ಸೋಲಿನ ಚಕ್ರವ್ಯೂಹದಿಂದ ಹೊರ ಬರಬೇಕು ಆರ್ಸಿಬಿ: ಆರ್ಸಿಬಿ ಗೆಲ್ಲಲು ಪಾಲಿಸಬೇಕು ಐದು ಪಂಚ ತಂತ್ರ

ಸತತ ಸೋಲು….ಬರೀ ಸೋಲು ಇದು ಈ ಬಾರಿಯ 12ನೇ ಐಪಿಎಲ್ ಸೀಸನ್ನಲ್ಲಿ ಆರ್ಸಿಬಿಯ ಸೋಲಿನ ಕತೆ. ಈ ಬಾರಿಯ ಸೀಸನ್ನಲ್ಲಿ ಆರ್ಸಿಬಿ ಪಾತಳಕ್ಕಿಳಿದಿದೆ. ಕ್ಯಾಪ್ಟನ್ ಕೊಹ್ಲಿ ಗೆಲುವಿಗಾಗಿ ಆರು ಪಂದ್ಯಗಳಲ್ಲು ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಮಾಡಿದ್ದೆ ಮಾಡಿದ್ದು ಆದರೆ ಗೆಲುವು ಮಾತ್ರ ಮರಿಚಿಕ್ಕೆಯಾಗಿದೆ.

ಆರ್ಸಿಬಿ ಮುಂದಿನ ಹಂತ ಪ್ಲೇ ಆಫ್ಗೆ ಹೋಗೋದು ಕನಸಿನ ಮಾತು. ಹೋದ್ರು ಅದೊಂದು ಪವಾಡ ಅನ್ನಬಹುದು ಅಷ್ಟೆ. ಆದರೆ ಉಳಿದಿರುವ ಪಂದ್ಯಗಳನ್ನಾದ್ರು ಗೆದ್ದು ಆರ್ಸಿಬಿ ಮಾನ ಉಳಿಸಿಕೊಳ್ಳಬೇಕಿದೆ. ನಾಡಿದ್ದು ಮೊಹಾಲಿಯಲ್ಲಿ ಪಂಜಾಬ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಕ್ಯಾಪ್ಟನ್ ಕೊಹ್ಲಿ ಐದು ಬದಲಾವಣೆ ಮಾಡಬೇಕಿದೆ. ಹಾಗಾದ್ರೆ ಬನ್ನಿ ಆ ಬದಲಾವಣೆ ಏನು ಅನ್ನೋದನ್ನ ನೋಡೋಣ ಬನ್ನಿ.

ಓಪನರ್ರಾಗಿ ಕಣಕ್ಕಿಳಿಯಬೇಕು ಮಾರ್ಕಸ್ ಸ್ಟೋಯ್ನಿಸ್
ಭರ್ಜರಿ ಫಾರ್ಮ್ನಲ್ಲಿರುವ ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಅವರನ್ನ ಓಪನರ್ರಾಗಿ ಕಣಕ್ಕಿಳಿಸಬೇಕು. ಅಟ್ಯಾಕಿಂಗ್ ಬ್ಯಾಟಂಗ್ ಮಾಡೋ ಮಾರ್ಕಸ್ ಸ್ಟೋಯ್ನಿಸ್ ರನ್ ಮಳೆಯನ್ನ ಸುರಿಸುತ್ತಾರೆ. ಸದ್ಯ ವಿರಾಟ್ ಕೊಹ್ಲಿ ಓಪನರ್ರಾಗಿ ಕಣಕ್ಕಿಳಿಯುತ್ತಿದ್ದಾರೆ. ಆದರೆ ಬಿಗ್ ಇನ್ನಿಂಗ್ಸ್ ಕಟ್ಟಲು ಆಗುತ್ತಿಲ್ಲ. ಕೊಹ್ಲಿ ಎಂದಿನಿಂತೆ ನಂ.3ಯಲ್ಲಿ ಆಡೋದು ಬೆಸ್ಟ್ ಇದರಿಂದ ಕೊಹ್ಲಿಗೂ ಟೆನ್ಶನ್ ಕಡಿಮೆಯಾಗಲಿದ್ದು ತಮ್ಮ ನೆಚ್ಚಿನ ಸ್ಲಾಟ್ನಲ್ಲಿ ಆಡಬಹುದಾಗಿದೆ.

 

ಸಿರಾಜ್ ಹೊರಗಿಟ್ಟು ಉಮೇಶ್ ಯಾದವ್ಗೆ ಚಾನ್ಸ್ ಕೊಡಿ
ಯಂಗ್ ಪೇಸರ್ ಮೊಹ್ಮದ್ ಸಿರಾಜ್ ಮೇಲೆ ವಿರಾಟ್ ಕೊಹ್ಲಿಗೆ ಅದೇನು ಪ್ರೀತಿನೊ ಗೊತ್ತಿಲ್ಲ. ಒಳ್ಳೆಯ ಬೌಲಿಂಗ್ ಮಾಡದಿದ್ರು., ಸಿರಾಜ್ಗೆ ಬ್ಯಾಕ್ ಟು ಅವಕಾಶಗಳ ಪಡೆಯುತ್ತಿದ್ದಾರೆ. ಆದರೆ ಸಿರಾಜ್ ಮಾತ್ರ ಸಿಕ್ಕ ಅವಕಾಶಗಳನ್ನ ಚೆನ್ನಾಗಿ ಬಳಸಿಕೊಂಡಿಲ್ಲ. ಸಿರಾಜ್ ಬದಲು ತಂಡದ ಅನುಭವಿ ಬೌಲರ್ ಉಮೇಶ್ ಯಾದವ್ಗೆ ಅವಕಾಶ ಕೊಡಬೇಕು. ಉಮೇಶ್ ಯಾದವ್ ಎರಡು ಪಂದ್ಯಗಳಲ್ಲಿ ಕಳಪೆ ಆಡಿದ್ದಾರೆ ಅಷ್ಟೆ ಮೊಹ್ಮದ್ ಸಿರಾಜ್ ದುಬಾರಿ ಬೌಲರ್ರಾಗಿದ್ದಾರೆ. ಜೊತೆಗೆ ಕ್ಯಾಚ್ಗನ್ನ ಕೈಚೆಲ್ಲಿ ಪಂದ್ಯವನ್ನ ಸೋಲುವಂತೆ ಮಾಡಿದ್ದಾರೆ. ಡೆತ್ ಓವರ್ನಲ್ಲಿ ಉಮೇಶ್ ಯಾದವ್ ಇಜಿಜಿeಛಿಣive ಆಗಿದ್ದಾರೆ.

ಶಿವಂ ದುಬೆ ಕಮ್ಬ್ಯಾಕ್ ಮಾಡಲು ಚಾನ್ಸ್ ಕೊಡಿ
ಕ್ಯಾಪ್ಟನ್ ಕೊಹ್ಲಿ ಶಿವಂ ದುಬೆಗೆ ಅವಕಾಶ ಕೊಡಬೇಕು. ಶಿವಂ ದುಬೆ ಮೂರು ಪಂದ್ಯಗಳಿಂದ ಕೇವಲ 16 ರನ್ ಗಳಿಸಿದ್ದಾರೆ. ಈ ಕಾರಣಕ್ಕಾಗಿ ಶಿವಂ ದುಬೆ ಸಾಮರ್ಥ್ಯವನ್ನ ಪ್ರಶ್ನಿಸಲು ಸಾಧ್ಯವಿಲ್ಲ. ಸದ್ಯ ಶವಂ ದುಬೆ ಪ್ಲೇಸ್ನಲ್ಲಿ ಆಡುತ್ತಿರುವ ಆಕಾಶ್ದೀಪ್ ಶಿವಂ ದುಬೆ ರೀತಿಯಲ್ಲಿ Sಣಡಿeಟಿgಣh ತೋರಿಸುತ್ತಿಲ್ಲ. ಶಿವಂ ದುಬೆ ಆಡುವುದರಿಂದ ಮಿಡ್ಲ್ ಆರ್ಡರ್ನಲ್ಲಿ ತಂಡಕ್ಕೆ ಬಲ ತುಂಬಲಿದ್ದಾರೆ.

ಫೀಲ್ಡಿಂಗ್ನಲ್ಲಿ ಖದರ್ ತೋರಿಸಬೇಕು ಕೊಹ್ಲಿ ಬಾಯ್ಸ್
ಹೌದು ಆರ್ಸಿಬಿ ಆಟಗಾರರು ಮುಂದೆ ಆಡುವ ಎಲ್ಲ ಪಂದ್ಯಗಳಲ್ಲಿ ಖದರ್ ತೋರಿಸಬೇಕು. ಆರ್ಸಿಬಿ ಫೀಲ್ಡಿಂಗ್ ಆ ದೇವರೇ ಪ್ರೀತಿ ಎನ್ನುವಂತಿದೆ. ಆರ್ಸಿಬಿ ಬಹುತೇಕ ಪಂದ್ಯಗಳನ್ನ ಕೈಚೆಲ್ಲಿದ್ದು ಕಳೆಪ ಫೀಲ್ಡಿಂಗ್ನಿಂದ ಅನ್ನೋದೇ ಬೇಸರದ ಸಂಗತಿ. ಕ್ಯಾಪ್ಟನ್ ಕೊಹ್ಲಿ ಸೇರಿದಂತೆ ತಂಡದ ಆಟಗಾರರು ಅಡಿuಛಿiಚಿಟ ಟೈಮ್ನಲ್ಲಿ ಕ್ಯಾಚ್ ಕೈಚೆಲ್ಲಿ ಪಂದ್ಯವನ್ನ ಕೈಚೆಲ್ಲಿ ಕೊಂಡಿದ್ದಾರೆ.

ಡೆತ್ ಓವರ್ನಲ್ಲಿ ಸೂಪರ್ ಸ್ಪೆಲ್ ಮಾಡಬೇಕು
ಆರ್ಸಿಬಿ ಸೋಲಿಗೆ ಮತ್ತೊಂದು ಪ್ರಮುಖ ಅದು ಡೆತ್ ಓವರ್ನಲ್ಲಿ ತಂಡದ ಬೌಲರ್ಗಳು ದುಬಾರಿ ಬೌಲರ್ಗಳಾಗಿದ್ದಾರೆ. ಇದನ್ನ ಸ್ವತಃ ವಿರಟ್ ಕೊಹ್ಲಿ ಒಪ್ಪಿಕೊಂಡಿದ್ದಾರೆ. ಡೆತ್ ಓವರ್ನ ಕೊನೆಯ ನಾಲ್ಕು ಓವರ್ಗಳಲ್ಲಿ ತಂಡದ ಯಾವ ಬೌಲರ್ ಕೂಡ ಸಕ್ಸಸ್ ಕಾಣುತ್ತಿಲ್ಲ. ಹೀಗಾಗಿ ತಂಡ ಬೌಲರ್ಗಳು ಸೂಪರ್ ಸ್ಪೆಲ್ ಮಾಡಲೇಬೇಕು.

ಒಟ್ನಲ್ಲಿ ಈ ಐದು ಚೇಂಜಸ್ಗಳನ್ನ ಆರ್ಸಿಬಿ ಮಾಡಿದ್ರೆ ಆರ್ಸಿಬಿ ಸೋಲಿನಿಂದ ಹೊರ ಬರೋದ್ರಲ್ಲಿ ಅನುಮಾನವೇ ಇಲ್ಲ. ಆರ್ಸಿಬಿ ಇನ್ನಾದ್ರು ಗೆಲುವಿನ ಟ್ರ್ಯಾಕ್ಗೆ ಮರಳಲಿ ಅನ್ನೋದೇ ಅಭಿಮಾನಿಗಳ ಆಶಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ