ಆರ್‌ಎಸ್‌ಎಸ್‌ ಅಖೀಲ ಭಾರತೀಯ ಪ್ರತಿನಿಧಿ ಸಭೆಯ ವಾರ್ಷಿಕ ಸಭೆ

Nagpur: RSS Chief Mohan Bhagwat addresses during Balasaheb Deoras Birth Centenary function in Nagpur on Wednesday. PTI Photo(PTI12_17_2015_000123A)

ಗ್ವಾಲಿಯರ್‌ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಅತ್ಯುನ್ನತ ನೀತಿ ನಿರ್ಧಾರ ರೂಪಿಸುವ ‘ಅಖೀಲ ಭಾರತೀಯ ಪ್ರತಿನಿಧಿ ಸಭೆ’ ಯ ಮೂರು ದಿನಗಳ ವಾರ್ಷಿಕ ಸಭೆ ಗ್ವಾಲಿಯರ್‌ ನಲ್ಲಿ ಆರಂಭಗೊಂಡಿದೆ.

43 ಸಂಘ ಪ್ರಾಂತ್ಯಗಳು ಮತ್ತು 11 ಪ್ರಾದೇಶಿಕ ವಿಭಾಗಗಳ ಸುಮಾರು 1,400 ಆಯ್ದ ಪ್ರತಿನಿಧಿಗಳು ಭಾಗವಹಿಸಿದ್ದು, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಪಾಲ್ಗೊಂಡಿದ್ದಾರೆ.

ಮೂರು ದಿನಗಳ ಈ ಸಮಾವೇಶದಲ್ಲಿ ಶಿಕ್ಷಣ ರಂಗವೂ ಸೇರಿದಂತೆ ಆರ್‌ಎಸ್‌ಎಸ್‌ ವಿವಿಧ ಕ್ಷೇತ್ರಗಳಲ್ಲಿ ಕೈಗೊಳ್ಳುವ ವರ್ಷ ಪೂರ್ತಿ ಕಾರ್ಯಕ್ರಮಗಳ ರೂಪರೇಖೆಯನ್ನು ನಿರ್ಧರಿಸಲಾಗುತ್ತಿದೆ.

ಇಂದು ಆರಂಭಗೊಂಡಿರುವ ಸಭೆಯಲ್ಲಿ ೨೦೧೮-೧೯ ರ ಸಾಲಿನಲ್ಲಿ ಜರುಗಿದ ಸಂಘ ಶಿಕ್ಷಾ ವರ್ಗ, ಪ್ರಾಥಮಿಕ ಶಿಕ್ಷಾ ವರ್ಗ, ಶಾಖೆಗಳ ಸಂಖ್ಯೆ ಹಾಗೂ ಅವು ಬೆಳೆದಿರುವ ಅಂಕಿ ಅಂಶಗಳನ್ನು ಪ್ರಕಟಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ