ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮÀ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡಿದರೆ ಸರ್ಕಾರದ ವಿರುದ್ಧ ಧರ್ಮ ಯುದ್ಧ: ರಂಭಾಪುರಿ ಶ್ರೀ ಎಚ್ಚರಿಕೆ

 

ಬೆಂಗಳೂರು, ಮಾ.19-ನ್ಯಾಯಮೂರ್ತಿ ನಾಗಮೋಹನ್‍ದಾಸ್ ವರದಿಯನ್ನು ಸಂಪುಟದಲ್ಲಿ ಅಂಗೀಕರಿಸಿ ಕೇಂದ್ರಕ್ಕೆ ರಾಜ್ಯಸರ್ಕಾರಕ್ಕೆ ಕಳುಹಿಸಿಕೊಟ್ಟರೆ ಸರ್ಕಾರದ ವಿರುದ್ಧ ಧರ್ಮ ಯುದ್ಧ ನಿಶ್ಚಿತ ಎಂದು ರಂಭಾಪುರಿ ಪೀಠದ ಶ್ರೀ ವೀರಸೋಮೇಶ್ವರ ಸ್ವಾಮೀಜಿ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ದ ಧರ್ಮಯುದ್ಧ ಸಾರಲಾಗುವುದು. ಈಗಾಗಲೇ ನಮ್ಮ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಒಂದು ವೇಳೆ ಮಾನ್ಯತೆ ಕೊಡುವುದಾದರೆ ವೀರಶೈವ-ಲಿಂಗಾಯತ ಎರಡನ್ನೂ ಸೇರಿಸಿ ಕೊಡಿ ಎಂದು ಒತ್ತಾಯಿಸಿದ್ದೇವೆ ಎಂದರು.

ಲಿಂಗಾಯತ ಧರ್ಮದಲ್ಲಿ 99 ಒಳಪಂಗಡಗಳನ್ನು ಸೇರಿಸಿದ್ದಾರೆ. 99 ಜಾತಿಗಳು ಇರುವುದು ಸುಳ್ಳು. ಆಯಾ ಜಾತಿ ಮುಖಂಡರನ್ನು ಕೇಳಿದಾಗ ಸತ್ಯ ತಿಳಿಯುತ್ತದೆ. ಲಿಂಗಾಯತ ಧರ್ಮದ ಹೋರಾಟಗಾರರು ದ್ವಂದ್ವ ಹುಟ್ಟಿಸಿ ಜಾತಿಯನ್ನು ಛಿದ್ರಗೊಳಿಸಲು ಮುಂದಾಗಿದ್ದಾರೆ.

 

ಸರ್ಕಾರ ಸಮಿತಿ ರಚನೆ ಮಾಡಿದ್ದೇ ಒಂದು ದೊಡ್ಡ ತಪ್ಪು. ತಜ್ಞರ ಸಮಿತಿಯಲ್ಲಿರುವ ಸದಸ್ಯರು ಲಿಂಗಾಯತ ಧರ್ಮದ ಹೋರಾಟದಲ್ಲಿ ಗುರುತಿಸಿಕೊಂಡವರು. ಮಠಾಧೀಶರ ಮಾತು ಕೇಳಿ ಮಾನ್ಯತೆ ಅಂಗೀಕಾರ ಮಾಡಬಾರದು. ಒಂದು ವೇಳೆ ಅಂಗೀಕರಿಸಿದರೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರಿಗೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಹೇಳಿದರು.

ಲಿಂಗಾಯತ ಮತ್ತು ವೀರಶೈವ ಎರಡೂ ಬಣದ ತಲಾ ಮೂರು ಜನರನ್ನು ಸೇರಿಸಿ ಒಂದು ಸಮಿತಿ ರಚನೆ ಮಾಡಲಿ. ಸಮಿತಿಯಿಂದ ವರದಿ ಬಂದ ನಂತರ ನಿರ್ಣಯ ಕೈಗೊಳ್ಳಲಿ ಎಂದು ಹೇಳಿದರು.

ಧರ್ಮ ಒಡೆಯುವ ಇಚ್ಛಾಶಕ್ತಿ ತೋರಿಸಿದಷ್ಟು ಮಹದಾಯಿಗೆ ತೋರಲಿ. ಮುಖ್ಯಮಂತ್ರಿಗಳಿಗೆ ಧರ್ಮ ಒಡೆಯಲು ಕೆಲವರು ಪೆÇ್ರೀತ್ಸಾಹ ನೀಡಿದ್ದಾರೆ. ಅವರ ನಡೆ ಸರಿಯಲ್ಲ ಎಂದು ಕಿಡಿಕಾರಿದರು.

ಕೆಲವೊಂದು ವೇಷಧಾರಿಗಳನ್ನು ಮುಂದಿಟ್ಟುಕೊಂಡು ಧರ್ಮ ಒಡೆಯಲು ಮುಂದಾಗುತ್ತಿದೆ. ರಾಜ್ಯಸರ್ಕಾರ ಮಾನ್ಯತೆ ಅಂಗೀಕರಿಸಿದರೆ ಕೇಂದ್ರ ಇದನ್ನು ತಿರಸ್ಕರಿಸುತ್ತದೆ.

ಮುಖ್ಯಮಂತ್ರಿಯವರಿಗೆ ಎಲ್ಲಾ ಗೊತ್ತಿದ್ದು, ಇಂತಹ ವಿಚಾರಗಳಿಗೆ ಮಾನ್ಯತೆ ನೀಡುವುದು ಎಷ್ಟು ಸಮಂಜಸ. ಲಿಂಗಾಯತ ವೀರಶೈವ ಧರ್ಮದ ಒಂದು ಭಾಗ. ಬಸವಣ್ಣ ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿ ವೀರಶೈವ ತತ್ವಗಳಿಗೆ ಪ್ರಭಾವಿತರಾಗಿ ಆ ಧರ್ಮ ಸೇರಿದರು.

ಬಸವಣ್ಣನವರ ವಚನಗಳೇ ವೀರಶೈವ ಧರ್ಮದ ಇತಿಹಾಸ ಸಾರುತ್ತವೆ. ಪ್ರತ್ಯೇಕ ಧರ್ಮದ ಹೋರಾಟಗಾರರ ವಿರುದ್ಧ ಶ್ರೀಗಳು ತೀವ್ರ ವಾಗ್ದಾಳಿ ನಡೆಸಿದರು.

ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದು ಅಪರಾಧ. ಹಾನಗಲ್ಲ ಕುಮಾರಸ್ವಾಮೀಜಿಗಳು ಆದರ್ಶಗಳನ್ನು ತಿರಸ್ಕರಿಸಿ ಸ್ವಾರ್ಥ ಸಾಧನೆಗೆ ಮುಂದಾಗಿದ್ದಾರೆ. ಪಂಚಾಚಾರ್ಯರ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಲಿಂಗಾಯತ ಧರ್ಮದಲ್ಲಿ ಗುರುತಿಸಿಕೊಂಡ ಸ್ವಾಮೀಜಿಗಳ ವಿರುದ್ಧ ಹರಿಹಾಯ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ