ಗೋವಾದಲ್ಲಿ ಬಿಜೆಪಿಯೊಂದಿಗೆ ವಿಲೀನವಾದ ಎಂಜಿಪಿ

ಪಣಜಿ, ಮಾ.27- ಕರಾವಳಿ ರಾಜ್ಯ ಗೋವಾದಲ್ಲಿ ರಾತ್ರೋ ರಾತ್ರಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದ್ದು , ಆಡಳಿತಾರೂಢ ಬಿಜೆಪಿ ಸರ್ಕಾರದ ಬಲವರ್ಧನೆಯಾಗಿದೆ.

ಮಾಜಿ ಮುಖ್ಯಮಂತ್ರಿ ದಿ.ಮನೋಹರ್ ಪರಿಕ್ಕರ್ ಅವರ ಸಾವಿನ ಬಳಿಕ ರಾಜಕೀಯವಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಗೋವಾದಲ್ಲಿ ಬಿಜೆಪಿಯ ಮೈತ್ರಿ ಪಕ್ಷ ಎಂಜಿಪಿಯ ಇಬ್ಬರು ಶಾಸಕರು ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೆ ಮೈತ್ರಿ ಪಕ್ಷ ಎಂಜಿಪಿ ಬಿಜೆಪಿಯೊಂದಿಗೆ ವಿಲೀನ ಕೂಡ ಆಗಿದೆ. ಆ ಮೂಲಕ ಗೋವಾದಲ್ಲಿ ಬಿಜೆಪಿ ಶಾಸಕರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ನೂತನ ಸಿಎಂ ಪ್ರಮೋದ್ ಸಾವಂತ್ ನೇತೃತ್ವದ ಹೊಸ ಸರ್ಕಾರ ಮತ್ತಷ್ಟು ಸದೃಢಗೊಂಡಂತಾಗಿದೆ.

ಗೋವಾದಲ್ಲಿ ರಾತ್ರೋ ರಾತ್ರಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆ ಮತ್ತೊಂದು ಸುತ್ತಿನ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು , ಈ ಬಗ್ಗೆ ಬಿಜೆಪಿ ವಿರುದ್ಧ ಕಿಡಿಕಾರಿರುವ ಗೋವಾ ಕಾಂಗ್ರೆಸ್, ಬಿಜೆಪಿಯ ಬೆದರಿಕೆ ರಾಜಕಾರಣ ಮತ್ತೊಮ್ಮೆ ಸಾಬೀತು, ಎಲ್ಲ ಮೈತ್ರಿ ಪಕ್ಷಗಳಿಗೂ ಇದು ಎಚ್ಚರಿಕೆ ಕರೆಗಂಟೆ ಎಂದು ಹೇಳಿದೆ.

ಸ್ಥಿರ ಸರ್ಕಾರಕ್ಕಾಗಿ ಇಬ್ಬರು ಎಂಜಿಪಿ ಶಾಸಕರು ಬಿಜೆಪಿ ಸೇರಿದ್ದಾರೆ. ಆ ಮೂಲಕ ಗೋವಾ ವಿಧಾನಸಭೆಯಲ್ಲಿ ನಮ್ಮ ಬಲ 14ಕ್ಕೆ ಏರಿಕೆಯಾಗಿ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದರು.

ಎಂಜಿಪಿ ಶಾಸಕರಾದ ಮನೋಹರ್ ಅಜಗಾಂವ್ಕರ್ ಮತ್ತು ದೀಪಕ್ ಪಾವಸ್ಕರ್ ಅವರು ಗೋವಾ ವಿಧಾನಸಭೆ ಸ್ಪೀಕರ್ ಮೈಕಲ್ ಲೊಬೊ ಅವರಿಗೆ ತಡರಾತ್ರಿ 1.45ರ ಸುಮಾರಿಗೆ ಪತ್ರವೊಂದನ್ನು ನೀಡಿ ಬಿಜೆಪಿಯೊಂದಿಗೆ ಎಂಜಿಪಿಯನ್ನು ವಿಲೀನಗೊಳಿಸುವಂತೆ ಮನವಿ ಮಾಡಿದ್ದರು.

ಸ್ಪೀಕರ್ ಅವರು ಅದಕ್ಕೆ ಸಮ್ಮತಿ ಸೂಚಿಸಿದ್ದು, ಇದೀಗ ಅದಕ್ಕೆ ಬಿಜೆಪಿ ಬಲ 14ಕ್ಕೆ ಏರಿದೆ. ಎಂಜಿಪಿಯ ಮೂವರು ಶಾಸಕರಲ್ಲಿ ಇಬ್ಬರು ಪತ್ರಕ್ಕೆ ಸಹಿ ಮಾಡಿದ್ದರೆ ಹಾಲಿ ಉಪ ಮುಖ್ಯಮಂತ್ರಿ ಸುದಿನ್ ದವಾಲಿಕರ್ ಅವರು ಮಾತ್ರ ಪತ್ರಕ್ಕೆ ಸಹಿ ಮಾಡಲು ಸಿದ್ಧರಿಲ್ಲ ಎಂದಿದ್ದಾರೆ.

ಮನೋಹರ್ ಪರಿಕ್ಕರ್ ಅವರು ಇತ್ತೀಚೆಗಷ್ಟೇ ಅನಾರೋಗ್ಯದ ಕಾರಣ ನಿಧನರಾದ ನಂತರ ಅವರ ಅಂತ್ಯಕ್ರಿಯೆಯ ದಿನ ರಾತ್ರಿಯೇ ಬಿಜೆಪಿ ವಿಧಾನಸಭೆ ಸ್ಪೀಕರ್ ಆಗಿದ್ದ ಡಾ.ಪ್ರಮೋದ್ ಸಾವಂತ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿತ್ತು.

ಕಾಂಗ್ರೆಸ್ ಆಕ್ರೋಶ: ಈ ಬಗ್ಗೆ ಬಿಜೆಪಿ ವಿರುದ್ಧ ಕಿಡಿಕಾರಿರುವ ಗೋವಾ ಕಾಂಗ್ರೆಸ್, ಬಿಜೆಪಿಯ ಬೆದರಿಕೆ ರಾಜಕಾರಣ ಮತ್ತೊಮ್ಮೆ ಸಾಬೀತು, ಎಲ್ಲ ಮೈತ್ರಿ ಪಕ್ಷಗಳಿಗೂ ಇದು ಎಚ್ಚರಿಕೆ ಕರೆಗಂಟೆ ಎಂದು ಹೇಳಿದೆ.

ಬಿಜೆಪಿ ಮೈತ್ರಿ ಪಕ್ಷ ಎಂಜಿಪಿಯ ಇಬ್ಬರು ಶಾಸಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಇದರು ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಗೋವಾ ಕಾಂಗ್ರೆಸ್ ಮುಖಂಡ ಸುನಿಲ್ ಕೌತೇಕರ್ ಬಿಜೆಪಿ ಕರಾಳ ಮುಖ ಮತ್ತೊಮ್ಮೆ ಬಯಲಾಗಿದೆ. ಎಂಜಿಪಿ ಇಬ್ಬರು ಶಾಸಕರನ್ನು ಸೆಳೆಯುವ ಮೂಲಕ ಬಿಜೆಪಿ ಮತ್ತೊಮ್ಮೆ ತನ್ನ ಬೆದರಿಕೆ ರಾಜಕೀಯವನ್ನು ಮುಂದುವರೆಸಿದೆ. ನಿಜಕ್ಕೂ ಎಲ್ಲ ಮೈತ್ರಿ ಪಕ್ಷಗಳಿಗೂ ಇದು ಎಚ್ಚರಿಕೆಯ ಕರೆ ಗಂಟೆ ಎಂದು ಅವರು ಕಿಡಿಕಾರಿದ್ದಾರೆ.

ಸಾವಂತ್ ಸಮರ್ಥನೆ: ಸ್ಥಿರ ಸರ್ಕಾರಕ್ಕಾಗಿ ಇಬ್ಬರು ಎಂಜಿಪಿ ಶಾಸಕರು ಬಿಜೆಪಿ ಸೇರಿದ್ದಾರೆ. ಆ ಮೂಲಕ ಗೋವಾ ವಿಧಾನಸಭೆಯಲ್ಲಿ ನಮ್ಮ ಬಲ 14ಕ್ಕೆ ಏರಿಕೆಯಾಗಿ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದರು.

ಎಂಜಿಪಿಯ ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಾ ಸಿಎಂ ಪ್ರಮೋದ್ ಸಾವಂತ್, ಸ್ಥಿರ ಸರ್ಕಾರಕ್ಕಾಗಿ ಇಬ್ಬರು ಎಂಜಿಪಿ ಶಾಸಕರು ಬಿಜೆಪಿ ಸೇರಿದ್ದಾರೆ. ಆ ಮೂಲಕ ಗೋವಾ ವಿಧಾನಸಭೆಯಲ್ಲಿ ನಮ್ಮ ಬಲ 14ಕ್ಕೆ ಏರಿಕೆಯಾಗಿ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ