ಬೇಲೂರು, ಮಾ.15- ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಸರಕಳ್ಳತನ ಮಾಡುತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 2.75 ಲಕ್ಷ ಮೌಲ್ಯದ 120ಗ್ರಾಂ ಚಿನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೆÇಲೀಸ್ ವೃತ್ತ ನಿರೀಕ್ಷಕ ಲೋಕೇಶ್ ಹೇಳಿದ್ದಾರೆ.
ಸರಗಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿ ಅವರಿಂದ ವಶಕ್ಕೆ ಪಡೆದ ಚಿನ್ನದ ಸರಗಳನ್ನು ಪ್ರದರ್ಶಿಸಿ ಮಾತನಾಡಿದ ಅವರು, ಹಾಸನ ಜಿಲ್ಲೆಯ ವಿವಿಧ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ವಿವಿಧ ಜಾತ್ರೆ, ಸಂತೆ ಹಾಗೂ ಬಸ್ ನಿಲ್ದಾಣಗಳಲ್ಲಿ ಸರಗಳ್ಳತನ ಮಾಡುತಿದ್ದ ತಮಿಳುನಾಡು ಮೂಲದ ಆನೇಕಲ್ ವಾಸಿ ಸೋಮಶೇಖರ ಹಾಗೂ ಹುಣಸೂರಿನ ಶ್ರೀನಿವಾಸ ಎಂಬುವರನ್ನು ಬಂಧಿಸಲಾಗಿದೆ ಎಂದರು.
ಆರೋಪಿಗಳಿಂದ 2.75 ಲಕ್ಷ ರೂಗಳ ಮೌಲ್ಯದ 120 ಗ್ರಾಂ ಚಿನ್ನದ ನಾಲ್ಕು ಸರಗಳು ಹಾಗೂ ಕೃತ್ಯಕ್ಕೆ ಬಳಸುತಿದ್ದ ಇನ್ನೋವಾ ಕಾರನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುತಿದ್ದೇವೆ. ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿದ ತಂಡವನ್ನು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ, ಅಡಿಷನಲ್ ಎಸ್ಪಿ, ಡಿವೈಎಸ್ಪಿಯವರು ಶ್ಲಾಘಿಸಿದ್ದಾರೆ ಎಂದರು.
ಪಿಎಸ್ಐಗಳಾದ ಜಗಧೀಶ್, ಭರತ್ಗೌಡ, ಸಿಬ್ಬಂದಿಗಳಾದ ನಾಗರಾಜ್, ಜಮೃದ್ದೀನ್, ರವೀಶ್, ಭವ್ಯ, ದೇವರಾಜ್ ಹಾಜರಿದ್ದರು.