ಬೆಂಗಳೂರು, ಏ.11- ಬಿಜೆಪಿ ಬಿಡುಗಡೆ ಮಾಡಿರುವ ತನ್ನ ಪ್ರಣಾಳಿಕೆಯಲ್ಲಿ ಸಂವಿಧಾನ ಕಾಲಂ 24 ಹಾಗೂ 270 ರ ಕಾಲ ಅನ್ನು ತಿದ್ದುಪಡಿ ತರುತ್ತೇವೆ ಎಂಬುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಂಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿ ರಾಜ್ಯ ಸಂಘಟನಾ ರಾಜ್ಯ ಸಂಚಾಲಕ ಎಂ.ನಾಗರಾಜು ಮಾತನಾಡಿ, ಅಂಬೇಡ್ಕರ್ ದೇಶಕ್ಕೆ ಅತ್ಯುತ್ತಮವಾದ ಸಂವಿಧಾನವನ್ನು ನೀಡಿದ್ದಾರೆ. ಅದನ್ನು ತಿದ್ದುಪಡಿ ಮಾಡಲು ಬಿಜೆಪಿ ಹೊರಟಿರುವುದು ಖಂಡನೀಯ.ಕಲಂ 24 ಮತ್ತು 270 ರಲ್ಲಿ ಇರುವ ಅಂಶಗಳನ್ನು ತಿದ್ದುಪಡಿ ಮಾಡುವುದನ್ನು ಪ್ರಣಾಳಿಕೆಯಲ್ಲಿ ಅಳವಡಿಸಿರುವುದು ವಿಷಾದನೀಯ ಸಂಗತಿ ಎಂದರು.
ಡಾ.ಅಂಬೇಡ್ಕರ್ ರವರ ಸಿದ್ದಾಂತಗಳ ಆಧಾರದ ಮೇಲೆ ಬೆಳೆಯುತ್ತಿರುವ ಕಾನ್ಸಿರಾಂ ಸ್ಥಾಪನೆ ಮಾಡಿದ ಮಾಯಾವತಿಯವರ ನೇತೃತ್ವದ ಬಹುಜನ ಸಮಾಜ ಪಕ್ಷ ಲೋಕಸಭೆಯಲ್ಲಿ ಸ್ಪರ್ಧಿಸಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್‍ರವರಿಗೆ ಮತ ಹಾಕುವ ಮೂಲಕ ದೇಶವನ್ನು ರಕ್ಷಿಸುವಂತೆ ಮನವಿ ಮಾಡಿದರು.
ಜಾತಿ ಬಿಡಿ ದೇಶ ಉಳಿಸಿ ಘೋಷಣೆಗಳೊಂದಿಗೆ ಈ ದೇಶ ಮತ್ತು ರಾಜ್ಯದಲ್ಲಿರುವ ಭ್ರಷ್ಟ ಹಾಗೂ ಜಾತಿವಾದಿ ರಾಜಕಾರಣಿಗಳನ್ನು ತೊಲಗಿಸಿ ದೇಶವನ್ನು ಅಭಿವೃದ್ಧಿ ಪಡಿಸಲು ಉತ್ತಮ ನಾಯಕರಿಗೆ ಮತ ನೀಡಿ ಎಂದರು.