ಬೆಂಗಳೂರು,ಮಾ.28- ನಾವು ಯಾವುದೇ ಸಂಸದರು, ಶಾಸಕರು ಇಲ್ಲವೇ ಸಚಿವರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿಲ್ಲ.
ಸಚಿವ ಸಿ.ಎಸ್.ಪುಟ್ಟರಾಜು, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಆಪ್ತರು ಸೇರಿದಂತೆ ಅನೇಕರ ಮೇಲೆ ನಡೆದಿರುವ ದಾಳಿ ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದರು.
ಇದಕ್ಕೆ ಸ್ಪಷ್ಟನೆ ನೀಡಿರುವ ಐಟಿ ಇಲಾಖೆ ನಾವು ನಿರ್ಧಿಷ್ಟ ರಾಜಕೀಯ ಪಕ್ಷಗಳ ಸಚಿವರು, ಶಾಸಕರು ಮತ್ತು ಸಂಸದರನ್ನು ಗುರಿ ಮಾಡಿಕೊಂಡು ದಾಳಿ ನಡೆಸಿಲ್ಲ. ನಮಗೆ ಸಿಕ್ಕಿರುವ ಮಾಹಿತಿ ಆಧಾರದ ಮೇಲೆ ದಾಳಿ ಮಾಡಲಾಗಿದೆ.ಇದು ರಾಜಕೀಯ ಪ್ರೇರಿತ ಅಲ್ಲ ಎಂದು ಸ್ಪಷ್ಟಪಡಿಸಿದೆ.
ಐಟಿ ಇಲಾಖೆಯಲ್ಲಿ ಗುಪ್ತಚರ ವಿಭಾಗವಿರುತ್ತದೆ.ಇದು ವಿವಿಧ ಮೂಲಗಳಿಂದ ಸಂಗ್ರಹಿಸಿ ನಮಗೆ ಮಾಹಿತಿ ಒದಗಿಸುತ್ತದೆ. ಈ ಆಧಾರದ ಮೇಲೆ ನಿರ್ಧಿಷ್ಟ ಸಮಯವನ್ನು ನೋಡಿಕೊಂಡು ದಾಳಿ ಮಾಡುತ್ತೇವೆಯೆ ಹೊರತು ಯಾವುದೋ ರಾಜಕೀಯ ಪಕ್ಷದ ಮುಖಂಡರು ನೀಡುವ ದೂರಿನ ಆಧಾರದ ಮೇಲೆ ದಾಳಿ ನಡೆಸುವುದಿಲ್ಲ.
ನಮಗೆ ಸಿಕ್ಕಖಚಿತ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಕಾನೂನು ಬದ್ಧವಾಗಿಯೇ ದಾಳಿ ಮಾಡುತ್ತೇವೆ. ಯಾರೊಬ್ಬರೂ ಹೆದರಬೇಕಾದ ಅಗತ್ಯವಿಲ್ಲ. ಈ ಹಿಂದೆ ಅನೇಕರ ಮೇಲೆ ದಾಳಿ ನಡೆಸಿ ನಂತರ ಕ್ಲೀನ್‍ಚಿಟ್ ನೀಡಲಾಗಿದೆ.ಐಟಿ ಇಲಾಖೆ ಎಂದಿಗೂ ಯಾರನ್ನು ಇಲ್ಲವೇ ನಿರ್ಧಿಷ್ಟ ರಾಜಕೀಯ ಪಕ್ಷಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದಿಲ್ಲ. ಇದು ವಿಶ್ವಾಸರ್ಹ ಸ್ವಾಯತ್ತ ಸಂಸ್ಥೆಯಾಗಿದ್ದು, ಜನರ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.