ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ಗೆ ಕೌಂಟ್ಡೌನ್ ಶುರುವಾಗದೆ. ಇಂದಿನಿಂದ ಆರಂಭವಾಗಲಿರುವ ಕಲ್ಲರ್ಫುಲ್ ಟೂರ್ನಿ ವೀಕ್ಷಿಸಲು ಇಡೀ ಕ್ರಿಕೆಟ್ ಜಗತ್ತೆ ಈ ಬಾರಿಯ 12ನೇ ಸೀಸನ್ನ್ನ ನೋಡಲು ಕಾದು ಕುಳಿತಿದೆ.
ಉದ್ಘಾಟನಾ ಪಂದ್ಯಕ್ಕೆ ಚೆಪಾಕ್ ಅಂಗಳ ಸಜ್ಜು
ಉದ್ಘಾಟನ ಪಂದ್ಯದಲ್ಲಿ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ಹಾಗೂ ಸಿಎಸ್ಕೆ ಹೋರಾಡಲಿವೆ. ಈಗಾಗಲೇ ಐಪಿಎಲ್ ಟ್ರೋಫಿಯನ್ನು ಹಲವು ಬಾರಿ ಮುತ್ತಿಕ್ಕಿರುವ ಸಿಎಸ್ಕೆ ಹಾಗೂ ತಂಡ ಬಲಿಷ್ಠವಾಗಿದ್ದರೂ ಕೊನೇ ಕ್ಷಣದಲ್ಲಿ ಪ್ರಶಸ್ತಿಯನ್ನು ಮಿಸ್ ಮಾಡಿಕೊಳ್ಳುವ ಆರ್ಸಿಬಿ ತಂಡ ಈ ಆವೃತ್ತಿಯ ಟ್ರೋಫಿ ಗೆಲ್ಲುವ ಫೇವರೇಟ್ ತಂಡಗಳೆನಿಸಿಕೊಂಡಿವೆ.
ಚೆನ್ನೈ, ಆರ್ಸಿಬಿ ನಡುವೆ ಬಿಗ್ ಫೈಟ್
ಉದ್ಘಾಟನಾ ಪಂದ್ಯದಲ್ಲಿ ಇಂದು ನಡೆಯುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್ಸಿಬಿ ನಡುವಿನ ಕದನ ಹೈವೋಲ್ಟೇಜ್ನಿಂದ ಕೂಡಿದ್ದು ಮೊದಲ ಪಂದ್ಯದಲ್ಲೆ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ. ಧೋನಿ ನೇತೃತ್ವದ ಚೆನ್ನೈ ತಂಡ ಈ ಹಿಂದನ ಸೀಸನ್ನಂತೆ ಬಲಿಷ್ಠವಾಗಿದ್ದು ತವರು ನೆಲದ ಭರ್ಜರಿ ಬೆಂಬಲ ನಾಳಿನ ಪಂದ್ಯಕ್ಕೆ ಚೆನ್ನೈ ತಂಡಕ್ಕೆ ವರದಾನವಾಗಲಿದೆ.
ಇನ್ನು ಆರ್ಸಿಬಿ ಪಾಳೆಯದಲ್ಲಿ ಬಿಡ್ಡಿಂಗ್ನಲ್ಲಿ ಕೆಲ ಹೊಸ ಸೇರ್ಪಡೆಯಿಂದ ತಂಡವನ್ನು ಮತ್ತಷ್ಟು ಬಲಿಷ್ಠ ಮಾಡಿಕೊಂಡಿರುವ ಆರ್ಸಿಬಿ ಮೊದಲ ಪಂದ್ಯದಲ್ಲೆ ಅಚ್ಚರಿಯ ಫಲಿತಾಂಶ ನೀಡುವ ಉತ್ಸಾಹದಲ್ಲಿದೆ.
ಚೆನ್ನೈ ತಂಡದಲ್ಲಿ ಫಾಫ್ ಡು ಪ್ಲೆಸಿಸ್, ಡ್ವೇನೆ ಬ್ರಾವೋ, ಶೇನ್ ವಾಟ್ಸನ್, ಡೇವಿಡ್ ವಿಲ್ಲಿ, ಸುರೇಶ್ ರೈನಾ, ರವೀಂದ್ರ ಜಡೇಜಾ ಹಾಗೂ ನಾಯಕ ಎಂ.ಎಸ್.ಧೋನಿ ಸ್ಟಾರ್ ಆಟಗಾರರಾಗಿದ್ದಾರೆ.ಆರ್ಸಿಬಿ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಶಿಮ್ರೋನ್ ಹೇಟ್ಮಯರ್, ಮೊಯೀನ್ ಅಲಿ, ನಥನ್ ಕೌಲ್ಟರ್ ನೀಲ್, ಯಜ್ವೇಂದ್ರ ಚಹಾಲ್, ಉಮೇಶ್ ಯಾದವ್ ಪ್ರಮುಖ ಆಟಗಾರರಾಗಿದ್ದಾರೆ.
ಹುತಾತ್ಮ ಯೋಧರಿಗೆ ಮೊದಲ ಪಂದ್ಯದ ಸಂಭಾವನೆ
ಐಪಿಎಲ್ನ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಭಾರತೀಯ ಹುತಾತ್ಮ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಮುಂದಾಗಿದೆ.ಮೊದಲ ಪಂದ್ಯದಲ್ಲಿ ಸಿಎಸ್ಕೆ ಹಾಗು ಆರ್ಸಿಬಿ ಸೆಣಸಾಡಲಿವೆ. ಈ ಪಂದ್ಯದ ಟಿಕೆಟ್ ಆದಾಯವವನ್ನ, ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಪಾಕಿಸ್ತಾನ ಉಗ್ರರ ಬಾಂಬ್ ದಾಳಿಯಲ್ಲಿ ಮಡಿದ ಸೈನಿಕರ ಕುಟುಂಬಕ್ಕೆ ನೀಡಲು ಸಿಎಸ್ಕೆ ನಿರ್ಧರಿಸಿದೆ.
ಆರ್ಸಿಬಿ, ಚೆನ್ನೈ ಐಪಿಎಲ್ ಫೈಟ್
ಪಂದ್ಯ 15
ಗೆಲುವು 7
ಫಲಿತಾಂಶವಿಲ್ಲ 1
ಐಪಿಎಲ್ ನಲ್ಲಿ ಇದುವರೆಗೂ ಆರ್ಸಿಬಿ ಮತ್ತು ಚೆನ್ನೈ ತಂಡಗಳು 15 ಬಾರಿ ಮುಖಾಮುಖಿಯಾಗಿವೆ ಇದರಲ್ಲಿ 7 ಬಾರಿ ಚೆನ್ನೈ ಗೆದ್ದು ಒಳ್ಳೆಯ ದಾಖಲೆ ಹೊಂದಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೇ ರದ್ದಾಗಿದೆ.
ದಾಖಲೆ ಬರೆಯಲಿದ್ದಾರೆ ಕೊಹ್ಲಿ, ರೈನಾ ನಡುವೆ ಬಿಗ್ ಫೈಟ್
ಇಂದು ನಡೆಯುವ ಪಂದ್ಯದಲ್ಲಿ ಕ್ಯಾಪ್ಟನ್ ಕೊಹ್ಲಿ ಮತ್ತು ಸುರೇಶ್ ರೈನಾ ಹೊಸ ದಾಖಲೆ ಬರೆಯಲಿದ್ದಾರೆ. ಆರ್ಸಿಬಿ ತಂಡದ ಕ್ಯಾಪ್ಟನ್ ಆಗಿರೋ ಕೊಹ್ಲಿ, ಐದು ಸಾವಿರ ರನ್ ಗಡಿ ತಲುಪಲು ಕೇವಲ 52 ರನ್ಗಳ ದೂರದಲ್ಲಿದ್ದಾರೆ. ಐಪಿಎಲ್ನಲ್ಲಿ 4000 ರನ್ ಪೂರೈಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆ ಹೊಂದಿರುವ ರೈನಾ, 5 ಸಹಸ್ರ ರನ್ ಪೂರ್ಣಗೊಳಿಸಲು ಕೇವಲ 15 ರನ್ಸ್ ಮಾತ್ರ ಬೇಕಿದೆ.
ಒಟ್ನಲ್ಲಿ ಇಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಯಾರು ಶುಭಾರಂಭ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.