ಐಪಿಎಲ್ನಲ್ಲಿ ಇಂದು ಆತಿಥೇಯ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗುತ್ತಿವೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರೋಚಕ ಕದನವನ್ನ ನಿರೀಕ್ಷಿಸಲಾಗಿದೆ. ಮೊನ್ನೆಯಷ್ಟೆ ಪಂಜಾಬ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದು ಖುಷಿ ಅನುಭವಿಸುತ್ತಿರುವಾಗಲೇ ಈಗ ಮತ್ತೊಂದು ಸವಾಲು ಎದುರಿಸುತ್ತಿದೆ.
ಇನ್ನೂ ಆಡಿದ 6 ಪಂದ್ಯದಲ್ಲಿ ಕೇವಲ ಒಂದು ಪಂದ್ಯವನ್ನಷ್ಟೆ ಗೆದ್ದಿರುವ ರಾಜಸ್ಥಾನ್ಗೆ ಉಳಿದಿರುವ ಪಂದ್ಯ ಗಳನ್ನು ಜಯಿಸುವುದು ಅನಿರ್ವಾಯ. ಈ ಪಂದ್ಯದಲ್ಲಿಯೂ ಸೋತರೆ ಪ್ಲೇಆಫ್ ಕನಸು ಮರೀಚಿಕೆಯಾಗಿಯೇ ಉಳಿಯುತ್ತದೆ. ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಗೆಲುವಿನ ಟ್ರ್ಯಾಕ್ ಏರುವ ತಯಾರಿ ಮಾಡಿಕೊಳ್ಳುತ್ತಿದೆ.
ಹ್ಯಾಟ್ರಿಕ್ ಗೆಲುವಿನ ಮೇಲೆ ಮುಂಬೈ ಇಂಡಿಯನ್ಸ್ ಕಣ್ಣು
ಕಳೆದ ಎರಡು ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆದ್ದಿರೋ ಮುಂಬೈ ಇಂಡಿಯನ್ಸ್ ಹ್ಯಾಟ್ರಿಕ್ ಗೆಲುವಿನ ಲೆಕ್ಕಾಚಾರದಲ್ಲಿದೆ. ನಾಯಕ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಮುಂಬೈ ಬ್ಯಾಟಿಂಗ್ ವಿಭಾಗ ಕೊಂಚ ಮಂಕಾಗಿದ್ರೂ.. ಕೀರನ್ ಪೋಲಾರ್ಡ್ ನಾಯಕನಾಗಿ ಆಡಿ ತಂಡಕ್ಕೆ ಗೆಲುವು ತಂದುಕೊಟ್ಇಟದ್ದು ಆನೆ ಬಲ ಬಂದಾತಾಗಿದೆ. ಆರಂಭಿಕ ಕ್ವಿಂಟನ್ ಡಿಕಾಂಕ್, ಸೂರ್ಯ ಕುಮಾರ್ ಯಾದವ್, ಪಾಂಡ್ಯಾ ಬ್ರದರ್ಸ್ ಸಿಡಿಯಬೇಕಿದೆ..
ಇನ್ನು ಬೌಲಿಂಗ್ ಡಿಪಾರ್ಟ್ಮೆಂಟ್ ಕೂಡ ಅಷ್ಟೇ ಬಲಿಷ್ಠವಾಗಿದ್ದು ಎದುರಾಳಿಗಳ ಬ್ಯಾಟಿಂಗ್ ಶಕ್ತಿಯನ್ನೇ ಬುಡಮೇಲು ಮಾಡೋ ತಾಕತ್ತು ಹೊಂದಿದೆ. ಅಲ್ಜಾರಿ ಜೊಸೆಫ್, ಜೆಸನ್ ಬೆಹ್ರೆಂಡ್ರಾಫ್, ಜಸ್ಪ್ರೀತ್ ಬೂಮ್ರಾ ತಂಡದ ಪ್ರಮುಖ ಅಸ್ತ್ರಗಳಾಗಿದ್ದಾರೆ.. ಇನ್ನೂ ರಾಹುಲ್ ಚಹರ್ ತಮ್ಮ ಖದರ್ ತೋರಿಸಿದ್ರೆ. ರಾಜಸ್ಥಾನ್ ತಂಡದ ಗೆಲುವು ಮರಿಚಿಕೆಯಾಗಿ ಉಳಿಯೋದ್ರಲ್ಲಿ ಅನುಮಾನವೇ ಇಲ್ಲ..
ಮುಂಬೈ ಮತ್ತು ರಾಜಸ್ತಾನ ತಂಡಗಳು ಐಪಿಎಲ್ನಲ್ಲಿ ಇದುವರೆಗೂ 18 ಬಾರಿ ಮುಖಾಮುಖಿಯಾಗಿವೆ. ಈ ಮುಖಾಮುಖಿಯಲ್ಲಿ ಮುಂಬೈ 8 ಬಾರಿ ಗೆಲುವು ದಾಖಲಿಸಿದ್ರೆ 10 ಬಾರಿ ಸೋಲು ಕಂಡಿದೆ.
ರಾಜಸ್ಥಾನ್ ರಾಯಲ್ಸ್ಗೆ ಕೈ ಹಿಡಿಯದ ಲಕ್..!
ಬಲಿಷ್ಠ ಆಟಗಾರರನ್ನೇ ಹೊಂದಿದ್ರು ರಾಜಸ್ಥಾನ್ಗೆ ಅದೃಷ್ಟದ ಬಾಗಿಲು ಇನ್ನೂ ತೆರೆದಿಲ್ಲ. ಸುಲಭವಾಗಿ ಗೆಲ್ಲುವ ಪಂದ್ಯಗಳನ್ನೆಲ್ಲ ಕೊನೆಯ ಹಂತದಲ್ಲಿ ಕೈಚೆಲ್ಲುತ್ತಿರುವುದು ರಾಜಸ್ಥಾನ್ ತಂಡಕ್ಕೆ ಹಿನ್ನಡೆಯಾಗಿದೆ. ಆರಂಭದ 2 ಪಂದ್ಯಗಳಲ್ಲಿ ಮಿಂಚಿದ ಸಂಜು ಸ್ಯಾಮ್ಸನ್ ಮತ್ತು ಜೋಸ್ ಬಟ್ಲರ್ ಬ್ಯಾಟ್ ಅನಂತರದ ಪಂದ್ಯಗಳಲ್ಲಿ ಸದ್ದು ಮಾಡದಿರುವುದು ಸಮಸ್ಯೆಯಾದರೆ, ಸ್ಟೀವನ್ ಸ್ಮಿತ್ ದೊಡ್ಡ ಮೊತ್ತ ಪೇರಿಸೋದ್ರಲ್ಲಿ ಎಡವುತ್ತಿದ್ದಾರೆ. ಆಲ್ರೌಂಡರ್ ಬೆನ್ ಸ್ಟೋಕ್ಸ್ ನಿರೀಕ್ಷಿತ ಪ್ರದರ್ಶನ ನೀಡಿದರೆ ರಾಜಸ್ಥಾನ್ ದೊಡ್ಡ ಮೊತ್ತ ಕಲೆಹಾಕುವಲ್ಲಿ ಅನುಮಾನವಿಲ್ಲ. ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಬಿಗ್ ಹಿಟ್ಟರ್ ಆಶ್ಟನ್ ಟರ್ನರ್ ಕಣಕಿಳಿಯುವ ಸಾಧ್ಯತೆ ಇದೆ.
ಬೌಲಿಂಗ್ನಲ್ಲಿ ಕನ್ನಡಿಗ ಶ್ರೇಯಸ್ ಗೋಪಾಲ್ ಉತ್ತಮ ಲಯದಲ್ಲಿದ್ದಾರೆ. ರಾಜಸ್ಥಾನ ವೇಗಿಗಳಾದ ಜಯ್ದೇವ್ ಉನಾದ್ಕತ್, ಧವಳ್ ಕುಲಕರ್ಣಿ, ಜೋರ್ಫ ಆರ್ಚರ್ ಉತ್ತಮ ದಾಳಿ ಸಂಘಟಿಸಿದ್ರೆ, ರಾಜಸ್ಥಾನ್ ರಾಯಲ್ಸ್ಗೆ ಗೆಲುವು ಪಡೆಯೋದು ಕಷ್ಟವೇನಲ್ಲ.
ಒಟ್ನಲ್ಲಿ ವಾಂಖಡೆ ಅಂಗಳದಲ್ಲಿ ಮುಂಬೈ ರಾಜಸ್ತಾನ ಫೈಟ್ ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲಿಸಿದ್ದು ಯಾರಿಗೆ ಜಯ ಅನ್ನೋದನ್ನ ಕಾದು ನೋಡಬೇಕಿದೆ.