ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಇಂದು ಡಬಲ್ ಧಮಕಾ. ಯುಗಾದಿ ಹಬ್ಬದ ದಿನ ಇಂದು ಮೊದಲ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡ ತವರು ಚೆಪಾಕ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನ ಎದುರಿಸಲಿದೆ. ಮತ್ತೊಂದು ಪಂದ್ಯದಲ್ಲಿ ಆತಿಥೇಯ ಸನ್ರೈಸರ್ಸ್ ಹೈದ್ರಾಬಾದ್ ತಂಡವನ್ನ ಮುಂಬೈ ತಂಡ ಎದುರಿಸಲಿದೆ.
ಚೆನ್ನೈ, ಪಂಜಾಬ್ ಫೈಟ್ನಲ್ಲಿ ಕಿಂಗ್ ಯಾರು ?
ಈ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಮೊದಲ ಬಾರಿ ಮುಖಾಮುಖಿಯಾಗುತ್ತಿವೆ. ಚೆನ್ನೈ ತಂಡ ಮೊನ್ನೆಯಷ್ಟೆ ಬಲಿಷ್ಠ ಮುಂಬೈ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಇದೀಗ ಗೆಲುವಿನ ಟ್ರ್ಯಾಕ್ಗೆ ಮರಳ ಬೇಕಿದೆ.
ಧೋನಿಗೆ ಪಡೆಗೆ ತವರಿನಲ್ಲಿ ಅಗ್ನಿ ಪರೀಕ್ಷೆ
ತವರಿನಲ್ಲಿ ಫಂಜಾಬ್ ತಂಡವನ್ನ ಎದುರಿಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇಂದು ನಿಜವಾದ ಪರೀಕ್ಷೆಯಾಗಿದೆ. ತವರಿನಲ್ಲಿ ಚೆನ್ನೈ ಆಡಿರುವ ಎರಡು ಪಂದ್ಯಗಳಲ್ಲೂ ಪ್ರಯಾಸಪಟ್ಟು ಗೆದ್ದಿದೆ. ಇದು ಪಂಜಾಬ್ ತಂಡಕ್ಕೆ ಂಜvಚಿಟಿಣಚಿge ಆಗಿದೆ. ಚೆಪಾಕ್ ಅಂಗಳದಲ್ಲಿ ತಂಡ ಬ್ಯಾಟಿಂಗ್ನಲ್ಲಿ ಫ್ಲಾಪ್ ಆಗುತ್ತಿರೋದ್ರಿಂದ ಕ್ಯಾಪ್ಟನ್ ಧೋನಿ ಈ ಸಮಸ್ಯೆಗೆ ಹೇಗೆ ಬಗೆಹರಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ಚೆನ್ನೈ ಬ್ಯಾಟಿಂಗ್ ಗಿs ಪಂಜಾಬ್ ಬೌಲಿಂಗ್
ಹೌದು ಇಂದು ಚೆಪಾಕ್ ಅಂಗಳದಲ್ಲಿ ನಡೆಯೋದು ಚೆನ್ನೈ ಬ್ಯಾಟಿಂಗ್ ಗಿs ಪಂಜಾಬ್ ಬೌಲಿಂಗ್. ಚೆನ್ನೈ ತಂಡ ಬ್ಯಾಟಿಂಗ್ನಲ್ಲಿ ತುಂಬ ಸ್ಟ್ರಾಂಗ್ ಇದೆ. ಇನ್ನು ಪಂಜಾಬ್ ತಂಡ ಆಡಿರುವ ನಾಲ್ಕು ಪಂದ್ಯಗಳನ್ನ ಬೌಲಿಂಗ್ನಲ್ಲಿಯೇ ಗೆದ್ದುಕೊಂಡಿದೆ. ಇದಲ್ಲದೇ ಪಂಜಾಬ್ ಕ್ಯಾಪ್ಟನ್ ಆರ್.ಅಶ್ವಿನ್ಗೆ ಚೆಪಾಕ್ ಅಂಗಳ ತವರಾಗಿದೆ. ಚೆನ್ನೈ ತಂಡದ ಓಪನರ್ಸ್ಗಳಾದ ಶೇನ್ ವ್ಯಾಟ್ಸನ್ ಮತ್ತು ಅಂಬಟಿ ರಾಯ್ಡು ತಂಡಕ್ಕೆ ಒಳ್ಳೆಯ ಓಪನಿಂಗ್ ಕೊಟ್ಟಿಲ್ಲ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ, ಕೇದರ್ ಜಾಧವ್ ಬೇಗನೆ ಪೆವಲಿಯನ್ ಸೇರುತ್ತಿದ್ದಾರೆ. ಇನ್ನೂ ಸ್ಲಾಗ್ ಓವರ್ಗಳಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ ಅಬ್ಬರಿಸಬೇಕಾದ ಅನಿವಾರ್ಯತೆ ಇದೆ.. ಆಲ್ರೌಂಡರ್ ಆಗಿ ತಂಡದ ನೆರವಿಗೆ ಬರ್ತಿದ್ದ ಡ್ವೇನ್ ಬ್ರಾವೋ ಇಂದಿನ ಪಂದ್ಯಕ್ಕೆ ಅಲಭ್ಯರಾಗೋ ಸಾಧ್ಯತೆ ಇದೆ..
ಇನ್ನೂ ಚೆನ್ನೈ ತಂಡದ ಬೌಲಿಂಗ್ ಡಿಪಾರ್ಟ್ಮೆಂಟ್ ಬಲಿಷ್ಠವಾಗಿದೆ. ಇದಕ್ಕೆ ಉದಾಹರಣೆ 4 ಪಂದ್ಯಗಳಲ್ಲೂ ಚೆನ್ನೈ ತಂಡದ ಬೌಲರ್ಸ್ ಪ್ರದರ್ಶನ. ಚೆನ್ಣೈ ಸೂಪರ್ ಕಿಂಗ್ಸ್ ತಂಡದ ಗೆಲುವಿನ ಹಿಂದೆ ಬೌಲರ್ಗಳ ಪಾತ್ರ ದೊಡ್ಡದು. ವೇಗಿಗಲಾದ ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಆರಂಭದಲ್ಲೇ ಎದುರಾಳಿಗಳ ವಿಕೆಟ್ ಪಡೆಯೋದ್ರ ಜೊತೆಗೆ ರನ್ ದಾಹಕ್ಕೆ ಕಡಿವಾಣ ಹಾಕ್ತಾರೆ. ಇನ್ನು ಇವ್ರ ಜೊತೆಗೆ ಟ್ರಂಪ್ ಕಾರ್ಡ್ ಸ್ಪಿನ್ನರ್ ಇಮ್ರಾನ್ ತಾಹಿರ್ ಮ್ಯಾಜಿಕ್ ಸ್ಪೆಲ್ ಮೂಲಕ ಎದುರಾಳಿಗಳಿಗೆ ಕಂಟಕವಾಗಿ ಕಾಡ್ತಿರೋದು ತಂಡಕ್ಕೆ ಪ್ಲಸ್ ಪಾಯಿಂಟ್
ಗೆಲುವಿನ ಅಭಿಯಾನ ಮುಂದುವರಿಸಲು ಪಂಜಾಬ್ ಪ್ಲಾನ್
ಡೆಲ್ಲಿ ವಿರುದ್ಧ ಪಂದ್ಯ ಕೈಚೆಲ್ಲುವ ಆತಂಕದಲ್ಲಿದ್ದ ಪಂಜಾಬ್ಗೆ ಜಯದ ಮಾಲೆ ತೊಡಿಸುವಲ್ಲಿ ಬೌಲರ್ಗಳು ಸಕ್ಸಸ್ ಆಗಿದ್ರು. ಆದ್ರೆ, ಇಂದಿನ ಪಂದ್ಯದಲ್ಲೂ ಅದೇ ಪ್ರದರ್ಶನ ಮುಂದುವರಿಸೋ ಅತ್ಮವಿಶ್ವಾಸದಲ್ಲಿ ಕಿಂಗ್ಸ್ ಇಲೆವೆನ್ ಬೌಲರ್ಸ್ಗಳಿದ್ದಾರೆ. ಇನ್ನೂ ಪಂಜಾಬ್ ವೇಗಿಗಳಾದ ಮೊಹಮ್ಮದ್ ಶಮಿ, ಸ್ಯಾಮ್ ಕರನ್ ಚೆನ್ನೈಗೆ ಶಾಕ್ ನೀಡೋಕೆ ರೆಡಿಯಾಗಿದ್ರೆ, ಇತ್ತ ನಾಯಕ ಕೇರಂ ಸ್ಪೆಷಲಿಸ್ಟ್ ರವಿಚಂದ್ರನ್ ಅಶ್ವಿನ್, ಮುಜೀಬ್ ರೆಹಮನ್ ಬ್ಯಾಟ್ಸ್ಮನ್ಗಳಿಗೆ ಕಾಡೋ ತಂತ್ರದಲ್ಲಿದ್ದಾರೆ.
ಸನ್ ರೈಸರ್ಸ್ಗೆ ಮುಂಬೈ ಸವಾಲು
ಐಪಿಎಲ್ನ 2ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಮುಂಬೈ ಇಂಡಿಯನ್ಸ್ ಸವಾಲ್ ಹಾಕಲಿದೆ. ಕಳೆದ ಪಂದ್ಯದಲ್ಲಿ ಗೆಲುವಿನ ಈ ಎರಡು ತಂಡಗಳು ಗೆಲುವಿನ ಕೇಕೆ ಹಾಕಿದ್ದವು. ಮುಂಬೈ ತಂಡ ಚೆನ್ನೈ ವಿರುದ್ಧ ಗೆದ್ದಿದ್ರೆ, ಸನ್ರೈಸರ್ಸ್ ಡೆಲ್ಲಿ ತಂಡವನ್ನ ಪಂಕ್ಚರ್ ಮಾಡಿತ್ತು. ಹೀಗಾಗಿ ಎರಡು ತಂಡಗಳು ಗೆಲುವಿನ ಅಭಿಯಾನ ಮುಂದುವರೆಸಲು ನಿರ್ಧರಿಸಿವೆ.
ಮುಂಬೈ ಇಂಡಿಯನ್ಸ್ ಒಪನರ್ಗಳಾದ ರೋಹಿತ್ ಶರ್ಮಾ, ಕ್ವಿಂಟನ್ ಡಿಕಾಕ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ ಸೂರ್ಯ ಕುಮಾರ್ ಯಾದವ್ ಪಾರ್ಮ್ಗೆ ಮರಳಿದ್ದಾರೆ. ಅಲ್ಲದೆ ಆಲ್ರೌಂಡರ್ಗಳಾದ ಕೃನಾಲ್ ಪಾಂಡ್ಯಾ, ಕಿರನ್ ಪೋಲಾರ್ಡ್, ಹಾರ್ದಿಕ್ ಪಾಂಡ್ಯಾ ರನ್ ಹೊಳೆಯನ್ನ ಹರಿಸಬೇಕಿದೆ.
ಮುಂಬೈ ಇಂಡಿಯನ್ಸ್ ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ಲಿಸತ್ ಮಲಿಂಗಾ 3 ವಿಕೆಟ್ ಪಡೆದು ಮಿಂಚಿದ್ದಾರೆ. ಚೆನ್ನೈ ವಿರುದ್ಧ ಮಿಂಚಿದ್ದ ಜಸ್ಪ್ರೀತ್ ಬೂಮ್ರಾ, ಜೇಸನ್ ಬೆಹ್ರೆನ್’ಡಾರ್ಫ್, ಲಸಿತ್ ಮಲಿಂಗಾ ಮತ್ತೆ ಬ್ಯಾಟ್ಸ್ಮನ್ಗಳನ್ನು ಕಾಡೋಕೆ ಸಜ್ಜಾಗಿದ್ದಾರೆ. ಮೊನ್ನೆ ಪಂದ್ಯದಿಂದ ಹೊರಗಿದ್ದ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಇಂದು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದು ತಂಡಕ್ಕೆ ಮತ್ತಷ್ಟು ಬಲಬಂದತಾಗಿದೆ..
ಇನ್ನು ಸನರ್ರೈಸರ್ಸ್ ತಂಡ ಓಪನರ್ಸ್ ಗಳಾದ ಡೇವಿಡ್ ವಾರ್ನರ್ ಮತ್ತು ಜಾನಿ ಬೇರ್ಸ್ಟೋ ಡೆಡ್ಲಿ ಓಪನಿಂಗ್ ಕೊಟ್ಟು ಎದುರಾಳಿ ಬೌಲರ್ಸ್ಗಳ ಲೆಕ್ಕಾಚಾರಗಳನ್ನೆಲ್ಲ ತಲೆಕೆಳಗೆ ಮಾಡುತ್ತಿದ್ದಾರೆ. ಇನ್ನು ತಂಡದ ಬೌಲರ್ಸ್ಗಳಾದ ಭುವನೇಶ್ವರ್ ಕುಮಾರ್, ರಶೀದ್ ಖಾನ್ ಎದುರಾಳಿ ಬ್ಯಾಟ್ಸ್ಮನ್ಗಳನ್ನ ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಸಕ್ಸಸ್ ಕಂಡಿದ್ದಾರೆ.
ಒಟ್ನಲ್ಲಿ ಇಂದು ನಡೆಯುವ ಎರಡು ಹೈವೋಲ್ಟೇಜ್ ಮ್ಯಾಚ್ನಲ್ಲಿ ಯಾರಿಗೆ ಬೇವು ಯಾರಿಗೆ ಬೆಲ್ಲ ಅನ್ನೋದನ್ನ ಕಾದುನೋಡಬೇಕಿದೆ