ಬೆಂಗಳೂರು, ಏ.11-ಇಂದು ಲೋಕಸಭೆ-ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾನ ಮಾಡಲು ಆಂಧ್ರ-ತೆಲಂಗಾಣಕ್ಕೆ ಹೊರಟಿದ್ದ ಮತದಾರರಿಗೆ ಬೆನ್ನಿಗಾನಹಳ್ಳಿಯಿಂದ ಕೆಆರ್ ಪುರಂವರೆಗೆ, ಬಾಣಸವಾಡಿಯಿಂದ ಟಿನ್ ಫ್ಯಾಕ್ಟರಿವರೆಗೆ ಟ್ರಾಫಿಕ್ ಜಾಮ್ ಆಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹಲವೆಡೆ ಅಭ್ಯರ್ಥಿಗಳು ಬಸ್ ವ್ಯವಸ್ಥೆ ಕಲ್ಪಿಸಿದ್ದರು. ಇನ್ನೂ ಕೆಲವರು ಸಾರಿಗೆ ಬಸ್ ಇಳಿದು ಹೋಗಲು ಪರದಾಡುತ್ತಿದ್ದರು.ಖಾಸಗಿ ಬಸ್ನವರು ದುಪ್ಪಟ್ಟು ದರ ವಸೂಲಿ ಮಾಡಲು ಮುಂದಾಗಿದ್ದರಿಂದ ಪ್ರಯಾಣಿಕರು ಮತದಾನಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದುದು ಕಂಡುಬಂತು.
ಬಸ್ ಇಲ್ಲದೆ ಪ್ರಯಾಣಿಕರು ರಾತ್ರಿ 8 ಗಂಟೆಯಿಂದ ತಡರಾತ್ರಿ 3 ಗಂಟೆವರೆಗೆ ಬಸ್ ನಿಲ್ದಾಣದಲ್ಲಿಯೇ ಕಾದು ಸುಸ್ತಾಗಿದ್ದಾರೆ.
ಬಸ್ಗಳಿಲ್ಲದೆ ಆಂಧ್ರ ಪ್ರದೇಶದ ಹಾಗೂ ತೆಲಂಗಾಣ ಜನರು ಲಾರಿ, ಮೆಟಡೋರ್, ವ್ಯಾನ್ಗಳಲ್ಲಿ ಹೋಗುತ್ತಿದ್ದುದು ಕಂಡುಬಂತು.ನಿನ್ನೆ ಸಂಜೆ 6 ರಿಂದ ರಾತ್ರಿ 12 ಗಂಟೆವರೆಗೂ ಟ್ರಾಫಿಕ್ ಜಾಮ್ ಆಗಿತ್ತು.ಅಲ್ಲದೆ, ಇಂದು ಮುಂಜಾನೆ 5 ಗಂಟೆಯಿಂದಲೇ ಜನರು ಮತ ಚಲಾವಣೆ ಮಾಡಲು ಆಂಧ್ರ ಪ್ರದೇಶ ತಮ್ಮ ಊರಿನ ಕಡೆಗೆ ತೆರಳುತ್ತಿದ್ದುದು ಕಂಡುಬಂತು.