ಬಿಜೆಪಿ ಮೊದಲ ಪಟ್ಟಿಯಲ್ಲಿ ಈ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಯಾಕೆ ಬಿಡುಗಡೆ ಮಾಡಿಲ್ಲ ಗೊತ್ತೇ?

ಬೆಂಗಳೂರುಕೇಂದ್ರ ಸಚಿವ ಜಗತ್​ ಪ್ರಕಾಶ್​ ನಡ್ಡಾ ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ರಾಜ್ಯದ 21 ಕ್ಷೇತ್ರಗಳಿಗೆ ಟಿಕೆಟ್​ ಘೋಷಿಸಿದೆ. ಆದರೆ ಏಳು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇನ್ನೂ ಟಿಕೆಟ್​ ಘೋಷಿಸಿಲ್ಲ. ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿಯಿಂದ ಮಂಡ್ಯ ಕ್ಷೇತ್ರಕ್ಕೆ ಟಿಕೆಟ್​ ಘೋಷಣೆಯಗಲಿದೆಯಾ ಇಲ್ಲವಾ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಕೇಳಿ ಬಂದಿದ್ದವು. ಈಗಾಗಲೇ ಮುಖ್ಯಮಂತ್ರಿ ಎಚ್​ ಡಿ ಕುಮಾರಸ್ವಾಮಿ ಮಗ ನಿಖಿಲ್​ ಕುಮಾರಸ್ವಾಮಿ ಮತ್ತು ದಿವಂಗತ ಅಂಬರೀಶ್​ ಹೆಂಡತಿ ಸುಮಲತಾ ಅಂಬರೀಶ್​ರ ಸ್ಪರ್ಧೆಯಿಂದ ಕ್ಷೇತ್ರದ ಚುನಾವಣೆ ಬಗ್ಗೆ ರಾಜ್ಯಾದ್ಯಂತ ಕುತೂಹಲ ಮನೆ ಮಾಡಿದೆ. ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸದೇ ಇರುವುದನ್ನು ನೋಡಿದರೆ ಸುಮಲತಾರಿಗೆ ಬಾಹ್ಯ ಬೆಂಬಲ ಘೋಷಿಸುವ ಸಾಧ್ಯತೆ ಕಾಣುತ್ತಿದೆ.

ಯಾವ ಕ್ಷೇತ್ರಗಳ ಅಭ್ಯರ್ಥಿ ಘೊಷಣೆಯಾಗಿಲ್ಲ?:

ಬೆಂಗಳೂರು ದಕ್ಷಿಣ

ಬೆಂಗಳೂರು ಗ್ರಾಮಾಂತರ

ಮಂಡ್ಯ

ಕೋಲಾರ

ಕೊಪ್ಪಳ

ರಾಯಚೂರು

ಚಿಕ್ಕೋಡಿ

ಈ ಮೇಲಿನ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಬಿಜೆಪಿ ಹೈಕಮಾಂಡ್​ ಘೋಷಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್​. ಯಡಿಯೂರಪ್ಪ, “2019ರ ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. 21 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗಿವೆ. ಉಳಿದ 7 ಕ್ಷೇತ್ರಗಳ ಪಟ್ಟಿ ಬಿಡುಗಡೆಯಾಗಿಲ್ಲ. ಎಲ್ಲ ಕ್ಷೇತ್ರಗಳ ವಿಚಾರದಲ್ಲಿ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗಿಲ್ಲ, ಅದನ್ನು ಹೈಕಮಾಂಡ್ ಪ್ರಕಟಿಸಲಿದೆ,” ಎಂದಿದ್ದಾರೆ.
ಟಿಕೆಟ್ಘೋಷಣೆಯಾಗದಿರಲು ಕಾರಣವೇನು?:

  • ಚಿಕ್ಕೋಡಿಯಲ್ಲಿ ಅಪ್ಪಾಸಾಹೇಬ್ ಜೊಲ್ಲೆ ಮತ್ತು ರಮೇಶ್​ ಕತ್ತಿ ನಡುವೆ ಪೈಪೋಟಿ.
  • ಬೆಂಗಳೂರು ಗ್ರಾಮಾಂತರ ಸಿ.ಪಿ. ಯೋಗೇಶ್ವರ್ ಗೆ ಕೊಡಬೇಕೋ, ಮಗಳಿಗೆ ಕೊಡಬೇಕೋ ಎಂಬ ಗೊಂದಲ.
  • ಕೋಲಾರದಲ್ಲಿ ಡಿ.ಎಸ್. ವೀರಯ್ಯ ಮತ್ತು ಛಲವಾದಿ ನಾರಾಯಣಸ್ವಾಮಿ ನಡುವೆ ಪೈಪೋಟಿ.
  • ಕೊಪ್ಪಳದಲ್ಲಿ ಹಾಲಿ ಸಂಸದರಿಗಿಲ್ಲ ಟಿಕೆಟ್. ಎರಡನೇ ಹಂತದಲ್ಲಿ ಘೋಷಣೆಯಾಗುವ ಬಗ್ಗೆಯೂ ಅನುಮಾನ.
  • ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಅನಂತಕುಮಾರ್ ಗೆ ಟಿಕೆಟ್ ಕೊಡುವುದಕ್ಕೂ, ಮರು ಚಿಂತನೆ.
  • ರಾಯಚೂರಿನಿಂದ ಅಮರೇಶ್ ನಾಯಕ್ ಮತ್ತು ಅನಂತರಾಜ್ ನಾಯಕ್ ನಡುವೆ ಪೈಪೋಟಿ.

ಟಿಕೆಟ್ ಪಡೆದ ಹೊಸ ಮುಖಗಳು:

  • ಬಳ್ಳಾರಿ – ದೇವೇಂದ್ರಪ್ಪ
  • ಹಾಸನ – ಎ.ಮಂಜು
  • ಚಿತ್ರದುರ್ಗ- ಎ.ನಾರಾಯಣಸ್ವಾಮಿ
  • ಗುಲಬರ್ಗಾ- ಡಾ.ಉಮೇಶ್ ಜಾಧವ್

ಟಿಕೆಟ್ಪಡೆದ ಹಾಲಿ ಸಂಸದರು

  • ಸುರೇಶ್ ಅಂಗಡಿ- ಬೆಳಗಾವಿ
  • ಗದ್ದಿಗೌಡರ್ – ಬಾಗಲಕೋಟೆ
  • ರಮೇಶ್ ಜಿಗಜಿಣಗಿ- ವಿಜಯಪುರ
  • ಭಗವಂತ ಖೂಬಾ- ಬೀದರ್
  • ಶಿವಕುಮಾರ ಉದಾಸಿ- ಹಾವೇರಿ
  • ಪ್ರಹ್ಲಾದ್ ಜ್ಯೋಷಿ-ಧಾರವಾಡ
  • ಅನಂತಕುಮಾರ ಹೆಗಡೆ-ಉತ್ತರ ಕನ್ನಡ
  • ಜಿ.ಎಂ.ಸಿದ್ದೇಶ್ವರ- ಧಾವಣಗೆರೆ
  • ಬಿವೈ, ರಾಘವೇಂದ್ರ- ಶಿವಮೊಗ್ಗ
  • ಶೋಭಾ ಕರಂದ್ಲಾಜೆ- ಉಡುಪಿ ಚಿಕ್ಕಮಗಳೂರು
  • ನಳೀನ್ ಕುಮಾರ್ ಕಟೀಲ್- ದಕ್ಷಿಣ ಕನ್ನಡ
  • ಪ್ರತಾಪ್ ಸಿಂಹ್ – ಮೈಸೂರು
  • ಸದಾನಂದಗೌಡ- ಬೆಂಗಳೂರು ಉತ್ತರ
  • ಪಿ.ಸಿ.ಮೋಹನ್- ಬೆಂಗಳೂರು ಕೇಂದ್ರ
  • ಹಾಲಿ 14 ಸಂಸದರಿಗೆ ಟಿಕೆಟ್ ಘೋಷಣೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ