ಆಲ್ರೌಂಡರ್ ಆಂಡ್ರೊ ರಸ್ಸೆಲ್ ಅಬ್ಬರಕ್ಕೆ ನಲುಗಿದ ಆರ್‍ಸಿಬಿ ತಂಡ % ವಿಕೆಟ್‍ಗಳ ಹೀನಾಯ ಸೋಲು ಕಂಡಿದೆ. ಇದರೊಂದಿಗೆ ಟೂನಿಯಲ್ಲಿ ಸತತ ಐದನೇ ಸೋಲು ಕಂಡಿತು.
ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಆರ್ಸಿಬಿ ತಂಡಕ್ಕೆ ಓಪನರ್ಸ್ಗಳಾದ ಪಾರ್ಥಿವ್ ಪಟೇಲ್ ಮತ್ತು ಕ್ಯಾಪನ್ಟ್ ವಿರಾಟ್ ಕೊಹ್ಲಿ ಓಪನಿಂಗ್ ಕೊಟ್ರು. ಆರಂಭದಲ್ಲೆ ಕೋಲ್ಕತ್ತಾ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಈ ಜೋಡಿ ಮೊದಲ ವಿಕೆಟ್ಗೆ 64 ರನ್ ಸೇರಿಸಿತು.
ಸಾಲಿಡ್ ಓಪನಿಂಗ್ ಕೊಟ್ಟ ಈ ಜೋಡಿ ಇನ್ನೇನು ಗಟ್ಟಿಯಾಗಿ ನಿಲ್ಲುತ್ತಾರೆ ಅಂದುಕೊಳ್ಳುವಾಗಲೇ 25 ರನ್ ಗಳಿಸಿ ಮುನ್ನಗುತ್ತಿದ್ದ ಪಾರ್ಥಿವ್ ಪಟೇಲ್ ನಿತೀಶ್ ರಾಣಾ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ರು. ಪಾರ್ಥಿವ್ ಪಟೇಲ್ 24 ಎಸೆತ ಎದುರಿಸಿ ಮೂರು ಬೌಂಡರಿಗಳೊಂದಿಗೆ 25 ರನ್ ಕಲೆ ಹಾಕಿದ್ರು.
ಅರ್ಧ ಶತಕ ಬಾರಿಸಿದ ವಿರಾಟ್ ಕೊಹ್ಲಿ, ಎಬಿಡಿ
ನಂತರ ಮೂರನೇ ಸ್ಲಾಟ್ನಲ್ಲಿ ಬಂದ ಮಿಸ್ಟರ್ 360 ಎಬಿಡಿ ವಿಲಿಯರ್ಸ್ ಕ್ಯಾಪ್ಟನ್ ಕೊಹ್ಲಿಗೆ ಉತ್ತಮ ಸಾಥ್ ಕೊಟ್ರು. ಕೋಲ್ಕತ್ತಾ ಬೌಲರ್ಸ್ಗಳನ್ನ ಮನಬಂದಂತೆ ಚೆಂಡಾಡಿದ ಈ ಜೋಡಿ ರನ್ ಮಳೆಯನ್ನೆ ಸುರಿಸಿದ್ರು. ಎಬಿಡಿ ಯಿಂದ ಸಾಥ್ ಪಡೆದ ಕೊಹ್ಲಿ 31 ಎಸೆತದಲ್ಲಿ ಅರ್ಧ ಶತಕ ಬಾರಿಸಿದ್ರು. ಇನ್ನು ಎಬಿಡಿ ವಿಲಿಯರ್ಸ್ 28 ಎಸೆತದಲ್ಲಿ ಅರ್ಧ ಬಾರಿಸಿ ಸಂಭ್ರಮಿಸಿದ್ರು.
ಈ ವೇಳೆ ಶತಕದತ್ತ ಮುನ್ನಗುತ್ತಿದ್ದ ಕ್ಯಾಪ್ಟನ್ ಕೊಹ್ಲಿ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಎಸೆತದಲ್ಲಿ ಕಾಟ್ ಅಂಡ್ ಬೌಲ್ಡ್ ಆದ್ರು. ಕೊಹ್ಲಿ ಒಟ್ಟು 49 ಎಸೆತದಲ್ಲಿ 9 ಬೌಂಡರಿ ಎರಡು ಸಿಕ್ಸರ್ ಬಾರಿಸಿ 84 ರನ್ಗಳಿಸಿದ್ರು. 63 ರನ್ ಗಳಿಸಿದ್ದ ಎಬಿಡಿ ವಿಲಿಯರ್ಸ್ ಸುನಿಲ್ ನರೈನ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದ್ರು.
ಆರ್ಸಿಬಿ ನಿಗದಿತ ಓವರ್ನಲ್ಲಿ 3 ವಿಕೆಟ್ಗೆ 205 ರನ್
ಕೊನೆಯಲ್ಲಿ ಬಂದ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಬಿರುಸಿನ ಬ್ಯಾಟಿಂಗ್ ಮಾಡಿ ಕೇವಲ 13 ಎಸೆತದಲ್ಲಿ 3 ಬೌಂಡರಿ 1 ಸಿಕ್ಸರ್ ಬಾರಿಸಿ ಅಜೇಯ 28 ರನ್ ಗಳಿಸಿದ್ರು. ಇದರೊಂದಿಗೆ ಆರ್ಸಿಬಿ ನಿಗದಿತ ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು.
ಆರಂಭಿಕ ಆಘಾತ ಅನುಭವಿಸಿದ ಕೆಕೆಆರ್
206 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭದಲ್ಲೆ ಆಘಾತ ಅನುಭವಿಸಿತು. ಓಪನರ್ ಸುನಿಲ್ ನರೈನ್ 10 ರನ್ಗಳಿಸಿದ್ದಾಗ ವೇಗಿ ಸೈನಿ ಎಸೆತದಲ್ಲಿ ಪವನ್ ನೇಗಿಗೆ ಕ್ಯಾಚ್ ನೀಡಿ ಹೊರ ನಡೆದ್ರು .
ಒಂದನೇ ಕ್ರಮಾಂಕದಲ್ಲಿ ಬಂದ ರಾಬಿನ್ ಉತ್ತಪ್ಪ, ಕ್ರಿಸ್ ಲೀನ್ಗೆ ಉತ್ತಮ ಸಾಥ್ ಕೊಟ್ಟು ಎರಡನೇ ವಿಕೆಟ್ಗೆ 65 ರನ್ ಜೊತೆಯಾಟ ನೀಡಿದ್ರು. ಆದರೆ 43 ರನ್ಗಳಿಸಿದ್ದ ಕ್ರಿಸ್ ಲೀನ್ ಪವನ್ ನೇಗಿ ಎಸೆತದಲ್ಲಿ ಬೌಲ್ಡ್ ಆದ್ರು.
ಈ ವೇಳೆ ಆರ್ಸಿಬಿ ತಂಡಕ್ಕೆ ಕೋಲ್ಕತ್ತಾ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದಿತ್ತು. ಆದರೆ ಆರ್ಸಿಬಿ ಫೀಲ್ಡರ್ಗಳು ಕಳಪೆ ಫೀಲ್ಡಿಂಗ್ ಮಾಡಿ ಮತ್ತದೇ ಹಳೆ ಚಾಳಿ ಮುಂದುವರೆಸಿದ್ರು. ಸ್ಟೋಯ್ನಿಸ್ ಅವರ 11ನೇ ಓವರ್ನ ಎರಡನೇ ಎಸೆತದಲ್ಲಿ ಕ್ಯಾಚ್ ಡ್ರಾಪ್ ಬೌಂಡರಿ ಲೈನ್ನಲ್ಲಿದ್ದ ವೇಗಿ ಸಿರಾಜ್ ನಿತೀಶ್ ರಾಣಾ ನೀಡಿದ ಕ್ಯಾಚ್ನ್ನ ಕೈಚೆಲ್ಲಿದ್ರು. ಇದು ಹೋಗಲಿ ಅಂತಾ ಸುಮ್ಮಾನಿರುವಾಗಲೇ ಯಜ್ವಿಂದರ್ ಚಹಲ್ ಅವರ 16ನೇ ಓವರ್ನ ಮೂರನೇ ಎಸೆತದಲ್ಲಿ ರಾಣಾ ನೀಡಿದ ಕ್ಯಾಚ್ನ್ನ ಮೊಹ್ಮದ್ ಸಿರಾಜ್ ಮತ್ತೊಮ್ಮೆ ಕ್ಯಾಚ್ ಕೈಚೆಲ್ಲಿದ್ರು. ಇದಾದ ನಂತರ ಸೈನಿ ಅವರ 17ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಕ್ಯಾಚ್ ಕೈಚೆಲ್ಲಿದ್ರು. ಈ ವೇಳೆ ದಾಳಿಗಿಳಿದ ಚಹಲ್ ನಿತೀಶ್ ರಾಣಾ ಮತ್ತು ಕಾರ್ತಿಕ್ಗೆ ಪೆವಿಲಿಯನ್ ದಾರಿ ತೋರಿಸಿದ್ರು.
ಆರನೇ ಕ್ರಮಾಂಕದಲ್ಲಿ ಬಂದ ಆಲ್ರೌಂಡರ್ ಆ್ಯಂಡ್ರೆ ರಸ್ಸೆಲ್ ಬಿರುಗಾಳಿಯಂತೆ ಅಬ್ಬರಿಸಿದ್ರು. ನೋಡನೋಡುತ್ತಿದ್ದಂತೆ ಸಿಕ್ಸರ್ಗಳ ಸುರಿಮಳೆಗೈದು ಪಂದ್ಯದ ಗತಿಯನ್ನೆ ಬದಲಿಸಿದ್ರು. 19ನೇ ಓವರ್ಗೂ ಮುನ್ನ ಕೋಲ್ಕತ್ತಾಕ್ಕೆ ಗೆಲ್ಲಲು 12 ಎಸೆತದಲ್ಲಿ 30 ರನ್ ಬೇಕಿತ್ತು. ಸ್ಟ್ರೈಕ್ಗೆ ಬಂದ ರಸೆಲ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದ್ರು. ಕೊನೆಯ ಎರಡು ಎಸೆತದಲ್ಲಿ ಒಂದು ಬೌಂಡರಿ ಒಂದು ಸಿಕ್ಸರ್ ಬಾರಿಸಿದ್ರು. ರಸ್ಸೆಲ್ ಇನ್ನು ಐದು ಎಸೆತ ಬಾಕಿ ಇರುವಂತೆ ಕೋಲ್ಕತ್ತಾ ಗೆಲುವಿನ ದಡ ಸೇರಿಸಿದರು.