ಸಾಧಕರಿಗೆ ಪದ್ಮ ಪ್ರಶಸ್ತಿ ನೀಡಿ ಸನ್ಮಾನಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ; ಯಾರೆಲ್ಲರಿಗೆ ಈ ಗೌರವ

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ ಈ ಬಾರಿಯ ಪದ್ಮ ಪ್ರಶಸ್ತಿ ಪಡೆದ ಎಲ್ಲ ರಂಗದ ಗಣ್ಯರಿಗೆ ಪದ್ಮ ಪ್ರಶಸ್ತಿಗಳನ್ನ ನೀಡಿ ಗೌರವಿಸಿದರು. ರಾಷ್ಟ್ರಪತಿ ಭವನದ ಅಶೋಕ ಹಾಲಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್​ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನ ನೀಡಿ ಸನ್ಮಾನಿಸಿದರು. ವಿಶ್ವಮಟ್ಟದ ಕಬಡ್ಡಿಯಲ್ಲಿ ಮಿಂಚು ಹರಿಸಿದ್ದ ಭಾರತೀಯ ಕಬಡ್ಡಿ ಕ್ಯಾಪ್ಟನ್​ ಅಜಯ್ ಠಾಕೂರ್​​ಗೆ ರಾಷ್ಟ್ರಪತಿ ಕೋವಿಂದ್​ ಪದ್ಮ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಮಾಜಿ ಪತ್ರಕರ್ತ ದಿ. ಕುಲ್ದೀಪ್​ ನಾಯರ್​​ ಅವರಿಗೆ ಮರಣೋತ್ತರವಾಗಿ  ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ನಾಯರ್ ಪರ ಭಾರತಿ ನಾಯರ್​ ಪ್ರಶಸ್ತಿ ಸ್ವೀಕರಿಸಿದರು.  ಇನ್ನು ಡ್ರಮ್​ ವಾದಕ  ಆನಂದನ್​ ಶಿವಮಣಿ ಅವರಿಗೆ ಪದ್ಮಶ್ರೀ,   ಕುಸ್ತಿಯಲ್ಲಿ ಮಿಂಚು ಹರಿಸಿರುವ ಬಜರಂಗ್​ ಪುನಿಯಾ,  ಸಂಗೀತ ನಿರ್ದೇಶಕ ಶಂಕರ್​ ಮಹಾದೇವನ್​,  ಚಿತ್ರ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ್​ ,  ಟೆನಿಸ್​ ಆಟಗಾರ  ಶರತ್​ ಕಮಲ್​,  ಚೆಸ್​ ಗ್ರಾಂಡ್​​​ಮಾಸ್ಟರ್​​ ಹರಿಕಾ ಡ್ರೋನಾವಲ್ಲಿ,  ಮಾಜಿ ವಿದೇಶಾಂಗ ಕಾರ್ಯದರ್ಶಿ  ಸುಬ್ರಹ್ಮಣ್ಯಂ ಜೈಶಂಕರ್​​ ಅವರಿಗೆ ರಾಷ್ಟ್ರಪತಿಗಳು ಪದ್ಮಶ್ರೀ ಗೌರವ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇನ್ನು  ಸರ್ದಾರ್​ ಸುಖದೇವ್​ ಸಿಂಗ್​ ಧಿಂಡ್ಸಾ ಅವರಿಗೆ ಪದ್ಮಭೂಷಣ ಹಾಗೂ ಹುಕುಂದೇವ್​ ನಾರಾಯಣ ಅವರಿಗೆ ಪದ್ಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ