ಬೆಂಗಳೂರು, ಮಾ.15-ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರು ತಮ್ಮ ಸಮವಸ್ತ್ರದ ಮೇಲೆ ಕನ್ನಡದ ಭುಜ ಬಿಲ್ಲೆಗಳನ್ನು ಧರಿಸಬೇಕೆಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕನ್ನಡ ಕ್ರಿಯಾ ಸಮಿತಿ ಮನವಿ ಮಾಡಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಡಳಿತ ವರ್ಗ ಹಲವು ವರ್ಷಗಳಿಂದ ಬೆಂಮಸಾ ಎಂಬ ಕನ್ನಡ ಭುಜ ಬಿಲ್ಲೆ ವಿತರಿಸಿರುವುದಿಲ್ಲ. ಈ ಬಗ್ಗೆ ಕ್ರಿಯಾಸಮಿತಿ ವತಿಯಿಂದ ಮನವಿ ಮಾಡಲಾಗಿದ್ದು, ಶೀಘ್ರ ವಿತರಿಸುವುದಾಗಿ ವ್ಯವಸ್ಥಾಪಕ ನಿರ್ದೇಶಕರು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿರುವುದಾಗಿ ಸಂಘದ ಅಧ್ಯಕ್ಷರಾದ ವ.ಚ.ಚನ್ನೇಗೌಡ ತಿಳಿಸಿದ್ದಾರೆ.
ಆದರೆ ಕೆಲವು ನೌಕರ ಮಿತ್ರರು ಇಂಗ್ಲೀಷ್ ಭುಜ ಬಿಲ್ಲೆಗಳನ್ನು ತಾವೇ ಖರೀದಿಸಿ ಧರಿಸುತ್ತಿದ್ದಾರೆ.ಹಾಗಾಗಿ ಕನ್ನಡ ಬೆಂಮಸಾ ಎಂಬ ಕನ್ನಡ ಭುಜ ಬಿಲ್ಲೆಗಳನ್ನು ಸಮವಸ್ತ್ರದ ಮೇಲೆ ಧರಿಸಬೇಕೆಂದು ಮನವಿ ಮಾಡಿದ್ದಾರೆ.