ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸನಗರ್ ಜನವಸತಿ ಬಡಾವಣೆಯಲ್ಲಿ ಚಿರತೆ:

ಥಾಣೆ, ಮಾ.19-ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸನಗರ್ ಜನವಸತಿ ಬಡಾವಣೆಯಲ್ಲಿ ನಿನ್ನೆ ಚಿರತೆಯೊಂದು ರಾಜಾರೋಷವಾಗಿ ಅಡ್ಡಾಡಿ ಸಾರ್ವಜನಿಕರನ್ನು ಕೆಲಕಾಲ ಆತಂಕಕ್ಕೀಡು ಮಾಡಿತ್ತು.
ಉಲ್ಲಾಸನಗರ ಕ್ಯಾಂಪ್ ನಂ.5ರ ಬಂಗಲೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದನ್ನು ಸೆಕ್ಯೂರಿಟಿ ಗಾರ್ಡ್ ನೋಡಿ ಭಯಭೀತನಾದ. ಚಿರತೆ ಅಲ್ಲಿ ಓಡಾಡಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ನಂತರ ಬಂಗಲೆಯಿಂದ ಹತ್ತಿರದ ಇತರ ಪ್ರದೇಶಗಳಲ್ಲು ಚಿರತೆ ನಿರ್ಭಯವಾಗಿ ಅಡ್ಡಾಡಿದ್ದರಿಂದ ಜನರು ಹೆದರಿದರು. ಸುದ್ದಿ ತಿಳಿದ ಕೂಡಲೇ ಉಲ್ಲಾಸನಗರ್ ಪೆÇಲೀಸರು ಅರಣ್ಯ ಸಿಬ್ಬಂದಿಗೆ ವಿಷಯ ಮುಟ್ಟಿಸಿದರು.
ಸುಮಾರು ಐದು ಗಂಟೆ ಕಾಲ ಶ್ರಮಿಸಿದ ಸಿಬ್ಬಂದಿ ಚಿರತೆಗೆ ಅರವಳಿಕೆ ಚುಚ್ಚುಮದ್ದಿನ ಗುಂಡು ಹಾರಿಸಿ ಅದನ್ನು ಸೆರೆಹಿಡಿದರು. ನಂತರ ಇದನ್ನು ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್‍ಗೆ ಕೊಂಡೊಯ್ಯಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ