ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಳೆದ ಒಂದು ತಿಂಗಳಲ್ಲಿ ದೇಶಾದ್ಯಂತ 28 ಪ್ರವಾಸ ಕೈಗೊಂಡು, 157 ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕಿದ್ದಾರೆ.
ಚುನಾವಣಾ ದಿನಾಂಕ ಘೋಷಣೆ ಆದ ಬಳಿಕ ನೀತಿ ಸಂಹಿತೆ ಜಾರಿಗೆ ಬರುವುದರಿಂದ ಮೋದಿ ಕ್ಷಿಪ್ರ ಪ್ರವಾಸದಲ್ಲಿ ಇಷ್ಟೊಂದು ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಫೆಬ್ರವರಿ 8ರಿಂದ ಮಾರ್ಚ್ 9ರ ನಡುವೆ ಹೈವೇ, ರೈಲ್ವೇ ಮಾರ್ಗಗಳು, ಮೆಡಿಕಲ್ ಕಾಲೇಜ್, ಆಸ್ಪತ್ರೆ, ಶಾಲೆ, ಗ್ಯಾಸ್ ಪೈಪ್ಲೈನ್, ವಿಮಾನ ನಿಲ್ದಾಣ ಹಾಗೂ ಪವರ್ ಪ್ಲಾಂಟ್ ನಿರ್ಮಾಣಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ವಿಶೇಷವೆಂದರೆ ಜನವರಿ 8ರಿಂದ ಫೆ.7ರ ನಡುವೆ ಮೋದಿ 57 ಪ್ರಾಜೆಕ್ಟ್ಗೆ ಚಾಲನೆ ನೀಡಿದ್ದರೆ, ಕಳೆದ ಒಂದು ತಿಂಗಳಲ್ಲಿ ಈ ಸಂಖ್ಯೆ ಮೂರು ಪಟ್ಟು ಹೆಚ್ಚಳವಾಗಿದೆ. ಇದರಲ್ಲಿ ಕೆಲವು ನೆನೆಗುದಿಗೆ ಬಿದ್ದಿದ್ದ ಪ್ರಾಜೆಕ್ಟ್ಗಳಿಗೆ ಮರುಜೀವ ನೀಡಿದ್ದಾರೆ.