ಈ ಬಾರಿಯ ಐಪಿಎಲ್ ನಾಲ್ಕು ಅಂಶಗಳಿಂದ ಗಮನ ಸೆಳೆಯುತ್ತಿದೆ . ಈ ನಾಲ್ಕು ಅಂಶಗಳೇ ಈ ಆಟಗಾರರಿಗೆ ಮುಂಬರುವ ವಿಶ್ವಕಪ್ನಲ್ಲಿ ಆಡಲು ಮಾನದಂಡವಾಗಿದೆ. ಹಾಗಾದ್ರೆ ಈ ಬಾರಿಯ ಐಪಿಎಲ್ ಯಾರಿಗೆ ಮತ್ತು ಹೇಗೆಲ್ಲ ಮಹತ್ವದಾಗಿದೆ ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ವಿಶ್ವಕಪ್ನಲ್ಲಿ ಬ್ಯಾಕ್ ಅಪ್ ವಿಕೆಟ್ ಕೀಪರ್ ಯಾರು ?
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಶ್ವಕಪ್ ಆಯ್ಕೆಗೆ ಈ ಬಾರಿಯ ಐಪಿಎಲ್ ಮಾನದಂಡವಲ್ಲ ಎಂದು ಹೇಳಿದ್ದಾರೆ. ಹೀಗಿದ್ದು ಮುಂಬರುವ ವಿಶ್ವಕಪ್ನಲ್ಲಿ ಮಿಸ್ಟರ್ ಕೂಲ್ ಧೋನಿ ಜೊತೆಗೆ ಬ್ಯಾಕ್ ಅಪ್ ಕೀಪರ್ ಯಾರು ಅನ್ನೋ ಪ್ರಶ್ನೆ ಹಾಗೆ ಉಳಿದಿದೆ. ವಿಶ್ವಕಪ್ನಲ್ಲಿ ಬ್ಯಾಕ್ ಅಪ್ ಕೀಪರ್ ರಿಷಭ್ ಪಂತ್ ಅಥವಾ ಅನುಭವಿ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ಕಾ ಅನ್ನೋ ಕೂತೂಹಲ ಹುಟ್ಟಿಸಿದೆ.
ಧೋನಿಯ ಉತ್ತರಾಧಿಕಾರಿ ರಿಷಭ್ ಪಂತ್ ಆಯ್ಕೆ ಮಂಡಳಿಯನ್ನ ಇಂಪ್ರೆಸ್ ಮಾಡಲು ಒಳ್ಳೆಯ ಅವಕಾಶ ಸಿಕ್ಕಿತ್ತು. ಆದರೆ ಅದನ್ನ ಮಿಸ್ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಫ್ಲಾಪ್ ಪರ್ಫಾಮನ್ಸ್ ಕೊಟ್ಟಿದ್ರು.
ರಿಷಬ್ ಪಂತ್ ಸಾಧನೆ
ಏಕದಿನ 52
ಟಿ20 4
ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ರಿಷಭ್ ಪಂತ್ ಎರಡು ಪಂದ್ಯಗಳಿಂದ ಕೇವಲ 52 ರನ್ ಗಳಿಸಿದ್ದಾರೆ. ಇನ್ನು ಟಿ20 ಸರಣಿಯಲ್ಲಿ ಎರಡು ಪಂದ್ಯಗಳಿಂದ ಬರೀ 4 ರನ್ ಕಲೆ ಹಾಕಿದ್ದಾರೆ.
ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಒಳ್ಳೆಯ ಫಾರ್ಮ್ನಲ್ಲಿದ್ದಾರೆ. ಇತ್ತೀಚೆಗೆ ಟಿ20ಯಲ್ಲಿ ಚೇಸಿಂಗ್ ಮೂಲಕವೇ ಗೇಮ್ ಫಿನಿಶರ್ರಾಗಿ ಹೊರ ಹೊಮ್ಮಿದ್ದಾರೆ. ಆದರೆ ದಿನೇಶ್ ಕಾರ್ತಿಕ್ಗೆ ಏಕದಿನ ಫಾರ್ಮೆಟ್ನಲ್ಲಿ ಅವಕಾಶಗಳು ಸಿಕ್ಕಿಲ್ಲ. ಹೀಗಾಗಿ ಈ ತಮಿಳುನಾಡು ಬ್ಯಾಟ್ಸ್ಮನ್ ತ,್ಮ ಸಾಮರ್ಥ್ಯವನ್ನ ಪ್ರೂವ್ ಮಾಡಲು ಆಗಿಲ್ಲ.
ಮುಂಬರುವ ವಿಶ್ವಕಪ್ನಲ್ಲಿ ತಂಡದ ಬ್ಯಾಕ್ ಅಪ್ ಕೀಪರ್ರಾಗಿ ಆಡುವ ಫೇವರಿಟ್ ಆಟಗಾರ ಎನಿಸಿದ್ದಾರೆ. ದಿನೇಶ್ ಕಾರ್ತಿಕ್ 2013ರ ಚಾಂಪಿಯನ್ಸ್ ಟ್ರೋಫಿ ಲಂಡನ್ನಲ್ಲಿ ನಡೆದಿತ್ತು. ಅಂದು ತಂಡ ಗೆಲ್ಲುವಲ್ಲಿ ಕಾರ್ತಿಕ್ ಕೂಡ ನಿಣಾರ್ಯಕ ಪಾತ್ರವಹಿಸಿದ್ರು. ಕಾರ್ತಿಕ್ ಲಂಡನ್ ಕಂಢೀಶನ್ಗೆ ಬೇಗ ಒಗ್ಗಿಕೊಳ್ಳುವುದರಿಂದ ಈ ಬಾರಿಯ ಐಪಿಎಲ್ನಲ್ಲಿ ರನ್ ಮಳೆಯನ್ನೆ ಸುರಿಸಿ ಲಂಡನ್ ಟಿಕೆಟ್ ಪಡೆಯಬೇಕಿದೆ.
ನಾಯಕನಾಗಿ ವಿರಾಟ್ ಕೊಹ್ಲಿಗೆ ಅಗ್ನಿ ಪರೀಕ್ಷೆ
ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಸೋತು ಭಾರೀ ಮುಖಭಂಗಕ್ಕೀಡಾಗಿದ್ದ ಕ್ಯಾಪ್ಟನ್ ವಿರಾಟ್ ಕೊಹ್ಲಿ . ವಿಶ್ವಕಪ್ನಲ್ಲಿ ಹೇಗೆ ತಂಡವನ್ನ ಮುನ್ನಡೆಸುತ್ತಾರೆ ಎನ್ನೊ ಪ್ರಶ್ನೆ ಮೂಡಿದೆ. ವಿರಾಟ್ ಕೊಹ್ಲಿಗೆ ಈ ಬಾರಿಯ ಐಪಿಎಲ್ನಲ್ಲಿ ತಮ್ಮ ನಾಯಕತ್ವ ಏನು ಅನ್ನೊದನ್ನ ಪ್ರೂವ್ ಮಾಡಬೇಕಿದೆ. ಕಳೆದ 18 ತಿಂಗಳಿನಿಂದ ಕೊಹ್ಲಿ ಬ್ಯಾಟಿಂಗ್ನಲ್ಲಿ ರನ್ ಹೊಳೆಯನ್ನ ಹರಿಸಿದ್ದಾರೆ. ಆದರೆ ನಾಯಕತ್ವ ವಿಚಾರದಲ್ಲಿ ತುಂಬ ಡಲ್ ಹೊಡೀತ್ತಾರೆ . ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕೊಹ್ಲಿ ತಂಡವನ್ನ ಸರಿಯಾಗಿ ಮುನ್ನಡೆಸಲ್ಲಿಲ್ಲ. ಧೊನಿ ಇದ್ರೆ ಮಾತ್ರ ಕೊಹ್ಲಿ ಕ್ಯಾಪ್ಟೆನ್ಸಿಯಲ್ಲಿ ಸಕ್ಸಸ್ ಕಾಣುತ್ತಾರೆ ಅನ್ನೋದು ಜಗಜ್ಜಾಹೀರಾಗಿದೆ. ಇದಿಗ ವಿರಾಟ್ ಕೊಹ್ಲಿ ಧೋನಿ ಇಲ್ಲದೆಯೂ ತಾನು ಒಳ್ಳೆಯ ನಾಯಕ ಅನ್ನೋದನ್ನ ಈ ಬಾರಿಯ ಐಪಿಎಲ್ನಲ್ಲಿ ಪ್ರೂವ್ ಮಾಡಬೇಕಿದೆ.
ಸಿಕ್ಸರ್ ಕಿಂಗ್ ಯುವಿ, ಭಜ್ಜಿಗೆ ಇದು ಕೊನೆಯ ಐಪಿಎಲ್
ಒಂದು ಕಾಲದಲ್ಲಿ ಸಿಕ್ಸರ್ ಕಿಂಗ್ ಯುವರಾಜ್ ಕಿಂಗ್ ಸಿಂಗ್ ಮತ್ತು ಟರ್ಬನೇಟರ್ ಹರ್ಭಜನ್ ಸಿಂಗ್ ಟೀಂ ಇಂಡಿಯಾದ ಮ್ಯಾಚ್ ವಿನ್ನರ್ಸ್ಗಳಾಗಿದ್ರು. ಫ್ಲಾಪ್ ಪರ್ಫಾಮನ್ಸ್ಕೊಟ್ಟು ತಂಡದಿಂದಲೇ ಗೇಟ್ ಪಾಸ್ ಪಡೆದ್ರು. ತಂಡಕ್ಕೆ ಮ್ತತೆ ಕಮ್ ಬ್ಯಾಕ್ ಮಾಡಲು ಹರಸಹಾದ ಪಟ್ರು. ಆದರೆ ಅಷ್ಟೋತ್ತಿಗಾಗಲೇ ಇವರಲ್ಲಿ ಕ್ರಿಕೆಟ್ ಇವರೊಳಗೆ ಸತ್ತು ಹೋಗಿತ್ತು.
2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಈ ಬಾರಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಯುವಿಯ ಐಪಿಎಲ್ ಕರಿಯರ್ನಲ್ಲಿ ಇದು ಆರನೇ ತಂಡವಾಗಿದೆ. ಮುಂಬೈ ತಂಡದಲ್ಲಿರುವ ಯುವಿಗೆ ಇದು ಕೊನೆಯ ಐಪಿಎಲ್ ಆದ್ರು ಆಶ್ಚರ್ಯ ಪಡಬೇಕಿಲ್ಲ.
ಇನ್ನು ಟೀಂ ಇಂಡಿಯಾ ಪರ ಸಾಲಿಡ್ ಪರ್ಫಾಮನ್ಸ್ ಕೊಟ್ಟಿದ್ದ ಆಫ್ ಸ್ಪಿನ್ನರ್ ಹಭರ್ಜನ್ ಸಿಂಗ್ ಅವರೊಳಗೆ ಯಾವ ಆಟವೂ ಉಳಿದಿಲ್ಲ ಅನ್ನೋದು ಕಳೆದ ಬಾರಿ ಸೀಸನ್ನಲ್ಲಿ ಪ್ರೂವ್ ಆಗಿದೆ. ಈ ಬಾರಿ ಭಜ್ಜಿಗೆ ಕೊನೆಯ ಐಪಿಎಲ್ ಆಗಿದೆ.
ಐಪಿಎಲ್ಗೆ ಮರಳಿದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್
ಕಳೆದ ವರ್ಷBall Tampering ನಲ್ಲಿ ಸಿಲುಕಿ ಒಂದು ವರ್ಷಗಳ ಕಾಲ ಅಮನಾತು ಶಿಕ್ಷಗೆ ಗುರಿಯಾಗಿದ್ದ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ 12ನೇ ಸೀಸನ್ನಲ್ಲಿ ಮ್ತತೆ ಕಮ್ ಬ್ಯಾಕ್ ಮಾಡಿದ್ದಾರೆ. 2016ರಲ್ಲಿ ಹೈದ್ರಾಬಾದ್ ತಂಡಕ್ಕೆ ಐಪಿಎಲ್ ಟ್ರೋಫಿ ಗೆದ್ದು ಕೊಟ್ಟಿದ್ದ ಡೇವಿಡ್ ವಾರ್ನರ್ ತಂಡಕ್ಕೆ ಮತ್ತೆ ನಾಯಕನಾಗಿ ಮರಳಿ ಒಳ್ಳೆಯ ಜೋಶ್ನಲ್ಲಿದ್ದಾರೆ. ಇನ್ನು ಸ್ಟೀವ್ ಸ್ಮಿತ್ ರಾಜಸ್ತಾನ ರಾಯಲ್ಸ್ ತಂಡದ ನಾಯಕತ್ವ ವಹಸಿಕೊಂಡು ತಮ್ಮ ಕ್ಯಾಪ್ಟನ್ಸಿಯನ್ನ ಪ್ರೂವ್ ಮಾಡಿ ವಿಶ್ವಕಪ್ ನಲ್ಲಿ ತಂಡದ ನಾಯಕತ್ವ ವಹಸಿಬೇಕಿದೆ.
ಒಟ್ಟಾರೆ ಈ ನಾಲ್ಕು ಅಂಶಗಳು ಈ ಬಾರಿಯ ಐಪಿಎಲ್ನ ಪ್ರಮುಖ ಹೈಲೆಟ್ಸ್ ಆಗಿವೆ