ಜುನಾಗಢ್, ಏ.10-ಕಾಂಗ್ರೆಸ್ ಚುನಾವಣಾ ಪ್ರಚಾರವನ್ನು ತುಘಲಕ್ ರೋಡ್ ಎಲೆಕ್ಷನ್ ಹಗರಣ ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ, ಬಡವರು, ಗರ್ಭಿಣಿಯರು ಹಣವನ್ನು ಲೂಟಿ ಮಾಡಿರುವ ಕಾಂಗ್ರೆಸ್ ಈಗ ಚುನಾವಣೆಯಲ್ಲಿ ಆ ದುಡ್ಡನ್ನು ಖರ್ಚು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಗುಜರಾತ್ನ ಜುನಾಗಢ್ನಲ್ಲಿ ಇಂದು ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೆಹಲಿಯಲ್ಲಿ ಮೊನ್ನೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ನಾಥ್ ಪರಮಾಪ್ತರ ಬಳಿ ಇದ್ದ 20 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡ ಪ್ರಕರಣವನ್ನು ಉಲ್ಲೇಖಿಸಿದರು.
ಭ್ರಷ್ಟಾಚಾರ ಮತ್ತು ಹಗರಣಗಳಿಗೆ ಅನ್ವರ್ಥ ರೂಪವೇ ಕಾಂಗ್ರೆಸ್. ಬಡವರ ಹಣವನ್ನು ಕೊಳೆ ಹೊಡೆದು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ಕಾಂಗ್ರೆಸ್ನ ಧ್ಯೇಯಗಳಲ್ಲಿ ಒಂದು ಎಂದು ಕಿಡಿಕಾರಿದರು.