ಇಂದು ಇಂಡೋ- ಆಸಿಸ್ ನಾಲ್ಕನೆ ಫೈಟ್ :ಸೇಡು ತೀರಿಸಿಕೊಳ್ಳಲು ಕಾದು ಕುಂತಿದೆ ಟೀಂ ಇಂಡಿಯಾ

ಇಂಡೋ – ಆಸಿಸ್ ನಡುವಿನ ನಾಲ್ಕನೆ ಏಕದಿನ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಚಂಡಿಗಢದಲ್ಲಿ ನಡೆಯಲಿರುವ ಹೈವೋಲ್ಟೇಜ್ ಕದನ ಸಾಕಷ್ಟು ಕುತೂಹಲ ಕೆರೆಳಿಸಿದೆ.

ಮೊನ್ನೆಯಷ್ಟೆ ರಾಂಚಿ ಪಂದ್ಯದಲ್ಲಿ 32 ರನ್ಗಳ ಅಂತರದಿಂದ ಸೋತು ಕೊಹ್ಲಿ ಪಡೆ ಭಾರೀ ಮುಖಭಂಗ ಅನುಭವಿಸಿತ್ತು. ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಕ್ಯಾಪ್ಟನ್ ಕೊಹ್ಲಿ ಹೊರತುಪಡಿಸಿ ತಂಡದ ಎಲ್ಲ ಬ್ಯಾಟ್ಸ್ಮನ್ಗಳು ಫ್ಲಾಪ್ ಪರ್ಫಾಮನ್ಸ್ ಕೊಟ್ಟು ತಂಡದ ಸೋಲಿಗೆ ಕಾರಣರಾದ್ರು.

ಟೀಂ ಇಂಡಿಯಾ ಸೋಲಿಗೆ ಬ್ಯಾಟ್ಸ್ಮನ್ಗಳು ಮಾತ್ರವಲ್ಲ ತಂಡದ ಬೌಲರ್ಸ್ಗಳು ಕೂಡ ಕಾರಣರಾಗಿದ್ದಾರೆ. ಕುಲ್ದೀಪ್ ಹೊರತುಪಡಿಸಿ ಆಸಿಸ್ ಬ್ಯಾಟ್ಸ್ಮನ್ಗಳನ್ನ ಕಟ್ಟಿಹಾಕುವಲ್ಲಿ ತಂಡದ ಇತರೆ ಬೌಲರ್ಸ್ಗಳು ಎಡವಿದ್ರು. ಇದರ ಪರಿಣಾಮವೇ ಆಸಿಸ್ 313 ರನ್ಗಳನ್ನ ಕಲೆ ಹಾಕಿತು.

ಇದೀಗ ಈ ಸೋಲಿನಿಂದ ಗಾಯಗೊಂಡ ಹುಲಿಯಂತಾಗಿದ್ದು ಇಂದು ಚಂಢಿಘಢ ಪಂದ್ಯವನ್ನ ಗೆದ್ದು ಸರಣಿಯನ್ನ ಕೈವಶ ಮಾಡಿಕೊಳ್ಳಲು ಪ್ಲಾನ್ ಮಾಡಿಕೊಂಡಿದೆ. ಇತ್ತ ಆ್ಯರಾನ್ ಫಿಂಚ್ ಪಡೆ ಮೊನ್ನೆಯ ಪಂದ್ಯವನ್ನ ಗೆದ್ದು ಸರಣಿಯನ್ನ ಜೀವಂತವಾಗಿರಿಸಿಕೊಂಡಿದ್ದು ಗೆಲುವಿನ ನಾಗಲೋಟ ಮುಂದುವರೆಸಲು ನಿರ್ಧರಿಸಿದೆ. ಕಾನ್ಪೀಡೆನ್ಸ್ ಹೆಚ್ಚಿಸಿಕೊಂಡಿರುವ ಕಾಂಗರೂಗಳು ನಾಲ್ಕನೆ ಪಂದ್ಯವನ್ನು ಗೆದ್ದು ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.

ಇಂದು ಕನ್ನಡಿಗ ಕೆ.ಎಲ್. ರಾಹುಲ್ಗೆ ಚಾನ್ಸ್
ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಟೀಂ ಇಂಡಿಯಾಕ್ಕೆ ಒಳ್ಳೆಯ ಓಪನಿಂಗ್ ಸಿಗುತ್ತಿಲ್ಲ. ಓಪನರ್ಸ್ಗಳಾದ ಹಿಟ್ಮ್ಯಾನ್ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಪರ್ಫಾಮನ್ಸ್ ಕೊಡುತ್ತಿದ್ದಾರೆ.ರೋಹಿತ್ ಕಳೆದ ಮೂರು ಪಂದ್ಯಗಳಿಂದ ಕೇವಲ 51 ರನ್ಗಳಿಸಿದ್ದಾರೆ. ಇನ್ನು ಬರೀ ಬ್ಯಾಟಿಂಗ್ ವೈಫಲ್ಯ ಮುಂದುವರೆಸಿರುವ ರಾಹುಲ್ ಕಳೆದ 10 ಇನ್ನಿಂಗ್ಸ್ಗಳಿಂದ ಕೇವಲ 147 ರನ್ ಕಲೆ ಹಾಕಿದ್ದಾರೆ.

ಇನ್ನು ಮಿಡ್ಲ್ ಆರ್ಡರ್ನಲ್ಲಿ ನಂ.ಫೋರ್ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಅಂಬಾಟಿ ರಾಯ್ಡು ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆಗಿದ್ದು ಕ್ಯಾಪ್ಟನ್ ಕೊಹ್ಲಿಯನ್ನ ಚಿಂತೆಗೀಡು ಮಾಡುವಂತೆ ಮಾಡಿದೆ. ಅಂಬಾಟಿ ರಾಯ್ಡು ಕಳೆದ ಮೂರು ಪಂದ್ಯಗಳಿಂದ ಬರೀ 33 ರನ್ಗಳಿಸಿ ತಮ್ಮ ಸ್ಥಾನಕ್ಕೆ ಆಪತ್ತ ತಂದುಕೊಂಡಿದ್ದಾರೆ.
ಇನ್ನು ಆಲ್ರಂಡರ್ ವಿಭಾಗದಲ್ಲಿ ರವೀಂದ್ರ ಜಡೇಜಾ ಸಿಕ್ಕ ಅವಕಾಶಗಳನ್ನ ಸರಿಯಾಗಿ ಬಳಸಿಕೊಳ್ಳದೇ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಕರಾಮತ್ತು ತೋರಿಸಿದೇ ತಂಡದಲ್ಲಿ ಇದ್ದು ಇ್ಲಲದವರಂತಾಗಿದ್ದಾರೆ.

ಚಂಡಿಗಢದಲ್ಲಿ ಇಂಡೋ – ಆಸಿಸ್ ಫೈಟ್
ಪಂದ್ಯ 4
ಗೆಲುವು 1
ಸೋಲು 3

ಇದುವರೆಗೂ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳು ಚಂಡಿಗಢದಲ್ಲಿ ಅಂಗಳದಲ್ಲಿ ನಾಲ್ಕು ಏಕದಿನ ಪಂದ್ಯಗಳನ್ನಾಡಿವೆ. ಇದರಲ್ಲಿ ಟೀಂ ಇಂಡಿಯಾ ಕೇವಲ ಒಂದು ಪಂದ್ಯವನ್ನ ಗೆದ್ದರೇ 3 ಪಂದ್ಯಗಳಲ್ಲಿ ಸೋಲು ಕಂಡಿವೆ.

ಮತ್ತೊಂದು ಪಂಚ್ ಕೊಡಲು ರೆಡಿಯಾಗಿದೆ ಫಿಂಚ್ ಪಡೆ
ಆರಂಭದ ಎರಡು ಪಂದ್ಯಗಳನ್ನ ಕೈಚೆಲ್ಲಿದ ಹೊರತಾಗಿಯೂ ಮೂರನೇ ಪಂದ್ಯ ಗೆದ್ದು ಶಾಕ್ ಕೊಟ್ಟಿರುವ ಆ್ಯರಾನ್ ಫಿಂಚ್ ಪಡೆ ಬ್ಲೂ ಬಾಯ್ಸ್ಗೆ ಮತ್ತೊಂದು ಪಂಚ್ ಕೊಡಲು ಇನ್ನಿಲ್ಲದ ಪ್ಲಾನ್ ಮಾಡಿಕೊಂಡಿದೆ. ಬ್ಯಾಟಿಂಗ್ ಬೌಲಿಂಗ್ ಎರಡು ಡಿಪಾರ್ಟ್ಮೆಂಟ್ನಲ್ಲೂ ಮಿಂಚಿದ್ದು ಕೊಹ್ಲಿ ಪಡೆ ಮೇಲೆ ಮತ್ತೆ ಸವಾರಿ ಮಾಡೋ ಸೂಚನೆ ಕೊಟ್ಟಿದೆ. ಸರಣಿ ಜೀವಂತವಾಗಿರಿಸಿಕೊಳ್ಳಬೇಕಿದ್ದಲ್ಲಿ ಪಿಂಚ್ ಬಳಗ ಇಂದಿನ ಗೆಲ್ಲಲ್ಲೇಬೇಕಿದೆ.

ಒಟ್ನಲ್ಲಿ ಕೊಹ್ಲಿ ಪಡೆ ಮತ್ತು ಫಿಂಚ್ ಪಡೆ ಇಂದು ಮತ್ತೊಂದು ಅಗ್ನಿ ಪರೀಕ್ಷೆ ಎದುರಿಸುತ್ತಿದ್ದು ಇಂದು ಗೆಲುವು ಯಾರಿಗೆ ಅನ್ನೊದನ್ನ ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ