ನವದೆಹಲಿ:ಮಾ-19: ಆರುಷಿ ಮತ್ತು ಮನೆಕೆಲಸಗಾರ ಹೇಮರಾಜ್ ಹತ್ಯೆ ಪ್ರಕರಣ ಸಂಬಂಧ ದಂಪತಿಗಳಾದ ರಾಜೇಶ್ ತಲ್ವಾರ್ ಹಾಗೂ ನೂಪುರ್ ತಲ್ವಾರ್ ಅವರನ್ನು ವಿಚಾರಣೆ ನಡೆಸುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ಸ್ವೀಕರಿಸಿದೆ.
ಹೇಮರಾಜ್ ಅವರ ಪತ್ನಿ ಖುಂಕಲಾ ಬಂಜಾದೆ ಅವರು ತಲ್ವಾರ್ ದಂಪತಿಗಳ ವಿಚಾರಣೆಗಾಗಿ ಮನವಿ ಸಲ್ಲಿಸಿದ್ದರು. ಅರ್ಜಿ ಸ್ವೀಕರಿಸಿದ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠವು ತಲ್ವಾರ್ ದಂಪತಿಗಳಿಗೆ ನೋಟೀಸ್ ನೀಡಿದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ . ಕಳೆದ ಅಕ್ಟೋಬರ್ ನಲ್ಲಿ ತಲ್ವಾರ್ ದಂಪತಿಗಳನ್ನು ಖುಲಾಸೆಗೊಳಿಸಿತ್ತು.
ಇದಾಗಿ ಹೇಮರಾಜ್ ಪತ್ನಿ ಖುಂಕಲಾ ತಲ್ವಾರ್ ದಂಪತಿಗಳನ್ನು ಮರುವಿಚಾರಣೆ ನಡೆಸುವಂತೆ ಕೋರಿ ಡಿಸೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದಾದ ಕೆಲ ದಿನಗಳ ಬಳಿಕ ಹತ್ಯೆ ಪ್ರಕರಣ ಸಂಬಂಧ ತಲ್ವಾರ್ ದಂಪತಿಗಳನ್ನು ಖುಲಾಸೆಗೊಳಿಸುವುದನ್ನು ಪ್ರಶ್ನಿಸಿ ಸಿಬಿಐ ಸಹ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ಜೋಡಿ ಕೊಲೆ ಸಂಬಂಧ ಪೂರಕ ಪುರಾವೆಗಳಿಲ್ಲದೆ ಇರುವ ಹಿನ್ನೆಲೆಯಲ್ಲಿ ಅಲಹಬಾದ್ ಹೈಕೋರ್ಟ್ ಕಳೆದ ಅಕ್ಟೋಬರ್ ನಲ್ಲಿ ತಲ್ವಾರ್ ದಂಪತಿಗಳನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿತ್ತು.