟಕದ ಸಹ ಸಂಚಾಲಕ ಶ್ರೀನಿವಾಸ ಚೌಧರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.