ನೂತನ ಸೈಬರ್ ಭದ್ರತಾ ಮುಖ್ಯಸ್ಥರಾಗಿ ನಿವೃತ್ತ ಹಿರಿಯ ಸೇನಾಧಿಕಾರಿ ರಾಜೇಶ್ ಪಂತ್

ನವದೆಹಲಿ, ಮಾ.22- ನಿವೃತ್ತ ಹಿರಿಯ ಸೇನಾ ಅಧಿಕಾರಿ ರಾಜೇಶ್ ಪಂತ್ ಅವರನ್ನು ಭಾರತದ ನೂತನ ಸೈಬರ್ ಭದ್ರತಾ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಏ. 1ರಿಂದ ಸೈಬರ್ ಭದ್ರತಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ರಾಷ್ಟ್ರದ ಮೊದಲ ಸೈಬರ್ ಭದ್ರತಾ ಮುಖ್ಯಸ್ಥರಾಗಿರುವ ಗುಲ್ಶನ್ ರೈ ತಮ್ಮ ದೀರ್ಘಕಾಲದ ಸೇವೆ ಬಳಿಕ ಮಾ. 31ರಂದು ನಿವೃತ್ತರಾಗಲಿದ್ದಾರೆ.

ಲೆಫ್ಟಿನೆಂಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದ ಪಂತ್ ಇದಾಗಲೇ ವಿಶೇಷ ಕರ್ತವ್ಯದ ಅಧಿಕಾರಿಯಾಗಿ ರಾಷ್ಟ್ರೀಯ ಸೈಬರ್ ಭದ್ರತಾ ಸಂಯೋಜನಾಲಯಕ್ಕೆ ಸೇರ್ಪಡೆಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ