ಆರ್‍ಸಿಬಿ ಕಾಂ್ಯಪ್‍ನಲ್ಲಿ ಫುಟ್ಬಾಲ್ ಸ್ಟಾರ್ ಸುನಿಲ್ ಚೆಟ್ರಿ

ಶನಿವಾರದಿಂದ ಐಪಿಎಲ್​ 12ನೇ ಆವೃತ್ತಿ ಚಾಲನೆ ದೊರೆಯಲಿದೆ. ಮೊದಲ ಪಂದ್ಯದಲ್ಲಿ ಡಿಫೆಂಡಿಂಗ್ ಚಾಂಪಿಯನ್ಸ್​​ ಸಿಎಸ್​ಕೆ ಹಾಗು ಆರ್​ಸಿಬಿ ಸೆಣಸಾಡಲಿವೆ. ಮೊದಲ ಪಂದ್ಯದಲ್ಲಿ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿ ಆರ್​ಸಿಬಿ ಇದೆ. ಇದಕ್ಕಾಗಿ ತಂಡದ ಕ್ಯಾಪ್ಟನ್​ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರು ಚಿನ್ನಸ್ವಾಮಿ ಅಂಗಳದಲ್ಲಿ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ವಿಶೇಷ ಅಂದ್ರೆ, ಕೊಹ್ಲಿ ಪಡೆ ಮಂಗಳವಾರ ಅಭ್ಯಾಸ ನಡೆಸುತ್ತಿದ್ದಾಗ ಇಂಡಿಯನ್​ ಪುಟ್ಬಾಲ್ ಲೆಜೆಂಡ್​, ಪುಟ್ಬಾಲ್ ತಂಡದ ಕ್ಯಾಪ್ಟನ್ ಸುನಿಲ್​ ಚೆಟ್ರಿ ಚಿನ್ನಸ್ವಾಮಿ ಅಂಗಳದಲ್ಲಿ ಹಾಜರಾದ್ರು. ತಮ್ಮ ನೆಚ್ಚಿನ ಸ್ನೇಹಿತನನ್ನು ಪ್ರೀತಿಯಿಂದ ಬರಮಾಡಿಕೊಂಡ ಕೊಹ್ಲಿ, ತಂಡದ ಸದಸ್ಯರಿಗೆ ಚೆಟ್ರಿಯನ್ನ ಪರಿಚಯ ಮಾಡಿಕೊಟ್ರು. ಚೆಟ್ರಿಗೆ ಬ್ಯಾಟಿಂಗ್ ಮಾಡೋದು ಹೇಗೆ ಅಂತ ಹೇಳಿಕೊಟ್ರು. ಇಬ್ಬರು ಕೆಲ ಕಾಲ ತಮಾಷೆಯಾಗಿ ಕಳೆದ್ರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ