ನವದೆಹಲಿ: ಭಾರತ ಮಾತಾ ಕೀ ಜೈ ಎಂದು ಘೋಷಣೆ ಕೂಗಿದಾಕ್ಷಣ ಅದು ದೇಶಭಕ್ತಿಯಲ್ಲ; ಎಲ್ಲರಿಗಾಗಿ ಜೈ ಎಂಬುದೇ ದೇಶ ಭಕ್ತಿ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಹೊಸ ವ್ಯಾಖ್ಯಾನ ನೀಡಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ಭಾರತ್ ಮಾತಾ ಕೀ ಜೈ ಅಂದರೆ ರಾಷ್ಟ್ರಪ್ರೇಮಿಯಾಗಲು ಸಾಧ್ಯವಿಲ್ಲ. ಎಲ್ಲರಿಗಿಗಾಗಿ ಜೈ ಅನ್ನೋದೇ ನಿಜವಾದ ರಾಷ್ಟ್ರಪ್ರೇಮ. ಧರ್ಮ, ಜಾತಿ, ನಗರ, ಹಳ್ಳಿ ಎಂದು ತಾರತಮ್ಯ ಮಾಡುವುದನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಯುವಕರೇ ಮುಂದಾಗಬೇಕು. ದೇಶದಲ್ಲಿ ಎಲ್ಲರೂ ಒಂದೇ ಎಂದು ಭಾವಿಸಿ ಪ್ರೀತಿಸಬೇಕು ಎಂದರು.
ಭ್ರಷ್ಟಾಚಾರ, ಅನಕ್ಷರತೆ, ಭಯ, ಹಸಿವು, ಜಾತೀಯತೆ ಮುಕ್ತ ಹೊಸ ಭಾರತ ನಿರ್ಮಾಣಕ್ಕೆ ಯುವಜನತೆ ಪಣ ತೊಡಬೇಕು ಎಂದು ಕರೆ ನೀಡಿದರು.
Nationalism does not mean Bharat mata ki Jai: Venkaiah Naidu