ಲೋಕಸಭಾ ಅಖಾಡಕ್ಕಿಳಿದ ಕನ್ಹಯ್ಯ ಕುಮಾರ್

ಪಾಟ್ನಾ: ಜೆಎನ್​ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್​ ಇದೀಗ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಕನ್ಹಯ್ಯ ಬಿಹಾರದ ಬೆಗುಸರೈ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ಎಡ ಪಕ್ಷಗಳ ಬೆಂಬಲಿತ ಅಭ್ಯರ್ಥಿಯಾಗಿ ಕನ್ಹಯ್ಯ ಕುಮಾರ್ ಕಣಕ್ಕೆ ಇಳಿಯುತ್ತಿದ್ದು, ಕ್ಷೇತ್ರದಲ್ಲಿ ತೀವ್ರ ಹಣಾಹಣಿ ನಡೆಯಲಿದೆ.ಬಿಹಾರ ಪ್ರತಿಪಕ್ಷಗಳ ಹಾಗೂ ಮಹಾಘಟಬಂಧನ್ ​ಅಭ್ಯರ್ಥಿಯಾಗಿ ಕನ್ಹಯ್ಯ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದ್ದರು. ಆದ್ರೆ ಬೆಗುಸರೈ ಕ್ಷೇತ್ರ ಆರ್​ಜೆಡಿಯ ಪಾಲಾಗಿದೆ. ಅಂತೆಯೇ ಸಿಪಿಐ, ಸಿಪಿಐಎಂ ಅಭ್ಯರ್ಥಿಯಾಗಿ ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಸ್ಪರ್ಧೆಗೆ ಇಳಿಯಲಿದ್ದಾರೆ.

Kanhaiya Kumar, Is Left Candidate, Begusarai After Coalition Snub

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ