ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಅವರ ಪತ್ನಿ ಗೀತಾ ಖಂಡ್ರೆ ಸೋಮವಾರ ನಗರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು.
ನಗರದ ಲಾಡಿಗೇರಿ, ಹುಗೇರಿ, ಚನಬಸವನಗರ, ಜಡಿಸುಲಿನ್ ಕಾಲೋನಿ, ಜರಸಲೆಮ್ ಕಾಲೋನಿಯಲ್ಲಿ ಮನೆ, ಮನೆಗೆ ತೆರಳಿ ಪ್ರಚಾರ ನಡೆಸಿದರು.
ಬಿಸಿಲಿನ ಕಾವಿಗೆ ದಣಿಯದ ಗೀತಾ ಖಂಡ್ರೆ, ತಂಪು ನೀರು ಕುಡಿದು, ಐಸ್ ಕ್ರಿಮ್ ತಿಂದು ಪ್ರಚಾರ ನಡೆಸಿದ್ದು ವಿಶೇಷವಾಗಿತ್ತು.
ಪ್ರಖರ ಬಿರುಸಿನ ನಡುವೆ ಪ್ರಚಾರ ನಡೆಸಿದ ಗೀತಾ ಖಂಡ್ರೆ, ಎಲ್ಲ ಸಮಾಜ ಏಳ್ಗೆ ಮಾಡುವ ಏಕೈಕ ಪಕ್ಷ ಕಾಂಗ್ರೆಸ್.
ಜಾತಿಗಳ ನಡುವೆ ಜಗಳ ಹಚ್ಚುವ ಕೋಮುವಾದಿ ಬಿಜೆಪಿ ಯನ್ನು ದೂರವಿಟ್ಟು ಕಾಂಗ್ರೆಸ್ ಗೆ ಬೆಂಬಲಿಸುವ ಮೂಲಕ ಈಶ್ವರ ಖಂಡ್ರೆ ಅವರಿಗೆ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮೂರು ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿ ಈಶ್ವರ ಖಂಡ್ರೆ ಬಹಳಷ್ಟು ಕೆಲಸ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಸಾವಿರಾರು ಕೋಟಿ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿ ಮಾಡಿದ್ದಾರೆ.
ಪ್ರಮುಖರಾದ ಪಪ್ಪು ಪಾಟೀಲ್, ಮಾಣಿಕೇಶ್ ಪಾಟೀಲ್, ಧನರಾಜ ಹಂಗರಗಿ ಇತರರು ಇದ್ದರು.