ಇಂಡೋ- ಆಸಿಸ್ ಅಂತಿಮ ಕದನಕ್ಕೆ ಫಿರೋಜ್ ಶಾ ಅಂಗಳ ಸಜ್ಜು

ದೆಹಲಿ: ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಐದನೆ ಮತ್ತು ಅಂತಿಮ ಏಕದಿನ ಪಂದ್ಯ ಬುಧವಾರ ದೆಹಲಿಯ ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ನಡೆಯಲಿದೆ.
ಮೊನ್ನೆ ಮೊಹಾಲಿಯಲ್ಲಿ ನಡೆದ ನಾಲ್ಕನೆ ಏಕದಿನ ಪಂದ್ಯದಲ್ಲಿ ಕೊಹ್ಲಿ ಪಡೆ ಗೆಲ್ಲಬಹುದಾಗಿದ್ದ ಪಂದ್ಯವನ್ನ ಸುಖ ಸುಮ್ಮನೆ ಕೈಚೆಲ್ಲಿಕೊಂಡು ಭಾರೀ ಮುಖಭಂಗ ಅನುಭವಿಸಿತ್ತು. 358 ರನ್‍ಗಲ ಬೃಹತ್ ಸವಾಲನ್ನ ನೀಡಿದ ಹೊರತಾಗಿಯೂ ಕಳಪೆ ಫೀಲ್ಡಿಂಗ್ ಮತ್ತು ಕೆಟ್ಟ ಬೌಲಿಂಗ್‍ನಿಂದಾಗಿ ಆಸಿಸ್ ಎದುರು ಮಂಡಿಯೂರಬೇಕಾಯಿತು.
ಗಾಯಗೊಂಡ ಹುಲಿಯಂತಾಗಿದೆ ಟೀಂ ಇಂಡಿಯಾ
ಸರಣಿ ಆರಂಭದಲ್ಲಿ ಎರಡು ಪಂದ್ಯಗಳನ್ನ ಗೆದ್ದು ಬೀಗಿದ್ದ ಬ್ಲೂ ಬಾಯ್ಸ್ ಇನ್ನೇನು ಮುಂದಿನ ಪಂದ್ಯದಲ್ಲಿ ಸರಣಿ ಗೆದ್ದೆ ಬಿಡುತ್ತೇವೆ ಅಂತ ತೀರ್ಮಾನಿಸಿತ್ತು. ಆದರೆ ರಾಂಚಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ 32 ರನ್‍ಗಳ ಅಂತರದಿಂದ ಸೋಲುವ ಮೂಲಕ ಸರಣಿಯಲ್ಲಿ ಮೊದಲ ಸೋಲು ಕಂಡಿತ್ತು.
ನಂತರ ಮೊಹಾಲಿ ಪಂದ್ಯದಲ್ಲಿ ಗೆಲ್ಲಲ್ಲೇಬೇಕೆಂದು ಕಣಕ್ಕಿಳಿದಿದ್ದ ಮತ್ತೆ ಅಚ್ಚರಿ ರೀತಿಯಲ್ಲಿ ನಿರಾಸೆ ಅನುಭವಿಸಬೇಕಾಯಿತು. ಬೆಟ್ಟದಷ್ಟು ರನ್ ಕಲೆ ಹಾಕಿದ್ದ ಟೀಂ ಇಂಡಿಯಾ ಆಸಿಸ್ ಬ್ಯಾಟ್ಸ್‍ಮನ್‍ಗಳ ಸಿಡಿ¯ಬ್ಬರಕ್ಕೆ ನಲುಗಿ ಹೋಯ್ತು. ಈ ಎರಡು ಸೋಲುಗಳು ಟೀಂ ಇಂಡಿಯಾದ ಚಿಂತೆಯನ್ನ ಹೆಚ್ಚಿಸಿದ್ದು ಕ್ಯಾಪ್ಟನ್ ಕೊಹ್ಲಿಯ ಚಿಂತೆಯನ್ನ ಹೆಚ್ಚಿಸಿದೆ. ಸರಣಿಯನ್ನೆ ಕೈಚೆಲ್ಲಿಕೊಳ್ಳುವ ಭೀತಿಯನ್ನ ಎದುರಿಸುತ್ತಿದೆ. ಇಂದು ಮಾನ ಉಳಿಸಿಕೊಳ್ಳಲು ವಿರಾಟ್ ಪಡೆ ಗೆಲ್ಲಲ್ಲೇಬೇಕಾದ ಒತ್ತಡದಲ್ಲಿದೆ.
ಫಿರೋಜ್ ಕೋಟ್ಲಾ ಮೈದಾನ ಕ್ಯಾಪ್ಟನ್ ಕೊಹ್ಲಿಗೆ ತವರು ಆಗಿದ್ದು ಕೊಹ್ಲಿಯಿಂದ ಹೆಚ್ಚಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅಂತಿಮ ಕದನದಲ್ಲಿ ತಂಡದ ಪ್ಲೆಯಿಂಗ್ ಇಲೆವೆನ್‍ನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ.
ಐತಿಹಾಸಿಕ ಸರಣಿ ಗೆಲುವಿನ ಹೊಸ್ತಿಲಲ್ಲಿ ಫಿಂಚ್ ಪಡೆ
ಇತ್ತಿಚೆಗಷ್ಟೆ ಮೊದಲ ಬಾರಿ ಭಾರತ ನೆಲದಲ್ಲಿ ಚೊಚ್ಚಲ ಟಿ20 ಸರಣಿ ಗೆದ್ದು ಇತಿಹಾಸ ¨ರೆದಿದ್ದ ಆಸ್ಟ್ರೇಲಿಯಾ ಇದೀಗ ಚೊಚ್ಚಲ ಏಕದಿನ ಸರಣಿ ಮೇಲೆ ಕಣ್ಣಿಟ್ಟಿದ್ದೆ. ಈ ಸರಣಿ ಗೆದ್ದು ಟೀಂ ಇಂಡಿಯಾಗೆ ಮತ್ತೊಂದು ಶಾಕ್ ಕೊಡಲು ನಿರ್ಧರಿಸಿದೆ. ಆಸ್ಟ್ರೇಲಿಯಾ ತಂಡ ಸಮತೋಲನದಿಂದ ಕೂಡಿದ್ದು ಬ್ಯಾಟ್ಸ್‍ಮನ್‍ಗಳೆ ತಂಡದ ಆಧಾರ ಸ್ತಂಭವಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ