ಜೈಪುರದಲ್ಲಿ ಕೋಲ್ಕತ್ತಾ ಕಿಂಗ್ :ಅಂಕಪಟ್ಟಿಯಲ್ಲಿ ಮೊದಲ ಸ್ಥಾನ

ಜೈಪುರ:ಬೌಲಿಂಗ್​ ಹಾಗೂ ಬ್ಯಾಟಿಂಗ್​ ಎರಡಲ್ಲೂ ಅದ್ಭುತ ಪ್ರದರ್ಶನ ತೋರಿದ ಕೋಲ್ಕತಾ ನೈಟ್​ ರೈಡರ್ಸ್​ ರಾಜಸ್ಥಾನ ರಾಯಲ್ಸ್​ ವಿರುದ್ಧ 8 ವಿಕೆಟ್​ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಮೊದಲು ಬ್ಯಾಟಿಂಗ್​ ನಡೆಸಿದ ರಾಜಸ್ಥಾನ ರಾಯಲ್ಸ್​ ತಂಡ ಕೋಲ್ಕತಾ ವಿರುದ್ಧ ಸ್ಪಿನ್​ ಹಾಗೂ ಬಿರುಸಾಗಿ ಬೀಸುತ್ತಿದ್ದ ಗಾಳಿಯ ನಡುವೆ ರನ್​ಗಳಿಸಲು ಪರದಾಡಿತು. 20 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 139 ರನ್​ಗಳಿಸಲಷ್ಟೇ ಶಕ್ತವಾಯಿತು.

ಆರಂಭಿಕರಾಗಿ ಕಣಕ್ಕಿಳಿದ ರಹಾನೆ 5 ರನ್​ಗೆ ವಿಕೆಟ್​ ಒಪ್ಪಿಸಿದರೆ, ಜಾಸ್​ ಬಟ್ಲರ್​ 34 ಎಸೆತಗಳಲ್ಲಿ 37, ಸ್ಟಿವ್​ ಸ್ಮಿತ್​ 59 ಎಸೆತಗಳಲ್ಲಿ 73 ರನ್​ಗಳಿಸಿ ತಂಡದ ಮೊತ್ತ 100 ಗಡಿ ದಾಟುವಂತೆ ನೋಡಿಕೊಂಡರು.ಉತ್ತಮ ಬೌಲಿಂಗ್​ ದಾಳಿ ನಡೆಸಿದ ನೈಟ್​ ರೈಡರ್ಸ್​ ಪರ ಪೀಯೂಷ್​ ಚಾವ್ಲಾ 4 ಓವರ್​ಗಳಲ್ಲಿ 19 ರನ್, ನರೈನ್​ 22 ರನ್​ ಮಾತ್ರ ಬಿಟ್ಟುಕೊಟ್ಟರು. ಆದರೆ, ವಿಕೆಟ್​ ಪಡೆಯುವಲ್ಲಿ ವಿಫಲವಾದರು. ಇಂದು ಮೊದಲ ಐಪಿಎಲ್​ ಪಂದ್ಯವಾಡಿದ ಹ್ಯಾರಿ ಗಾರ್ನೆ 2, ಪ್ರಸಿದ್​ ಕೃಷ್ಣ ಒಂದು ವಿಕೆಟ್​ ಪಡೆದರು.

140 ರನ್​ಗಳ ಗುರಿ ಪಡೆದ ಕೆಕೆಆರ್​ಗೆ ನರೈನ್​ 25 ಎಸೆತಗಳಲ್ಲಿ 47, ಕ್ರಿಸ್​ ಲಿನ್​ 32 ಎಸೆತಗಳಲ್ಲಿ 50 ರನ್​ಗಳಿಸಿ ಮೊದಲ ವಿಕೆಟ್​ಗೆ 91 ರನ್​ ಗಳಿಸಿದರು. ಇಬ್ಬರ ಇನ್ನಿಂಗ್ಸ್‌ನಲ್ಲೂ ತಲಾ ಮೂರು ಸಿಕ್ಸರ್​ ಹಾಗೂ 6 ಬೌಂಡರಿಗಳಿದ್ದವು.ಇವರಿಬ್ಬರ ನಂತರ ಅಬ್ಬರಿಸಿದ ಉತ್ತಪ್ಪ 16 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ 2 ಸಿಕ್ಸರ್​ ಸಹಿತ 26 ರಾಯಲ್ಸ್​ ಪರ ಶ್ರೇಯಸ್​ ಗೋಪಾಲ್​ ಮಾತ್ರ 2 ವಿಕೆಟ್​ ಪಡೆದರು.​ ​ಈ ಸೋಲಿನೊಂದಿಗೆ ರಾಜಸ್ಥಾನ ತಂಡ ಆರ್​ಸಿಬಿ ನಂತರದ ಕೊನೆಯ ಸ್ಥಾನದಲ್ಲೇ ಮುಂದುವರಿದರೆ ಕೆಕೆಆರ್​ ಮೊದಲ ಸ್ಥಾನಕ್ಕೇರಿ ಸಿಎಸ್​ಕೆಯನ್ನು 2ನೇ ಸ್ಥಾನಕ್ಕೆ ತಳ್ಳಿತು.ರನ್​ಗಳಿಸಿ ಗೆಲುವಿನ ದಡ ಸೇರಿಸಿದರು. ಶುಬ್ಮನ್ ಗಿಲ್​ 6 ರನ್​ಗಳಿಸಿ ಔಟಾಗದೆ ಉಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ