ನವದೆಹಲಿ: ದೇಶದ ಮೊದಲ ಲೋಕಪಾಲರಾಗಿ ನಿವೃತ್ತ ನ್ಯಾಯಮೂರ್ತಿ ಪಿ.ಸಿ. ಘೋಷ್ ಅವರನ್ನು ನೇಮಕ ಮಾಡಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಆದರೆ ಇನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ಕಳೆದ ಐದು ವರ್ಷಗಳಿಂದ ಭ್ರಷ್ಟಾಚಾರ ತಡೆಯುವ ಉದ್ದೇಶದ ಲೋಕಪಾಲ ಸಂಸ್ಥೆಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಬೇಕು ಎಂಬ ಕೂಗು ಕೇಳಿಬರುತ್ತಲೇ ಇತ್ತು. ಲೋಕಪಾಲ ನೇಮಕ ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹಲವುಬಾರಿ ಸತ್ಯಾಗ್ರಹಗಳನ್ನೂ ನಡೆಸಿದ್ದರು.
ಅಲ್ಲದೇ ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ-2013ಕ್ಕೆ 2014ರಲ್ಲೇ ರಾಷ್ಟ್ರಪತಿ ಅಂಕಿತ ದೊರಕ್ಕಿದ್ದು, 2016, ಜನವರಿ 16 ರಿಂದ ಜಾರಿಗೆ ಬಂದಿದೆ.
ಆದರೆ ಕೇಂದ್ರ ಸರ್ಕಾರ ಲೋಕಪಾಲರನ್ನು ನೇಮಿಸುವಲ್ಲಿ ವಿಳಂಬ ಮಾಡುತ್ತಲೇ ಇತ್ತು. ಲೋಕಪಾಲ ಕಾಯ್ದೆಯನ್ನು ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ಕೇಂದ್ರದ ನಡೆಗೆ ಸುಪ್ರೀಂ ಕೋರ್ಟ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಂತಿಮವಾಗಿ ಈಗ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಲೋಕಪಾಲ ನೇಮಕಕ್ಕೆ ಮುಂದಾಗಿ, ಮೊದಲ ಲೋಕಪಾಲರನ್ನು ನೇಮಕಮಾಡಿದೆ. ಆದರೆ ಇನ್ನು ಅಧಿಕೃತ ಆದೇಶ ಹೊರಡಿಸಬೇಕಿದೆ.
Former SC Judge PC Ghose Likely to Be India’s First Lokpal, Official Announcement