ಮೊದಲ ಪಂದ್ಯದಲ್ಲೆ ಮುಗ್ಗರಿಸಿ ಬಿದ್ದ ಕೊಹ್ಲಿ ಪಡೆ :ಭಜ್ಜಿ, ಇಮ್ರಾನ್ ದಾಳಿಗೆ ಆರ್ಸಿಬಿ ಉಡೀಸ್

ಐಪಿಎಲ್ 12ನೇ ಸೀಸನ್ ನ್ನ ಮೊದಲ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡ ಹೀನಾಯ ಸೋಲು ಕಂಡಿದೆ. ಚೆನ್ನೈನ ಚೆಪಾಕ್ ಅಂಗಳದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ಶುಭಾರಂಬ ಮಾಡಿತು. ಹಾಗಾದ್ರೆ ಆರ್ಸಿಬಿ ಮೊದಲ ಪಂದ್ಯದಲ್ಲೆ ಹೇಗೆ ಮುಗ್ಗರಿಸಿ ಬಿತ್ತು ಅನ್ನೋದನ್ನ ನಾವ್ ತೋರಿಸ್ತೀವಿ ನೋಡಿ.

ಟಾಸ್ ಸೋತು ಕಣಕ್ಕಿಳಿದ ಆರ್ಸಿಬಿ ತಂಡಕ್ಕೆ ಓಪನರ್ಸ್ಗಳಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಪಾರ್ಥಿವ್ ಪಟೇಲ್ Decent ಓಪನಿಂಗ್ ಕೊಡುವಲ್ಲಿ ಎಡವಿದ್ರು.

ಚೆನ್ನೈಗೆ ಮೊದಲ ಬ್ರೇಕ್ ಕೊಟ್ಟ ಹರ್ಭಜನ್ ಸಿಂಗ್
Slow And Steady  ಇನ್ನಿಂಗ್ಸ್ ಕಟ್ಟುತ್ತಿದ್ದ ಕ್ಯಾಪ್ಟನ್ ವಿರಾಟ್ ಕೊಹ್ಲಿ 6 ರನ್ ಗಳಿಸಿದ್ದಾಗ ಹರ್ಭಜನ ಸಿಂಗ್ ಸಿಂಗ್ ಎಸೆತದಲ್ಲಿ ರವೀಂದ್ರ ಜಡೇಜಾಗೆ ಕ್ಯಾಚ್ ನೀಡಿ ಹೊರ ನಡೆದ್ರು.

ಇದಾದ ಕೆಲವೇ ಹೊತ್ತಿನಲ್ಲಿ ಮೂರನೇ ಕ್ರಮಾಂಕದಲ್ಲಿ ಬಂದಿದ್ದ ಆಲ್ರೌಂಡರ್ ಮೊಯಿನ್ ಅಲಿ 9 ರನ್ಗಳಸಿದ್ದಾಗ ಹರ್ಭಜನ್ಗೆ ಕಾಟ್ ಅಂಡ್ ಬೌಲ್ಡ್ ಆದ್ರು.

ನಾಲ್ಕನೆ ಕ್ರಮಾಂಕದಲ್ಲಿ ಬಂದ ಎಬಿಡಿ ವಿಲಿಯರ್ಸ್ ಹೆಚ್ಚು ಹೊತ್ತು ನಿಲ್ಲದೇ 9 ರನ್ ಗಳಿಸಿದ್ದಾಗ ಭಜ್ಜಿಗೆ ಕಾಟ್ ಅಂಡ್ ಬೌಲ್ಡ್ ಆದ್ರು. ಈ ಆಘಾತದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಶಿಮ್ರಾನ್ ಹೇಟ್ಮರ್ ರನೌಟ್ ಬಲಗೆ ಬಿದ್ರು.

ಆರ್ಸಿಬಿ 17.1 ಓವರ್ಗಳಲ್ಲಿ 70 ರನ್ಗೆ ಆಲೌಟ್
ನಂತರ ಐoತಿeಡಿ ಆರ್ಡರ್ನಲ್ಲಿ ಬಂದ ಶಿವಂ ದುಬೆ 2, ಯಜ್ವಿಂದರ್ ಚಹಲ್ 4, ಕಾಲಿನ್ ಗ್ರಾಂಡ್ ಹೋಮ್ 4, ಉಮೇಶ್ ಯಾದವ್ 1 ರನ್ ಗಳಿಸಿಬೇಗನೆ ಪೆವಿಲಿಯನ್ ಸೇರಿದ್ರು. ಇದರೊಂದಿಗೆ ಆರ್ಸಿಬಿ 17.1 ಓವರ್ಗಳಲ್ಲಿ 70 ರನ್ಗಳಿಗೆ ಆಲೌಟ್ ಆಯಿತು. ಕೇವಲ 70 ರನ್ ಗಳಿಸಿದ ಆರ್ಸಿಬಿ ಐಪಿಎಲ್ನಲ್ಲಿ ಅತಿ ಕಡಿಮೆ ಮೂರನೇ ಸ್ಕೋರ್ ದಾಖಲಿಸಿತು.

ಆರಂಭಿಕ ಆಘಾತ ಅನುಭವಿಸಿದ ಚೆನ್ನೈ ತಂಡ
71 ರನ್ಗಳ ಸುಲಭ ಟಾರ್ಗೆಟ್ ಬೆನ್ನತ್ತಿದ ಚೆನ್ನೈ ತಂಡ ಆರಂಭ ಅಷ್ಟು ಸುಲಭವಾಗಿರಲಿಲ್ಲ. ಓಪನರ್ ಶೇನ್ ವಾಟ್ಸನ್ ಚಹಲ್ಗೆ ಬೌಲ್ಡ್ ಆಗಿ ಪೆವಿಲಿಯನ್ ಸೇರಿದ್ರು. ನಂತರ ಬಂದ ಸುರೇಶ್ ರೈನಾ ಅಂಬಟಿ ರಾಯ್ಡು ಜೊತೆಗೂಡಿ ನಿಧಾನಗತಿಯ ಆಟಕ್ಕೆ ಮೊರೆ ಹೋಗಿ ತಂಡದ ಸ್ಕೋರ್ ಹೆಚ್ಚಿಸಿದ್ರು. ಪವರ್ ಹಿಟ್ಟರ್ ಸುರೇಶ್ ರೈನಾ ಮೊಯಿನ್ ಅಲಿ 19 ರನ್ ಗಳಿಸಿದ್ದಾಗ ಮೊಯಿನ್ ಅಲಿಗೆ ಬಲಿಯಾದ್ರೆ , 28 ರನ್ ಗಳಿಸಿದ ಅಂಬಟಿ ರಾಯ್ಡು ಸಿರಾಜ್ಗೆ ಬೌಲ್ಡ್ ಆದ್ರು. ನಂತರ ಬಂದ ರವಿಂದ್ರ ಜಡೇಜಾ 6 ರನ್ ಮತ್ತು ಕೇದಾರ್ ಜಾಧವ್ ಅಜೇಯ 13 ರನ್ ಗೆಲುವಿನ ದಡ ಸೇರಿಸಿದ್ರು. ಚೆನ್ನೈ ತಂಡ 17.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿ ಶುಭಾರಂಭ ಮಾಡಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ