ಭಾರತದಿಂದ ಬಾಹ್ಯಕಾಶ ಸರ್ಜಿಕಲ್ ಸ್ಟ್ರೈಕ್

ನವದೆಹಲಿ, ಮಾ.27- ಬಾಹ್ಯಾಕಾಶದಲ್ಲಿ ಸಕ್ರಿಯವಾಗಿದ್ದ ಆತಂಕಕಾರಿ ಉಪಗ್ರಹವೊಂದನ್ನು ಹೊಡೆದುರುಳಿಸುವ ಮೂಲಕ ಉಪಗ್ರಹ ಧ್ವಂಸ ಕ್ಷಿಪಣಿ ಸಾಮಥ್ರ್ಯವನ್ನು ಭಾರತವು ಇಂದು ವಿಶ್ವಕ್ಕೆ ಅನಾವರಣಗೊಳಿಸುವ ಮೂಲಕ ತನ್ನ ಅಗಾಧ ಶಕ್ತಿ ಪ್ರದರ್ಶಿಸಿದೆ. ಇದನ್ನು ಬಾಹ್ಯಾಕಾಶ ಸರ್ಜಿಕಲ್ ಸ್ಟ್ರೈಕ್ ಎಂದೇ ಬಣ್ಣಿಸಲಾಗುತ್ತಿದೆ. ಭಾರತದ ಈ ಅಂತರಿಕ್ಷ ಶಕ್ತಿ-ಸಾಮಥ್ರ್ಯಕ್ಕೆ ಇಡೀ ವಿಶ್ವವೇ ನಿಬ್ಬೆರಗಾಗಿದೆ.

ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಇದುವರೆಗೆ ಈ ಮಹತ್ವದ ಸಾಧನೆ ಮಾಡಿತ್ತು. ಈಗ ಭಾರತವು ವೈರಿಗಳ ಉಪಗ್ರಹ ಧ್ವಂಸ ಕ್ಷಿಪಣಿ ದಾಳಿ ಸಾಮಥ್ರ್ಯದಲ್ಲಿ ಯಶಸ್ವಿಯಾಗುವ ಮೂಲಕ ಎ ಸ್ಯಾಟ್ ಮಿಸೈಲ್ ಹೊಂದಿದ ಜಗತ್ತಿನ ನಾಲ್ಕನೆ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಾಜಧಾನಿ ದೆಹಲಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಈ ಮಹತ್ವದ ವಿಷಯವನ್ನು ತಿಳಿಸುವ ಮೂಲಕ ಭಾರತೀಯರು ಅತ್ಯಂತ ಹೆಮ್ಮೆಯಿಂದ ಬೀಗುವಂತಾಗಿದೆ.

ಲೈವ್ ಸ್ಯಾಟಲೈಟ್‍ಅನ್ನು ಹೊಡೆದುರುಳಿಸುವ ಮೂಲಕ ಉಪಗ್ರಹ ಧ್ವಂಸ ಕ್ಷಿಪಣಿ ಸಾಮಥ್ರ್ಯವನ್ನು ಭಾರತ ಇಂದು ಪ್ರದರ್ಶಿಸಿದೆ ಎಂದು ಮೋದಿ ಹೆಮ್ಮೆಯಿಂದ ಘೋಷಿಸಿದರು.

ಅಂತರಿಕ್ಷದಲ್ಲಿ ನಡೆದ ಮಿಷನ್ ಶಕ್ತಿ ಕಾರ್ಯಾಚರಣೆಯು ಯಾವುದೇ ದೇಶದ ವಿರುದ್ಧ ಕೈಗೊಂಡಿದ್ದಲ್ಲ. ದೇಶದ ರಕ್ಷಣೆಗಾಗಿ ಅನಾವರಣಗೊಳಿಸಿದ ಮಹತ್ವದ ಭಾರತದ ಶಕ್ತಿ ಪ್ರದರ್ಶನ ಇದಾಗಿದೆ ಎಂದು ಮೋದಿ ಹೇಳಿದರು.

ಅಂತರಿಕ್ಷದಲ್ಲಿ 300 ಕಿಲೋ ಮೀಟರ್ ದೂರದಲ್ಲಿದ್ದ ಆತಂಕಕಾರಿ ಉಪಗ್ರಹವನ್ನು ಕೇವಲ ಮೂರೇ ನಿಮಿಷಗಳಲ್ಲಿ ಹೊಡೆದುರುಳಿಸಲಾಗಿದೆ. ಇದು ಅತ್ಯಂತ ಕ್ಲಿಷ್ಟಕರ ಕಾರ್ಯಾಚರಣೆಯಾಗಿದೆ. ಇದರಲ್ಲಿ ಭಾರತ ಯಶಸ್ವಿಯಾಗುವ ಮೂಲಕ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳ ಅತ್ಯಾಧುನಿಕ ಬಾಹ್ಯಾಕಾಶ ರಕ್ಷಣಾ ತಂತ್ರಜ್ಞಾನ ಸಾಲಿಗೆ ಸೇರ್ಪಡೆಯಾಗಿದೆ ಎಂದು ಮೋದಿ ಹೇಳಿದರು.

ಲೋಯರ್ ಅರ್ಥ್ ಆರ್ಬಿಟ್ ಸ್ಯಾಟಲೈಟ್ (ಭೂಮಿಗೆ ತೀರ ಹತ್ತಿರದ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುವ ಉಪಗ್ರಹ) ಅನ್ನು ಗುರಿಯಾಗಿರಿಸಿಕೊಂಡು ಉಪಗ್ರಹ ಧ್ವಂಸ ಕ್ಷಿಪಣಿ ನಡೆಸಿದ ನಿಖರ ದಾಳಿ ಅತ್ಯಂತ ಯಶಸ್ವಿಯಾಯಿತು. ಕೇವಲ ಮೂರೇ ನಿಮಿಷಗಳಲ್ಲಿ ಆ ಉಪಗ್ರಹ ನುಚ್ಚು ನೂರಾಯಿತು ಎಂದು ಮೋದಿ ವಿವರಿಸಿದರು.
ಕೇಂದ್ರ ರಕ್ಷಣಾ ಇಲಾಖೆಯ ರಕ್ಷಣಾ ಸಂಶೋಧನೆ ಮತ್ತು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ