ಫಾರ್ಮ್ಗೆ ಮರಳಿದ ಓಪನರ್ ಶಿಖರ್ ಧವನ್ :ಧವನ್ ಶತಕಕ್ಕೆ ಥಂಡಾ ಹೊಡೆದ ಕಾಂಗರೂಸ್

ಟೀಂ ಇಂಡಿಯಾದ ಡ್ಯಾಶಿಂಗ್ ಓಪನರ್ ಶಿಖರ್ ಧವನ್ ಕೊನೆಗೂ ಫಾರ್ಮ್ಗೆ ಮರಳಿದ್ದಾರೆ. ನಿನ್ನೆ ಮೊಹಾಲಿ ಅಂಗಳದಲ್ಲಿ ಡೆಡ್ಲಿ ಬ್ಯಾಟಿಂಗ್ ಮಾಡಿದ ಧವನ್ ಆಸಿಸ್ ನ್ನ ಉಡೀಸ್ ಮಾಡಿದ್ರು.

ಸತತ ಬ್ಯಾಟಿಂಗ್ ವೈಫಲ್ಯದಿಂದ ಕೆಂಗೆಟ್ಟಿದ್ದ ಶಿಖರ್ ಧವನ್ ಕಳೆದ ಹುತ್ತು ಇನ್ನಿಂಗ್ಸ್ಗಳಿಂದ ಫ್ಲಾಪ್ ಪರ್ಫಾಮನ್ಸ್ ಕೊಟ್ಟು ತಂಡದಿಂದಲೇ ಗೇಟ್ ಪಾಸ್ ಪಡೆಯುವ ಭೀತಿಗೆ ಗುರಿಯಾಗಿದ್ರು. ಮೇಲಿಂದ ಮೇಲೆ ಅವಕಾಶ ಪಡೆಯುತ್ತಿದ್ರೂ ಧವನ್ ಒಳ್ಳೆಯ ಓಪನಿಂಗ್ ಕೊಡುತ್ತಿರಲಿಲ್ಲ.

ಕೊನೆಗೂ ಫಾರ್ಮ್ಗೆ ಮರಳಿದ ಡ್ಯಾಶಿಂಗ್ ಓಪನರ್
ಬ್ಯಾಕ್ ಟು ಬ್ಯಾಕ್ ಫ್ಲಾಪ್ ಪರ್ಫಾಮನ್ಸ್ ಕೊಟ್ಟು ಕೆಂಗೆಟ್ಟಿದ್ದ ಧವನ್ ನಿನ್ನೆ ಮೊಹಾಲಿ ಅಂಗಳದಲ್ಲಿ ಜಬರ್ದಸ್ತ್ ಬ್ಯಾಟಿಂಗ್ ಮಾಡಿ ತಮ್ಮ ತಾಕತ್ತು ಏನೆಂಬುದನ್ನ ತೋರಿಸಿದ್ದಾರೆ.

ರೋಹಿತ್ ಜೊತೆ ಓಪನರ್ರಾಗಿ ಕಣಕ್ಕಿಳೀದ ಈ ಗಬ್ಬರ್ ಸಿಂಗ್ ಆರಂಭದಲ್ಲೆ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಆಸಿಸ್ ಬೌಲರ್ಸ್ಗಳನ್ನ ಗೋಳೊಯ್ದುಕೊಂಡ್ರು. ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದ ಧವನ್ 44 ಎಸೆತದಲ್ಲಿ ಅರ್ಧ ಶತಕ ತಲುಪಿದ್ರು.

16ನೇ ಶತಕ ಬಾರಿಸಿದ ಶಿಖರ್ ಧವನ್
ನಂತರವೂ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಕಾಂಗರೂಗಳನ್ನ ಚೆಂಡಾಡಿದ ಡೆಲ್ಲಿ ಡ್ಯಾಶರ್ 97 ಎಸೆತದಲ್ಲಿ ಶತಕ ಪೂರೈಸಿ ಸಂಭ್ರಮಿಸಿದ್ರು. ಇದರೊಂದಿಗೆ ಶಿಖರ್ ಧವನ್ ಏಕದಿನ ಕ್ರಿಕೆಟ್ನಲ್ಲಿ 16ನೇ ಏಕದಿನ ಶತಕ ಪೂರೈಸಿದ ಸಾಧನೆ ಮಾಡಿದ್ರು. ಜೊತೆಗೆ ತವರಿನಲ್ಲಿ ಇದು ಐದನೇ ಶತಕ ಹಾಗೂ ಆಸ್ಟ್ರೇಲಿಯಾ ವಿರುದ್ಧ ಮೂರನೇ ಶತಕ ಬಾರಿಸಿದ ಸಾಧನೆ ಮಾಡಿದ್ರು. 18 ಇನ್ನಿಂಗ್ಸ್ಗಳ ಬಳಿಕ ಧವನ್ ಬಾರಿಸಿದ ಮೊದಲ ಶತಕ ಇದಾಗಿದೆ.

ಶತಕ ಬಾರಿಸಿದ ಶಿಖರ್ ಧವನ್
ಎಸೆತ 115
ರನ್ 143
4/6 18/3
ಸ್ಟ್ರೈಕ್ ರೇಟ್ 124.34
115 ಎಸೆತಗಳನ್ನ ಎದುರಿಸಿದ ಶಿಖರ್ ಧವನ್ ಒಟ್ಟು 143 ರನ್ ಕಲೆ ಹಾಕಿದ್ರು. 18 ಬೌಂಡರಿ ಹಾಗೂ ಮೂರು ಸಿಕ್ಸರ್ ಬಾರಿಸಿ 124.34 ಸ್ಟ್ರೈಕ್ ರೇಟ್ ಪಡೆದ್ರು.

ಹತ್ತು ಸಾವಿರ ರನ್ ಫೂರೈಸಿ ಎಲೈಟ್ ಕ್ಲಬ್ ಸೇರಿದ ಗಬ್ಬರ್ ಸಿಂಗ್
ಕಾಂಗರೂಗಳ ವಿರುದ್ಧ ಶಿಖರ್ ಧವನ್ ಆಕರ್ಷಕ ಶತಕ ಬಾರಿಸುವ ಜೊತೆಗೆ ಏಕದಿನ ಕ್ರಿಕೆಟ್ನಲ್ಲಿ ಹತ್ತು ಸಾವಿರ ರನ್ ಪೂರೈಸಿ ತಂಡದ ಎಲೈಟ್ ಕ್ಲಬ್ ಸೇರಿದ್ರು.

ಏಕದಿನ ಕ್ರಿಕೆಟ್ನಲ್ಲಿ ಹತ್ತು ಸಾವಿರ ರನ್ ಪೂರೈಸಿದ ಧವನ್ ತಂಡದ ಹನ್ನೊಂದನೇ ಬ್ಯಾಟ್ಸ್ಮನ್ ಆಗಿದ್ದಾರೆ.

ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಡೆಲ್ಲಿ ಡ್ಯಾಶರ್
ನಿನ್ನೆ ಮೊಹಾಲಿ ಅಂಗಳದಲ್ಲಿ ರನ್ ಹೊಳೆಯನ್ನೆ ಹರಿಸಿ 143 ರನ್ ಬಾರಿಸಿದ ಶಿಖರ್ ಧವನ್ ಏಕದಿನ ಫಾರ್ಮೆಟ್ನಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ರನ್ ಬಾರಿಸಿದ ಹಿರಿಮೆಗೆ ಪಾತ್ರರಾದ್ರು. 2015ರಲ್ಲಿ ಮೆಲ್ಬೋರ್ನ್ನಲ್ಲಿ ದಕ್ಷಿಣ್ ಆಫ್ರಿಕಾ ವಿರುದ್ಧ 137 ರನ್ ಗಳಿಸಿದ್ದು ಇದುವರೆಗಿನ ಹೈಯೆಸ್ಟ್ ಸ್ಕೋರ್ ಆಗಿತ್ತು. ಇದೀಗ ಈ ದಾಖಲೆಯನ್ನ ಧವನ್ ಅಳಿಸಿ ಹಾಕಿದ್ದಾರೆ.

ಆಸಿಸ್ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದ ಧವನ್ -ರೋಹಿತ್
ರೋಹಿತ್ ಜೊತೆಗೆ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ರನ್ ಮಳೆ ಸುರಿಸಿದ ಧವನ್ ಮೊದಲ ವಿಕೆಟ್ಗೆ ಬರೋಬ್ಬರಿ 193 ರನ್ ಕಲೆ ಹಾಕಿತು. ಇದರೊಂದಿಗೆ ಧವನ್ – ರೋಹಿತ್ ಆಸಿಸ್ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದ ತಂಡದ ಮೊದಲ ಜೋಡಿ ಎಂಬ ಗೌರವಕ್ಕೂ ಪಾತ್ರವಾಯಿತು. ಈ ಹಿಂದೆ ಇದೇ ಆಸಿಸ್ ವಿರುದ್ಧ ನಾಗ್ಪುರ ಅಂಗಳದಲ್ಲಿ ಧವನ್ ಮತ್ತು ರೋಹಿತ್ 178 ರನ್ ಗಳಿಸಿದ್ರು.

ಒಟ್ನಲ್ಲಿ ಫ್ಲಾಪ್ ಪರ್ಫಾಮನ್ಸ್ ಕೊಟ್ಟು ತಂಡಕ್ಕೆ ತಲೆ ನೋವಾಗಿದ್ದ ಶಿಖರ್ ಧವನ್ ವಿಶ್ವಕಪ್ಗೂ ಮುನ್ನ ಮತ್ತೆ ಫಾರ್ಮ್ಗೆ ಮರಳಿ ವಿಶ್ವಕಪ್ ಟಿಕೆಟ್ನ್ನ ಕನ್ಪಾರ್ಮ್ ಮಾಡಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ