12ನೇ ಸೀಸನ್ ಐಪಿಎಲ್ ಹೈವೋಲ್ಟೇಜ್ ಪಂದ್ಯದೊಂಡಿಗೆ ಆರಂಭಗೊಂಡಿದೆ . ಇಂದು 2ನೇ ದಿನ ಎರಡು ಪಂದ್ಯಗಳು ನಡೆಯಲಿದ್ದು ಅಭಿಮಾನಿಗಳ ಪಾಳಿಗೆ ಸೂಪರ್ ಸಂಡೆಯಾಗಿದೆ. ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ಅಂಗಳದಲ್ಲಿ ಆತಿಥೇಯ ಕೊಲ್ಕತ್ತಾ ನೈಟ್ ರೈಡರ್ಸ್ – ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನ ಎದುರಿಸಲಿದೆ.
ಇಂದಿನ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ಮುಖಾಮುಖಿಯಾಗುತ್ತಿದ್ದು. ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯುತ್ತಿರುವ ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕತ್ತಾ ನೈಟ್ರೈಡರ್ಸ್ ತಂಡ ಈ ಬಾರಿ ಹೊಸ ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದೆ. ಕಳೆದ ಸೀಸನ್ನಲ್ಲಿ ಒಳ್ಳೆಯ ಪರ್ಫಾಮನ್ಸ್ ಕೊಟ್ಟಿದ್ದ ನೈಟರ್ ರೈಡರ್ಸ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿತ್ತು.
ಯಾವಾಗ ಬೇಕಾದ್ರೂ ಸಿಡಿದು ಬೀಳ್ತಾರೆ ಕೆಕೆಆರ್ ಪ್ಲೇಯರ್ಸ್
ಹೌದು.. ಕೊಲ್ಕತ್ತಾ ನೈಟ್ ರೈಡರ್ಸ್ -ಸನ್ ರೈಸರ್ಸ್ ತಂಡಗಳು ಬೌಲಿಂಗ್ ಹಾಗೂ ಬ್ಯಾಟಿಂಗ್ ಡಿಪಾರ್ಟ್ಮೆಂಟ್ನಲ್ಲಿ ಬಲಿಷ್ಠವಾಗಿವೆ. ಕೆಕೆಆರ್ ತಂಡದ ಕ್ರಿಸ್ ಲೀನ್ ಹಾಗೂ ನರೈನ್ ಸ್ಫೋಟಕ ಆರಂಭ ನೀಡಬಲ್ಲರು. ಕ್ಯಾಪ್ಟನ್ ದಿನೇಶ್ ಕಾರ್ತಿಕ್, ರಾಬಿನ್ ಉತ್ತಪ್ಪ, ನಿತೀಶ್ ರಾಣಾ, ಬ್ರಾಥ್ವೇಟ್ ಅಂತಹ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಕೆಕೆಆರ್ ಹೊಂದಿದೆ. ಸುನೀಲ್ ನರೈನ್, ಕ್ರಿಸ್ ಲೀನ್, ಆಂಡ್ಯ್ರೂ ರಸೆಲ್ ಯಾವಾಗ ಬೇಕಾದ್ರೂ ಸಿಡಿದೇಳಬಹುದು. ಸುನೀಲ್ ನರೈನ್ ಉತ್ತಮ ಬೌಲಿಂಗ್ ಎಕಾನಮಿ ಹೊಂದಿದ್ದು, ಎದುರಾಳಿ ಬ್ಯಾಟ್ಸ್ಮನ್ಗಳಿಗೆ ತಲೆನೋವಾಗಿದ್ದಾರೆ. ಕೆಕೆಆಆರ್ನಲ್ಲಿ ಮ್ಯಾಚ್ ವಿನ್ನಿಂಗ್ ಆಟಗಾರರ ದಂಡೇ ಇದೆ. ಆ್ಯಂಡ್ರೋ ರಸೆಲ್ ಆಲ್ರೌಂಡರ್ ಪರ್ಫಾಮನ್ಸ್ ಕೊಟ್ರೆ.
ಕೆಕೆಆರ್ ತವರಲ್ಲಿ ಸನ್ ರೈಸರ್ಸ್ ಚಾಲೆಂಜ್
ಕಳೆದ ಬಾರಿಯ ರನ್ನರ್ ಆಪ್ ಸನ್ ರೈಸರ್ಸ್ ಫೈನಲ್ನಲ್ಲಿ ಎಡವಿ ಪ್ರಶಸ್ತಿ ಗೆಲ್ಲವ ಅವಕಾಶದಿಂದ ವಂಚತವಾಗಿತ್ತು.ವಾರ್ನರ್ ತಂಡಕ್ಕೆ ಬಂದಿರುವುದು ಆನೆ ಬಲ ಬಂದಂತಾಗಿದೆ. ಇನ್ನೂ ಟಿ20 ಸ್ಪೆಷಲಿಸ್ಟ್ಗಳಾದ ನ್ಯೂಜಿಲೆಂಡ್ನ ಮಾರ್ಟಿನ್ ಗಪ್ಟಿಲ್, ಇಂಗ್ಲೆಂಡ್ನ ಜಾನಿ ಬೇರ್ ಸ್ಟೋ ತಂಡದಲ್ಲಿರುವುದು ಸನ್ ರೈಸರ್ಸ್ಗೆ ಪ್ಲಸ್ ಪಾಯಿಂಟ್. ಆದ್ರೆ, ಇವರಿಬ್ಬರಲ್ಲಿ ಯಾರಿಗೆ ಚಾನ್ಸ್ ಸಿಗುತ್ತೋ ಕಾದು ನೋಡಬೇಕಿದೆ. ವಾರ್ನರ್ ಅನುಪಸ್ಥಿತಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಕೇನ್ ವಿಲಿಯಮ್ಸ್ನ್ ಸನ್ ರೈಸರ್ಸ್ ತಂಡದ ಅಪಾದ್ಭಾಂದವ. ಮಿಡ್ಲ್ ಆರ್ಡರ್ನಲ್ಲಿ ಮನೀಶ್ ಪಾಂಡೆ, ಯೂಸಫ್ ಪಠಾಣ್ ತಂಡಕ್ಕೆ ನೆರವಾಗಬಲ್ಲರು. ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ಭುವನೇಶ್ವರ್ ಕುಮಾರ್ ಮತ್ತು ರಶೀದ್ ಖಾನ್, ಸಿದ್ದಾರ್ಥ್ ಕೌಲ್ ತಂಡದ ಸ್ಟಾರ್ ಬೌಲರ್ಗಳಾಗಿದ್ದಾರೆ. ಶಕೀಬ್ ಅಲ್ ಹಸನ್ ಯಾವುದೇ ಸಮಯದಲ್ಲಿ ಪಂದ್ಯದ ಗತಿಯನ್ನೇ ಬದಲಿಸಬಲ್ಲ ತಾಕತ್ತು ಹೊಂದಿದ್ದಾರೆ.