ನವದೆಹಲಿ: ಲೋಕಸಭಾ ಸಮರಕ್ಕೆ ಮುಹೂರ್ತ ನಿಗದಿಯಾಗಿದ್ದು, 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ. ನೀತಿ ಸಂಹಿತೆ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಚುನಾವಣಾ ಆಯುಕ್ತ ಸುನೀಲ್ ಅರೋರಾ, 16ನೇ ಲೋಕಸಭಾ ಅವಧಿ ಜೂನ್ 3ಕ್ಕೆ ಮುಕ್ತಾಯವಾಗಲಿದೆ. ಜನವರಿ 21,22, 23ರಂದು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡಿ, ಚುನಾವಣೆ ಸಿಧತೆ ಬಗ್ಗೆ ಚರ್ಚೆ ನಡೆಸಿದ್ದು, ಆಯೋಗ ಸಕಲ ರೀತಿಯ ಸಿದ್ಧತೆ ನಡೆಸಿದೆ ಎಂದರು.
ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏ.11 ರಂದು ಮೊದಲ ಹಂತದ ಮತದಾನ; ಏ.18ರಂದು ಎರಡನೇ ಹಂತದ ಮತದಾನ. ಏ.23 ರಂದು 3ನೇ ಹಂತದ ಮತದಾನ; ಏಪ್ರೀಲ್ 29 ರಂದು 4ನೇ ಹಂತ, ಮೇ 6 ರಂದು 5ನೇ ಹಂತ, ಮೇ 12ರಂದು 6ನೇ ಹಂತದ ಹಾಗೂ ಮೇ 19ರಂದು 7ನೇ ಹಂತದ ಮತದಾನ ನಡೆಯಲಿದೆ. ಮೇ. 23ಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕದಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 18ರಂದು 14ಕ್ಷೇತ್ರಗಳಿಗೆ ಹಾಗೂ 23ರಂದು ಇನ್ನು ಳಿದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ದೇಶದಲ್ಲಿ ಒಟ್ಟು 90 ಕೋಟಿ ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಆಯೋಗದ ವತಿಯಿಂದ ಎಲ್ಲಾ ಸಿದ್ಧತೆ ಮಾಡಲಾಗಿದೆ. 8.4 ಕೋಟಿ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ದೇಶಾದ್ಯಂತ ಸುಮಾರು 10 ಲಕ್ಷ ಮತಗಟ್ಟೆಗಳ ಸ್ಥಾಪನೆ ಮಾದಲಾಗುತ್ತಿದ್ದು, ಮತಗಟ್ಟೆಯಲ್ಲಿ ಕನಿಷ್ಠ ಮೂಲಸೌಕರ್ಯ ಒದಗಿಸಲಾಗುತ್ತದೆ. ಎಲ್ಲಾ ಇವಿಎಂ ಗಳಿಗೂ ವಿವಿಪ್ಯಾಟ್ ಗಳ ಬಳಕೆಮಾಡಲಾಗುತ್ತಿದ್ದು, ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಫೋಟೋ ಕೂಡ ಇರಲಿದೆ ಎಂದರು.
ಇನ್ನು ಚುನಾವಣಾ ಆಯೋಗದಿಂದ ಸಯಾಹವಾಣಿ ತೆರೆಯಲಾಗಿದ್ದು, ಹೆಲ್ಪ್ ಲೈನ್ ಸಂಖ್ಯೆ 1950. 24 ಗಂಟೆಗಳ ಕಾಲ ಹೆಲ್ಪ್ ಲೈನ್ ಕಾರ್ಯನಿರ್ವಹಣೆ. ಮತಗಟ್ಟೆಗಳಲ್ಲಿ ಅಕ್ರಮ ನಡೆದರೆ ಕೂಡಲೇ ದೂರು ನೀಡಿ. ತಕ್ಷಣ ಕ್ರಮಕೈಗೊಳ್ಳಲಾಗುವುದು. ದೂರಿ ನೀಡಿದವರ ವಿವರ ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.
Lok Sabha election, dates schedule