ಸಿಸಿಬಿ ಪೊಲೀಸರಿಂದ ಕ್ಲಬ್ ಮೇಲೆ ದಾಳಿ-25 ಮಂದಿಯ ಬಂಧನ

ಬೆಂಗಳೂರು, ಮಾ.15-ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೆÇಲೀಸರು ಕ್ಲಬ್ ಮೇಲೆ ದಾಳಿ ಮಾಡಿ 25 ಮಂದಿಯನ್ನು ಬಂಧಿಸಿ 1.26 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.

ಕೆ.ಆರ್.ಪುರಂ ವ್ಯಾಪ್ತಿಯ ಹಳೇ ಮದ್ರಾಸ್ ರಸ್ತೆ, ಜಿ.ಕೆ.ಆರ್.ಕಾಂಪ್ಲೆಕ್ಸ್‍ನಲ್ಲಿನ ಓಂ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್‍ನಲ್ಲಿ ಸದಸ್ಯರಲ್ಲದ ಸುಮಾರು 20 ರಿಂದ 25 ಮಂದಿ ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಡುತ್ತಿದ್ದ ಬಗ್ಗೆ ಸಿಸಿಬಿ ಪೆÇಲೀಸರಿಗೆ ಮಾಹಿತಿ ಲಭಿಸಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಪೆÇಲೀಸರು ಕ್ಲಬ್ ಮೇಲೆ ದಾಳಿ ಮಾಡಿ 1.26 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೆ.ಆರ್.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ