ನಿನ್ನೆ ಮೊಹಾಲಿಯಲ್ಲಿ ಆಸಿಸ್ ವಿರುದ್ಧ ನಡೆದ ನಾಲ್ಕನೆ ಏಕದಿನ ಪಂದ್ಯದಲ್ಲಿ ಕೊಹ್ಲಿ ಪಡೆ ಸೋಲು ಕಂಡು ಭಾರೀ ಮುಖಭಂಗ ಅನುಭವಿಸಿದೆ.
ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಬ್ಲೂ ಬಾಯ್ಸ್ ಕಳಪೆ ಫೀಲ್ಡಿಂಗ್ ಮಾಡಿ ಪಂದ್ಯವನ್ನ ಕೈಚೆಲ್ಲಿಕೊಂಡ್ರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿ ಕೊಂಡ ಟೀಂ ಇಂಡಿಯಾಗೆ ಓಪನಸರ್ಸ್ಗಳಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಆeಛಿeಟಿಣ ಓಪನಿಂಗ್ ಕೊಟ್ರು.
ಸತತ ಫ್ಲಾಪ್ ಪರ್ಫಾಮನ್ಸ್ ಕೊಟ್ಟು ಕೆಂಗೆಟ್ಟು ಭಾರೀ ಟೀಕೆಗಳಿಗೆ ಗುರಿಯಾಗಿದ್ದ ಈ ಜೋಡಿ ನಿನ್ನೆ ಮೊಹಾಲಿ ಅಂಗಳದಲ್ಲಿ ಸಾಲಿಡ್ ಓಪನಿಂಗ್ ಕೊಟ್ಟು ಆರಂಭದಲ್ಲೆ ಆಸಿಸ್ ಬೌಲರ್ಸ್ಗಳ ಬೆವರಿಳಿಸಿದ್ರು.
ಮೊದಲ ವಿಕೆಟ್ಗೆ 193 ರನ್ ಸೇರಿಸಿದ ಧವನ್. ರೋಹಿತ್
ಡೆಲ್ಲಿ ಡ್ಯಾಶರ್ ಧವನ್ ಆರಂಭದಲ್ಲೆ ಸಿಡಿದೆದ್ರೆ ಹಿಟ್ಮ್ಯಾನ್ ರೋಹಿತ್ ಶರ್ಮಾ ಸ್ಲೋ ಅಂಡ್ ಸ್ಟಡಿ ಇನ್ನಿಂಗ್ಸ್ ಕಟ್ಟಿದ್ರು. ನೋಡನೋಡುತ್ತಿದ್ದಂತೆ ಬೌಂಡರಿ ಸಿಕ್ಸರ್ಗಳ ಸುರಿಮಳೆಗೈದ್ರು. ಧವನ್ 44 ಎಸೆತದಲ್ಲಿ ಅರ್ಧ ಶತಕ ಪೂರೈಸಿದ್ರೆ ರೋಹಿತ್ 61 ಎಸೆತದಲ್ಲಿ ಅರ್ಧ ಶತಕ ಬಾರಿಸಿದ್ರು.
ಶತಕದಂಚಿನಲ್ಲಿ ಎಡವಿದ ರೋಹಿತ್
ಆಸಿಸ್ ಬೌಲರ್ಸ್ಗಳನ್ನ ಮನಸೋ ಇಚ್ಛೆ ದಂಡಿಸಿದ ಈ ಜೋಡಿ ಶತಕದ ದಂಚಿಗೆ ತಲುಪಿತು . ಬಿರುಸಿನ ಬ್ಯಾಟಿಂಗ್ ಮಾಡಿ 95 ರನ್ಗಳಿಸಿದ್ದ ಹಿಟ್ಮ್ಯಾನ್ ರೋಹಿತ್ ಶರ್ಮಾ ರಿಚರ್ಡ್ಸ್ನ್ ಎಸೆತದಲ್ಲಿ ಚೆಂಡನ್ನ ಬಾರಿಸಿ ಹ್ಯಾನ್ಸ್ಕಾಂಬ್ಗೆ ಕ್ಯಾಚ್ ನೀಡಿ ಶತಕ ಬಾರಿಸುವ ಅವಕಾಶದಿಂದ ವಂಚಿತರಾದ್ರು. ರೋಹಿತ್ ಒಟ್ಟು 92 ಎಸೆತ ಎದುರಿಸಿ 7 ಬೌಂಡರಿ 2 ಸಿಕ್ಸರ್ ಬಾರಿಸಿದ್ರು.
16ನೇ ಶತಕ ಬಾರಿಸಿ ಅಬ್ಬರಿಸಿದ ಶಿಖರ್ ಧವನ್
ಒಂದನೆ ಕ್ರಮಾಂಕದಲ್ಲಿ ಬಂದ ಕನ್ನಡಿಗ ರಾಹುಲ್ ಜೊತೆಗೂಡಿ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ ಶಿಖರ್ ಧವನ್ 97 ಎಸೆತದಲ್ಲಿ ಶತಕ ಪೂರೈಸಿ ಸಂಭ್ರಮಿಸಿದ್ರು. ಈದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ 16ನೇ ಶತಕ ಸಿಡಿಸಿದ ಸಾಧನೆ ಮಾಡಿದ್ರು. ನಂತರವೂ ಅಬ್ಬರಿಸಿದ ಧವನ್ 143 ರನ್ಗಳಿಸಿದ್ದಾಗ ಕಮಿನ್ಸ್ಗೆ ಬೌಲ್ಡ್ ಆದ್ರು. ಇದಾದ ಕೆಲವೇ ಹೊತ್ತಿನಲ್ಲಿ ಕ್ಯಾಪ್ಟನ್ ಕೊಹ್ಲಿ, ಕೆ.ಎಲ್. ರಾಹುಲ್ 26, ರಷಭ್ ಪಂತ್ 36 ರನ್ಗಳಿಸಿ ಪೆವಿಲಿಯನ್ ಸೇರಿದ್ರು.
ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 358 ರನ್
ಕೊನೆಯಲ್ಲಿ ಬಂದ ಕೇದಾರ್ ಜಾಧವ್ 10 , ಆಲ್ರೌಂಡರ್ ವಿಜಯ್ ಶಂಕರ್ 26, ಜಸ್ಪ್ರೀತ್ ಬೂಮ್ರಾ ಅಜೇಯ 6 ರನ್ ಗಳಿಸುವುದರೊಂದಿಗೆ ಟೀಂ ಇಂಡಿಯಾ ನಿಗದಿತ ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 358 ರನ್ ಗಳಿಸಿತು. ಆಸಿಸ್ ಪರ ವೇಗಿಗಳಾದ ಪ್ಯಾಟ್ ಕಮಿನ್ಸ್ 5, ರಿಚರ್ಡ್ಸ್ ನ್ 3 ವಿಕೆಟ್ ಪಡೆದು ಮಿಂಚಿದ್ರು.
ಆರಂಭಿಕ ಆಘಾತ ಅನುಭವಿಸಿದ ಆಸ್ಟ್ರೇಲಿಯಾ ತಂಡ
359 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾಕ್ಕೆ ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ಶಾಕ್ ಕೊಟ್ರು.ಕ್ಯಾಪ್ಟನ್ ಆ್ಯರಾನ್ ಫಿಂಚ್ ಭುವಿ ಎಸೆತದಲ್ಲಿ ಡಕೌಟ್ ಆದ್ರೆ ಶಾನ್ ಮಾರ್ಷ್ ಬುಮ್ರಾ ಎಸೆತದಲ್ಲಿ ಬೌಲ್ಡ್ ಆದ್ರು.
ಖ್ವಾಜಾ, ಹ್ಯಾನ್ಸ್ಕಾಬ್ ಬೊಂಬಾಟ್ ಬ್ಯಾಟಿಂಗ್
12 ರನ್ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಓಪನರ್ ಉಸ್ಮಾನ್ ಖ್ವಾಜಾ ಮತ್ತು ಪೀಟರ್ ಹ್ಯಾನ್ಸ್ಕಾಬ್ ಆಸರೆಯಾದ್ರು. ಟೀಂ ಇಂಡಿಯಾ ಬೌಲರ್ಸ್ಗಳನ್ನ ಮನಬಂದಂತೆ ಚೆಂಡಾಡಿದ ಈ ಜೋಡಿ ಮೂರನೇ ವಿಕೆಟ್ ಗೆ 192 ರನ್ ಜೊತೆಯಾಟ ನೀಡಿ ಪಂದ್ಯದ ಗತಿಯ್ನನೆ ಬಲಿಸಿದ್ರು. ಜೊತೆಗೆ ಇಬ್ಬರು ಶತದ ಅಂಚಿಗೆ ತಲುಪಿದ್ರು. ಆದರೆ 91 ರನ್ಗಳಿಸಿದ್ದ ಉಸ್ಮಾನ್ ಖ್ವಾಜಾ ಬುಮ್ರಾ ಎಸೆತದಲ್ಲಿ ಕುಲ್ದೀಪ್ಗೆ ಕ್ಯಾಚ್ ಕೊಟ್ಟು ಶತಕ ವಂಚಿತರಾದ್ರು. ಇತ್ತ ಹ್ಯಾನ್ಸ್ ಕಾಬ್ ಶತಕ ಬಾರಿಸಿ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಬಾರಿಸಿ ಮಿಂಚಿದ್ರು. ಗ್ಲೇನ್ ಮ್ಯಾಕ್ಸ್ವೆಲ್ 23 ರನ್ ಗಳಿಸಿ ಔಟ್ ಆದ್ರು.
ಪಂದ್ಯಕ್ಕೆ ಟರ್ನ್ ಕೊಟ್ಟ ಟರ್ನರ್
ಆರನೇ ವಿಕೆಟ್ಗೆ ಜೊತೆಗೂಡಿದ ಆಶ್ಟನ್ ಟರ್ನರ್ ಮತ್ತು ಆ್ಯಲೆಕ್ಸ್ ಕ್ಯಾರಿ ಟೀಂ ಇಂಡಿಯಾ ಬೌಲರ್ಸ್ಗಳನ್ನ ಮನಬಂದಂತೆ ಚೆಂಡಾಡಿದ್ರು. 33 ಎಸೆತದಲ್ಲಿ ಅರ್ಧ ಶತಕ ಬಾರಿಸಿದ ಟರ್ನರ್ ಅಜೇಯ 84 ರನ್ ಸಿಡಿಸಿ ಗೆಲುವಿನ ದಡ ಸೇರಿಸಿದ್ರು. ಆಸ್ಟ್ರೇಲಿಯಾ ಇನ್ನು ಎರಡು ಓವರ್ ಬಾಕಿ ಇರುವಂತೆ ಗೆಲುವಿನ ನಗೆ ಬೀರಿ ಸಂಭ್ರಮಿಸಿತು.