ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಪಂಜಾಬ್ ತಂಡಕ್ಕೆ ಓಪನರ್ಸ್ಗಳಾದ ಕ್ರಿಸ್ ಗೇಲ್ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಆeಛಿeಟಿಣ ಓಪನಿಂಗ್ ಕೊಟ್ರು. ಆರಂಭದಲ್ಲೆ ಡೆಡ್ಲಿ ಬ್ಯಾಟಿಂಗ್ ಮಾಡಿದ ಈ ಜೋಡಿ ಮುಂಬೈ ಬೌಲರ್ಸ್ಗಳನ್ನ ಚೆಂಡಾಡಿದ್ರು. ಮನಬಂದಂತೆ ದಂಡಿಸಿದ ಈ ಜೋಡಿ ಮುಂಬೈ ಲೆಕ್ಕಚಾರಗಳನ್ನೆಲ್ಲ ತಲೆಕೆಳಗೆ ಮಾಡಿ ಮೊದಲ ವಿಕೆಟ್ಗೆ 116 ರನ್ ಸೇರಿಸಿದ್ರು.
ಅರ್ಧ ಶತಕ ಬಾರಿಸಿದ ಕ್ರಿಸ್ ಗೇಲ್
ಮುಂಬೈ ಬೌಲರ್ಸ್ಗಳನ್ನ ಮನಸೋ ಇಚ್ಛೆ ದಂಡಿಸಿದ ಕೆರೆಬಿಯನ್ ಕಿಂಗ್ ಗೇಲ್ 31 ಎಸೆತದಲ್ಲಿ ಅರ್ಧ ಶತಕ ಬಾರಿಸಿದ್ರು ಮತ್ತೊಂದು ಬದಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ 41 ಎಸೆತದಲ್ಲಿ ಅರ್ಧ ಶತಕದ ಗಡಿ ಮುಟ್ಟಿದ್ರು.
ಇನ್ನೇನು ಈ ಜೋಡಿ ಗಟ್ಟಿಯಾಗಿ ನಿಲ್ತಾರೆ ಅಂದುಕೊಳ್ಳುವಾಗಲೇ 63 ರನ್ ಗಳಿಸಿದ್ದ ಕ್ರಿಸ್ ಗೇಲ್ ಬೆರೆನ್ಡ್ರೋಫ್ ಎಸೆತದಲ್ಲಿ ಕೃನಾಲ್ ಪಾಂಡ್ಯಗೆ ಕ್ಯಾಚ್ ನೀಡಿ ಹೊರ ನಡೆದ್ರು. ಗೇಲ್ ಒಟ್ಟು 36 ಎಸೆತದಲ್ಲಿ 3 ಬೌಂಡರಿ 7 ಸಿಕ್ಸರ್ ಬಾರಿಸಿದ್ರು.
ಶತಕ ಬಾರಿಸಿ ಅಬ್ಬರಿಸಿದ ಕನ್ನಡಿಗ ಕೆ.ಎಲ್. ರಾಹುಲ್
ಗೇಲ್ ಔಟಾಗುತ್ತಿದ್ದಂತೆ ನಂತರ ಬಂದ ಸ್ಪೋಟಕ ಬ್ಯಾಟ್ಸ್ಮನ್ ಡೇವಿಡ್ ಮಿಲ್ಲರ್ 7, ಕರುಣ್ ನಾಯರ್ 5, ಸ್ಯಾಮ್ ಕರನ್ 8 ರನ್ ಗಳಿಸಿ ಬೇಗನೆ ಪೆವಿಲಿಯನ್ ಸೇರಿದ್ರು. ಮೊತ್ತೊಂದು ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಕನ್ನಡಿಗ ಕೆ,ಎಲ್. ರಾಹುಲ್ ಕೇವಲ 62 ಎಸೆತದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ್ರು. ಈ ಸೀಸನ್ನಲ್ಲಿ ಮೊದಲ ಶತಕ ಬಾರಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ಹಿರಿಮೆಗೆ ಪಾತ್ರರಾದ್ರು.
ಪಂಜಾಬ್ ತಂಡ 4 ವಿಕೆಟ್ಗೆ 197 ರನ್
ವೀರವೇಶದ ಬ್ಯಾಟಿಂಗ್ ಮಾಡಿದ ರಾಹುಲ್ ಹಾರ್ದಿಕ್ ಅವರ 19ನೇ ಓವರ್ನಲ್ಲಿ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದ್ರು. ಕೊನೆಯಲ್ಲಿ ಮನ್ ದೀಪ್ ಅಜೇಯ 7 ರನ್, ಕೆ.ಎಲ್. ರಾಹುಲ್ ನಾಲ್ಕು ಬೌಂಡರಿ ನಾಲ್ಕು ಸಿಕ್ಸರ್ನೊಂದಿಗೆ ಅಜೇಯ 100 ರನ್ ಗಳಿಸಿದ್ರು.
198 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಮುಂಬೈ ತಂಡ ಓಪನರ್ ಸಿದ್ದೇಶ್ ಲಾಡ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಸ್ಥಿತಿಯಲ್ಲಿ ಸಿಲುಕಿತು. ಮೂರನೇ ಸ್ಲಾಟ್ನಲ್ಲಿ ಬಂದ ಸೂರ್ಯ ಕುಮಾರ್ ಯಾದವ್ 21 ರನ್ಗಳಿಸಿದ್ದಾಗ ಸ್ಯಾಮ್ ಕರನ್ಗೆ ಬಲಿಯಾದ್ರು. ಓಪನರ್ ಡಿಕಾಕ್ 24 ರನ್ ಗಳಿಸಿದ್ದಾಗ ಅಶ್ವಿನ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದ್ರು.
ಮುಂಬೈಗೆ ರೋಚಕ ಗೆಲುವು
198 ರನ್ಗಳ ಗುರಿ ಬೆನ್ನತ್ತಿದ ಮುಂಬೈ ತಂಡ ಸಿದ್ದೇಶ್ ಲಾಡ್, ಡಿಕಾಕ್ 24, ಸೂರ್ಯ ಕುಮಾರ್ ಯಾದವ್ 21 ಅªರುಗಳÀ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು.ಆರದೆ ಮಧ್ಯಮ ಕ್ರಮಾಂಕದಲ್ಲಿ ಬಂದ ಪೋಲಾರ್ಡ್ 10 ಸಿಕ್ಸರ್, 3 ಬೌಂಡರಿ ಬಾರಿಸಿ ಒಟ್ಟು 83 ರನ್ಗಳಿಸಿ ಔಟ್ ಆದ್ರು. ಕೊನೆಯಲ್ಲಿ 1 ಎಸೆತದಲ್ಲಿ 2 ರನ್ ಬೇಕಿದ್ದಾಗ ಜೋಸೆಫ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ರು. ಮುಂಬೈ ತಂಡ 3 ವಿಕೆಟ್ಗಳ ರೋಚಕ ಗೆಲುವು ಪಡೆಯಿತು.