ವಿಜಯ ಸಂಕಲ್ಪ ಸಭೆ: ಇಂದಿನಿಂದ ದೇಶಾದ್ಯಂತ ಹಲವೆಡೆ ಬಿಜೆಪಿ ರ್ಯಾಲಿ

ಹೊಸದಿಲ್ಲಿಬಿಜೆಪಿಯ ಲೋಕಸಭಾ ಚುನಾವಣೆ ಪ್ರಚಾರ ಅಭಿಯಾನ ‘ವಿಜಯ ಸಂಕಲ್ಪ ಸಭಾ’ಗೆ ಮಾರ್ಚ್‌ 24ರಂದು ಚಾಲನೆ ನೀಡಲಾಗುವುದು ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಇತರ ಹಿರಿಯ ನಾಯಕರು ಇಂದಿನಿಂದ ಮಾರ್ಚ್ 26ರ ವರೆಗೆ ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ ವಿಜಯ ಸಂಕಲ್ಪ ಸಭಾ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ನಖ್ವಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಂದು ಆಗ್ರಾದಲ್ಲಿ ಹಾಗೂ ಮಾರ್ಚ್ 26ರಂದು ಮೊರಾದಾಬಾದ್‌ನಲ್ಲಿ ಅಮಿತ್ ಶಾ, ಗೃಹಸಚಿವ ರಾಜನಾಥ್ ಸಿಗ್ ಅವರು ಇಂದು ಲಖನೌದಲ್ಲಿ ಹಾಗೂ ಮಾರ್ಚ್ 26ರಂದು ದಿಲ್ಲಿಯಲ್ಲಿ ವಿಜಯ ಸಂಕಲ್ಪ ಸಭಾ ಉದ್ದೇಶಿಸಿ ಮಾತನಾಡಲಿದ್ದಾರೆ.

ನಿತಿನ್ ಗಡ್ಕರಿ ಅವರು ಇಂದು ನಾಗಪುರದಲ್ಲಿ, ಸುಷ್ಮಾ ಸ್ವರಾಜ್ ಅವರು ಇಂದು ಬುದ್ಧ ನಗರದಲ್ಲಿ ಹಾಗೂ ಮಾರ್ಚ್ 26ರಂದು ಗಾಜಿಯಾಬಾದ್‌ನಲ್ಲಿ ವಿಜಯ ಸಂಕಲ್ಪ ರ‍್ಯಾಲಿ ನಡೆಸಲಿದ್ದಾರೆ.

ರವಿಶಂಕರ್ ಪ್ರಸಾದ್ ಅವರು ಇಂದು ಪಟನಾದಲ್ಲಿ ಹಾಗೂ ಮಾರ್ಚ್ 26ರಂದು ಪಶ್ಚಿಮ ಬಂಗಾಳದಲ್ಲಿ, ಜೆಪಿ ನಡ್ಡಾ ಅವರು ಇಂದು ಸಂಭಾಲ್‌ನಲ್ಲಿ ಮತ್ತು ಮಾರ್ಚ್ 26ರಂದು ಶಹಜಹಾನ್‌ಪುರದಲ್ಲಿ, ಪೀಯೂಷ್ ಗೋಯಲ್ ಅವರು ಇಂದು ಬರೇಲಿಯಲ್ಲಿ ಮತ್ತು 26ರಂದು ತಮಿಳುನಾಡಿನಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಕಾಶ್ ಜಾವಡೇಕರ್ ಇಂದು ಕಾನ್ಪುರದಲ್ಲಿ, 26ರಂದು ಪುಣೆಯಲ್ಲಿ, ತಾವರ್‌ಚಂದ್ ಗೆಹ್ಲೋಟ್ ಅವರು ಇಂದು ಉಜ್ಜೈನಿಯಲ್ಲಿ ಮತ್ತು 26ರಂದು ತೆಹ್ರಿ ಘರ್ವಾಲ್‌ನಲ್ಲಿ, ಧರ್ಮೇಂದ್ರ ಪ್ರಧಾನ್ ಅವರು ಇಂದು ಕಟಕ್‌ನಲ್ಲಿ, ಮಾರ್ಚ್ 26ರಮದು ಬಾಲಸೋರ್‌ನಲ್ಲಿ, ನರೇಂದ್ರ ಸಿಂಗ್ ತೋಮರ್ ಅವರು ಇಂದು ಗ್ವಾಲಿಯರ್‌ನಲ್ಲಿ ಮತ್ತು 26ರಂದು ಮುರಾನಿಯಾದಲ್ಲಿ ವಿಜಯ ಸಂಕಲ್ಪ ಸಭಾ ಉದ್ದೇಶಿಸಿ ಮಾತನಾಡಲಿದ್ದಾರೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಂದು ಕಾನ್ಪುರದಲ್ಲಿ, ನಾಡಿದ್ದು ಬಧೋಹಿ-ಜಾನ್‌ಪುರದಲ್ಲಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಹೈದರಾಬಾದ್‌ನಲ್ಲಿ 26ರಂದು ಉಡುಪಿಯಲ್ಲಿ ವಿಜಯ ಸಂಕಲ್ಪ ಸಭಾದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮುಕ್ತಾರ್ ಅಬ್ಬಾಸ್ ನಖ್ವಿ, ಶಿವರಾಜ್ ಸಿಂಗ್ ಚೌಹಾಣ್‌, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕೂಡ ಹಲವೆಡೆ ವಿಜಯ ಸಂಕಲ್ಪ ಸಭಾ ನಡೆಸಲಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ದೇಶದ ಭದ್ರತೆ, ಘನತೆ ಮತ್ತು ಸಮೃದ್ಧಿಗಾಗಿ ಕೈಗೊಂಡ ಕ್ರಮಗಳ ಬಗ್ಗೆ ಜನತೆಗೆ ವಿವರಿಸಲಾಗುವುದು ಎಂದು ಬಿಜೆಪಿ ನಖ್ವಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ