ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಇನ್ನಿಲ್ಲ

ಗೋವಾದ ಪಣಜಿ ಖಾಸಗೀ ಆಸ್ಪತ್ರೆಯಲ್ಲಿ ಲೀವರ್ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಸಹ ಪಡೆಯುತ್ತಿದ್ದರು ಆದ್ರೆ ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ತಮ್ಮ ಕೊನೆಯುಸಿರು ಎಳೆದಿದ್ದಾರೆ.

ಸದ್ಯ ಮನೋಹರ್ ಪರಿಕ್ಕರ್ ಎನ್ ಡಿಎ ಸರ್ಕಾರದಲ್ಲಿ ಕೇಂದ್ರ ರಕ್ಷಣಾ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಲ್ಲದ್ದೇ,  2014ರಿಂದ 2017ರ ವರೆಗೆ ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಗೋವಾ ಮುಖ್ಯಮಂತ್ರಿಯಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದರು. ಮೂಲತಃ ಆರ್.ಎಸ್.ಎಸ್ ಸಂಘಟನೆಯಿಂದ ಗುರುತಿಸಿಕೊಂಡಿದ್ದ ಇವರು ಬದುಕಿರುವ ತನಕ ಆರ್.ಎಸ್.ಎಸ್,ಬಿಜೆಪಿಗಾಗಿ ದುಡಿದವರು.

ಅಲ್ಲದೇ ದೇಶದಲ್ಲೇ ಐಐಟಿ ಮಾಡಿ ಶಾಸಕರಾದ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆ ಕೂಡ ಇವರಿಗೆ ಸಲ್ಲುತ್ತದೆ. ತಮ್ಮಗೆ ಎಷ್ಟೇ ನೋವಿದ್ದರು ಕೆಲಸದಲ್ಲಿ ಮಾತ್ರ ಎಂದು ರಾಜಿಯಾದವರಲ್ಲ ಅಷ್ಟೊಂದು ಶಿಸ್ತಿನ ಸಿಪಾಯಿಯಾಗಿ ಸೇವೆ ಸಲ್ಲಿಸಿದ್ದರು.

ಡಿಸೆಂಬರ್ 13, 1955ರಲ್ಲಿ ಗೋವಾ ರಾಜ್ಯದ ಮಾಪುಸಾ ಎಂಬ ಪಟ್ಟಣದಲ್ಲಿ ಜನಿಸಿದವರು. ಇವರು ತಮ್ಮ ಪ್ರೌಢ ಶಿಕ್ಷಣವನ್ನು ಮಾರಾಠಿ ಭಾಷೆಯಲ್ಲಿ ಪಡೆದುಕೊಂಡು ನಂತರ ಬಾಂಬೆಯ ಐಐಟಿ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದವರು.

ಇನ್ನು ಇವರ ಅಗಲಿಕೆಗೆ ದೇಶಾದ್ಯಂತ ಗಣ್ಯಾತಿ ಗಣ್ಯರು ಸಂತಾಪ ಸೂಚಿಸಿದ್ದು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಗಣ್ಯರು ಟ್ವೀಟರ್ ಮೂಲಕ ಸಂತಾಪ ಸೂಚಿಸಿ ಗೌರವ ನಮನ ಸಲ್ಲಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ