ನಾಳೆ ಜಲ ಮಂಡಳಿಯಿಂದ ನೀರಿನ ಅದಾಲತ್

ಬೆಂಗಳೂರು, ಏ.8- ಬೆಂಗಳೂರು ಜಲಮಂಡಲಿಯ ಸಕಾನಿಅ (ಪಶ್ಚಿಮ-2), ಸಕಾನಿಅ (ಆಗ್ನೇಯ-2) ಮತ್ತು ಸಕಾನಿಅ (ನೈರುತ್ಯ-2) ಉಪವಿಭಾಗಗಳಲ್ಲಿ ನಾಳೆ (ಏ.9) ಬೆಳಗ್ಗೆ 9.30ರಿಂದ 11 ಗಂಟೆಯವರೆಗೆ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ನೀರಿನ ಅದಾಲತ್ತನ್ನು ನಡೆಸಲಾಗುತ್ತದೆ.

ಸಕಾನಿಅ (ಪಶ್ಚಿಮ-2) ಉಪವಿಭಾಗ ವ್ಯಾಪ್ತಿಯ ನಾಗರಭಾವಿ, ಅನ್ನಪೂರ್ಣೇಶ್ವರಿನಗರ, ಸರ್.ಎಂ.ವಿ ಲೇಔಟ್, ಮೂಡಲಪಾಳ್ಯ ಸೇವಾ ಠಾಣೆ ವ್ಯಾಪ್ತಿಯ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ನಂ.5, ಹೊರವರ್ತುಲ ರಸ್ತೆ, ನಾಗರಭಾವಿ ಇಲ್ಲಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಪಶ್ಚಿಮ-2) ಕಚೇರಿಯಲ್ಲಿ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ಕಾರ್ಯನಿರ್ವಾಹಕ ಅಭಿಯಂತರರು (ವಾಯುವ್ಯ-1): 23491123, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಪಶ್ಚಿಮ-2) ಉಪವಿಭಾಗ: 23212181.

ಸಕಾನಿಅ (ಆಗ್ನೇಯ-2) ಉಪವಿಭಾಗ ವ್ಯಾಪ್ತಿಯಲ್ಲಿನ ಜೀವನ್ ಭೀಮಾನಗರ, ಹೆಚ್.ಎ.ಎಲ್, 2ನೇ ಹಂತ, ಇಂದಿರಾನಗರ, ಬೈಯಪ್ಪನ ಹಳ್ಳಿ, ಸದಾನಂದನಗರ, ಸೇವಾ ಠಾಣೆ ವ್ಯಾಪ್ತಿಯ ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ 10ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆ, ಇಂದಿರಾನಗರ ಕ್ಲಬ್ ಹಿಂಭಾಗ, ಹೆಚ್.ಎ.ಎಲ್ 2ನೇ ಹಂತ, ಇಲ್ಲಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಆಗ್ನೇಯ-2) ಕಚೇರಿಯಲ್ಲಿ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:ಕಾರ್ಯನಿರ್ವಾಹಕ ಅಭಿಯಂತರರು (ಆಗ್ನೇಯ-1): 22945169. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಆಗ್ನೇಯ-2) ಉಪವಿಭಾಗ: 22945163.

ಸಕಾನಿಅ (ನೈರುತ್ಯ-2) ಉಪವಿಭಾಗ ವ್ಯಾಪ್ತಿಯಲ್ಲಿನ ಕತ್ರಿಗುಪ್ಪೆ, ಹೊಸಕೆರೆಹಳ್ಳಿ, ದೇವಗಿರಿ-1, ಇಟ್ಟಮಡು ಸೇವಾಠಾಣೆ ವ್ಯಾಪ್ತಿಯ ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ನೆಲಮಹಡಿ, 1ನೇ ಮುಖ್ಯ ರಸ್ತೆ, ಬನಶಂಕರಿ 3ನೇ ಹಂತ ಇಲ್ಲಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ನೈರುತ್ಯ-2) ಕಚೇರಿಯಲ್ಲಿ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:ಕಾರ್ಯನಿರ್ವಾಹಕ ಅಭಿಯಂತರರು (ನೈರುತ್ಯ): 22945196 ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ನೈರುತ್ಯ-2) ಉಪವಿಭಾಗ: 22945144.

ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಲಿಯ 24/7 ದೂರುನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ:22238888, ಸಹಾಯವಾಣಿ 1916 ಹಾಗೂ ವಾಟ್ಸ್‍ಆಪ್ ಸಂಖ್ಯೆ:8762228888 ಗೆ ಸಂಪರ್ಕಿಸಬಹುದಾಗಿದೆ.

ಸಾರ್ವಜನಿಕರು ಮೇಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಅದಾಲತ್ ಸೌಲಭ್ಯ ಬಳಸಿಕೊಳ್ಳ ಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ