ನವದೆಹಲಿ: ಪುಲ್ವಾಮಾ ದಾಳಿ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ದಾಳಿ ನಡೆದ ಸಂದರ್ಭದಲ್ಲಿ ಮೋದಿಯವರು ಗೋಮಾಂಸ ತಿಂದು ಮಲಗಿದ್ದರಾ ಎಂದು ಪ್ರಶ್ನಿಸಿದ್ದಾರೆ.
ಸಭೆಯೊಂದರಲ್ಲಿ ಮಾತನಾಡಿದ ಅವರು, ಪುಲ್ವಾಮಾದಲ್ಲಿ 50 ಕೆಜಿ ಆರ್ಡಿಎಕ್ಸ್ ಸ್ಫೋಟ ಆಗಿದ್ದು ಮೋದಿಗಾಗಲೀ, ರಾಜನಾಥ್ ಸಿಂಗ್ಗಾಗಲೀ ಗೊತ್ತೇ ಆಗಲಿಲ್ಲ. ದಾಳಿ ನಡೆದಾಗ ಭರ್ಜರಿ ಗೋಮಾಂಸ ಬಿರ್ಯಾನಿ ಊಟ ಮಾಡಿ ಮಲಗಿದ್ದಿರಾ ಎಂದು ಪ್ರಶ್ನಿಸಿದ್ದಾರೆ.
ಇನ್ನು ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ ಬಾಲಕೋಟ್ನಲ್ಲಿ ಬಾಂಬ್ ದಾಳಿ ನಡೆಸಿದೆ. ಅಲ್ಲಿ ಸತ್ತ ಉಗ್ರರ ಸಂಖ್ಯೆ ಕೇಳಿದರೆ ಅಮಿತ್ ಷಾ 250 ಎನ್ನುತ್ತಾರೆ. ಎನ್ಟಿಆರ್ಪಿ 300 ಮೊಬೈಲ್ಗಳನ್ನು ಟ್ಯಾಪ್ ಮಾಡಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳುತ್ತಾರೆ. ಯಾವುದು ಸತ್ಯ ಎಂದು ವ್ಯಂಗ್ಯವಾಡಿದ್ದಾರೆ.
Beef biryani and sleep: Assaduddin Owaisi slams PM Narendra Modi over Pulwama attack