ಬೆಂಗಳೂರು,ಮಾ.28- ತಮ್ಮ ಪುತ್ರ ಬಿ.ವೈ. ರಾಘವೇಂದ್ರರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ತೆರಳಲು ಸಾಧ್ಯವಾಗದೆ ಬಿ.ಎಸ್ ಯಡಿಯೂರಪ್ಪ ವಾಪಸ್ಸಾಗಿದ್ದಾರೆ.
ಇಂದು ನಗರದ ಜಕ್ಕೂರು ವಿಮಾನ ನಿಲ್ದಾಣದಿಂದ, ಬಿ.ವೈ ರಾಘವೇಂದ್ರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಹಾಗೂ ಮಾಜಿ ಸಚಿವ ಶ್ರೀನಿವಾಸ್ ಜೊತೆ ಶಿವಮೊಗ್ಗಕ್ಕೆ ಹೊರಟಿದ್ದರು.
ಆದರೆ ಕೊನೆ ಘಳಿಗೆಯಲ್ಲಿ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಹೋಗಲು ಸಾಧ್ಯವಾಗದೆ ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರು ಬೆಂಗಳೂರಿಗೆ ವಾಪಸ್ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ, ಇಂದು ಶಿವಮೊಗ್ಗದಲ್ಲಿ ಬಿ.ವೈ ರಾಘವೇಂದ್ರ, ತಮ್ಮ ನಾಮಪತ್ರದ ಫೈಲ್ನ್ನು ದೇವರ ಮುಂದಿಟ್ಟು ಪೂಜೆ ನಡೆಸುತ್ತಿದ್ದರು.ಈ ವೇಳೆ ಫೈಲ್ ದೇವರ ಪಾದಗಳಿಂದ ಕೆಳಗೆ ಬಿದ್ದ ಘಟನೆ ಕೂಡ ನಡೆದಿದೆ.