ನವ ವಿವಾಹಿತೆ ಆತ್ಮಹತ್ಯೆ

Execution Sling Hanging Hangman Knot Penalty Rope

ಬೆಂಗಳೂರು, ಮಾ.13- ನವ ವಿವಾಹಿತೆಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅಹಿತಕರ ಘಟನೆ ಕೆಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೂಲತಃ ಮುಳಬಾಗಿಲಿನ ರಂಜಿತಾ (24) ಆತ್ಮಹತ್ಯೆಗೆ ಶರಣಾಗಿರುವ ನವ ವಿವಾಹಿತೆ.

ಮೂರು ತಿಂಗಳ ಹಿಂದಷ್ಟೆ ಅಶೋಕ್ ಎಂಬಾತನನ್ನು ರಂಜಿತಾ ವಿವಾಹವಾಗಿದ್ದು, ಲಕ್ಷ್ಮೀಪುರ ಬಡಾವಣೆಯಲ್ಲಿ ವಾಸವಾಗಿದ್ದರು.

ಇಂದು ಮುಂಜಾನೆ ರಂಜಿತಾ ಕಿಟಕಿ ಸರಳಿಗೆ ವೇಲ್‍ನಿಂದ ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾರೆ.

ವಿಷಯ ತಿಳಿದ ರಂಜಿತಾ ಪೋಷಕರು ಮಗಳ ಮನೆಗೆ ಬಂದು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಮಗಳ ಸಾವಿನ ಬಗ್ಗೆ ತಂದೆ ಕೃಷ್ಣಪ್ಪ ಕೆಆರ್ ಠಾಣೆಗೆ ಬಂದು ಅಳಿಯ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನೆಂದು ದೂರು ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕೆಆರ್ ಪುರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ