ಈ ಬಾರಿ ಡಿಫರೆಂಟಾಗಿ ಐಪಿಎಲ್ ಆಡ್ತಿದ್ದಾರೆ ಲಸಿತ್ ಮಲಿಂಗಾ: ಚೆನ್ನೈ ವಿರುದ್ಧ ಶೈನ್ ಆಗಿದ್ದಾರೆ ಯಾರ್ಕರ್ ಕಿಂಗ್

ಯಾರ್ಕರ್ ಕಿಂಗ್ ಲಿಸಿತ್ ಮಲಿಂಗಾ ಮುಂಬೈ ಇಂಡಿಯನ್ಸ್ ತಂಡದ ಟ್ರಂಪ್ ಕಾರ್ಡ್ . ಈ ಲಂಕಾ ವೇಗಿ ಇಲ್ಲದಿದ್ರೆ ಮುಂಬೈ ತಂಡದ ಪ್ಲೇಯಿಂಗ್ ಇಲೆವೆನ್ ನ್ನ ಊಹಿಸಿಕೊಳ್ಳದಕ್ಕೆ ಸಾಧ್ಯವಿಲ್ಲ.

ಕಳೆದ ಹತ್ತು ವರ್ಷಗಳಿಂದ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಮಲಿಂಗಾ ತಮ್ಮ ಡೆಡ್ಲಿ ಯಾರ್ಕರ್ಗಳ ಮೂಲಕ ಘಟಾನುಘಟಿ ಬ್ಯಾಟ್ಸ್ಮನ್ಗಳನ್ನ ನೆಲಕ್ಕೆ ಉರುಳಿಸಿದ್ದಾರೆ. ಐಪಿಎಲ್ನಲ್ಲಿ ಬಲಿಷ್ಠ ತಂಡ ಎಂದೇ ಗುರುತಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ ಮೂರು ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವಲ್ಲಿ ಲಿಸಿತ್ ಮಲಿಂಗಾ ನಿರ್ಣಾಯಕ ಪಾತ್ರವಹಿಸಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಮುಂಬೈ ತಂಡದಲ್ಲೆ ಆಡುತ್ತಿರುವ ಮಲಿಂಗಾ ಕಳೆದ 11ನೇ ಸೀಸನ್ನಲ್ಲಿ ಫಾರ್ಮ್ ಸಮಸ್ಯೆಯಿಂದಾಗಿ ತಂಡದ ಪರ ಆಡಿರಲಿಲ್ಲ. ಈ ಕಾರಣಕ್ಕಾಗಿ ಮುಂಬೈ ತಂಡ ಟೂರ್ನಿಯಿಂದಲೇ ಬೇಗನೆ ನಿರ್ಗಮಿಸಿತ್ತು.

12ನೇ ಐಪಿಎಲ್ ಸೀಸನ್ಗೆ ಕಮ್ಬ್ಯಾಕ್ ಮಾಡಿರುವ ಮಲಿಂಗಾ ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಲಂಕಾದಲ್ಲಿ ಖಡ್ಡಾಯವಾಗಿ ದೇಸಿ ಟೂರ್ನಿಗಳನ್ನ ಆಡಬೇಕಿತ್ತು. ಇದು ಯಾರ್ಕರ್ ಕಿಂಗ್ಗೆ ದೇಸಿ ಮತ್ತು ಐಪಿಎಲ್ ಟೂರ್ನಿಯ ವೇಳಾ ಪಟ್ಟಿಗಳು ಅಡ್ಡಿಯಾಗಿ ಮುಂಬೈ ಇಂಡಿಯನ್ಸ್ ಪರ ಆರಂಭದ ಪಂದ್ಯಗಳಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಆದರೆ ನಂತರ ಆರ್ಸಿಬಿ , ಪಂಜಾಬ್ ಮತ್ತು ಚೆನ್ನೈ ವಿರುದ್ಧ ಆಡಿದ್ದಾರೆ.

ಈ ಬಾರಿ ಡಿಫರೆಂಟಾಗಿ ಐಪಿಎಲ್ ಆಡಿದ್ದಾರೆ ಮುಂಬೈಕರ್
ಹೌದು ಯಾರ್ಕರ್ ಕಿಂಗ್ ಲಸಿತ್ ಮಲಿಂಗಾ ಈ ಬಾರಿ ಡಿಫರೆಂಟಾಗಿ ಐಪಿಎಲ್ ಆಡುತ್ತಿದ್ದಾರೆ. ಈ ಲಂಕಾ ವೇಗಿ ಐಪಿಎಲ್ ಆಡುವ ಜೊತೆಗೆ ದೇಸಿ ಟೂರ್ನಿ ಆಡಿ ಗಮನಸೆಳೆದಿದ್ದಾರೆ. ಮೊನ್ನೆ ವಾಂಖೆಡೆ ಅಂಗಳದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸೂಪರ್ ಸ್ಪೆಲ್ ಮಾಡಿ ಶೈನ್ ಆಗಿ ತಂಡಕ್ಕೆ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ರು.

ಚೆನ್ನೈ ವಿರುದ್ಧ ಮಲಿಂಗಾ ಸಾಧೆನೆ
ಓವರ್ 4
ವಿಕೆಟ್ 3
ರನ್ 34
ಎಕನಾಮಿ ರೇಟ್ : 8.50

ಚೆನ್ನೈ ವಿರುದ್ಧ ನಾಲ್ಕು ಓವರ್ ಬೌಲಿಂಗ್ ಕಿuಣಚಿ ಫೂರ್ಣಗೊಳಿಸಿ ಒಟ್ಟು 3 ವಿಕೆಟ್ ಪಡೆದು ಮಿಂಚಿದ್ರು. ಕೇವಲ 34 ರನ್ ನೀಡಿದ ಮಲಿಂಗಾ 8.50 ಎಕನಾಮಿ ರೇಟ್ ಪಡೆದ್ರು.

ಚೆನ್ನೈ ವಿರುದ್ಧ ಲಂಕೆಗೆ ಹಾರಿದ ಮಲಿಂಗಾ
ಹೌದು ಲಿಸತ್ ಮಲಿಂಗಾ 12 ಗಂಟೆಯಲ್ಲಿ 2 ವಿಭಿನ್ನ ತಂಡದಲ್ಲಿ ಆಡಿದ್ದಾರೆ. ಅದು ಹೇಗೆ ಅಂದ್ರೆ ಮೊನ್ನೆ ವಾಂಖೆಡೆ ಅಂಗಳದಲ್ಲಿ ಚೆನ್ನೈ ವಿರುದ್ಧ ಆಡಿದ್ದಾರೆ.

ಚೆನ್ನೈ ವಿರುದ್ಧ ಪಂದ್ಯ ಮುಗಿಯುವ ವೇಳೆಗೆ ತಡರಾತ್ರಿಯಾಗಿತ್ತು. ಪಂದ್ಯ ಮುಗಿದ ಕಲವೇ ಹೊತ್ತಲ್ಲಿ ಮಲಿಂಗಾ ಸೀದಾ ಲಂಕಾಗೆ ಫ್ಲೈಟ್ನಲ್ಲಿ ದೇಸಿ ಟೂರ್ನಿ ಆಡಲು ಲಂಕಾಗೆ ಹಾರಿದ್ದಾರೆ.

10 ವಿಕೆಟ್ ಪಡೆದು ಮಿಂಚಿದ ಲಂಕಾ ವೇಗಿ
ವಾಂಖೆಡೆ ಅಂಗಳದಲ್ಲಿ ಚೆನ್ನೈ ವಿರುದ್ಧ ಕಮಾಲ್ ಮಾಡಿ 3 ವಿಕೆಟ್ ಪಡೆದಿದ್ದ ಲಸಿತ್ ಮಲಿಂಗಾ ನಂತದ ಲಂಕಾದಲ್ಲಿ ದೇಸಿ ಟೂರ್ನಿಯಲ್ಲೂ ಶಾಂಧಾರ್ ಪರ್ಫಾಮನ್ಸ್ ಕೊಟ್ಟಿದ್ದಾರೆ. 12 ಗಂಟೆಯಲ್ಲಿ 2 ವಿಭಿನ್ನ ಟೂರ್ನಿ ಆಡಿದ ಮಲಿಂಗಾ ಒಟ್ಟು 10 ವಿಕೆಟ್ ಪಡೆದು ಮಿಂಚಿದ್ದಾರೆ. ಇದನ್ನ ಸ್ವತಃ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನ ಟ್ವೀಟರ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದೆ.

ಓಟ್ನಲ್ಲಿ ಇಷ್ಟೊಂದು Workload ನಡುವೆಯೂ ಲಿಸಿತ್ ಮಲಿಂಗಾ ಪರ್ಫಾಮನ್ಸ್ ಕಂಡ ಅಭಿಮಾನಿಗಳು ಮಲಿಂಗಾಗೆ ಉಘೆ ಉಘೆ ಅನ್ನುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ