ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಎಐಎಡಿಎಂಕೆ ತಂದೆಯಿದ್ದಂತೆ. ಮೋದಿ ಈ ದೇಶದ ತಂದೆ… ನಾವು ಅವರ ನಾಯಕತ್ವ ಒಪ್ಪಿದ್ದು, ಮಾರ್ಗ ದರ್ಶನದಲ್ಲೇ ಮುನ್ನಡೆಯುತ್ತೇವೆ ಎಂದು ತಮಿಳುನಾಡಿನ ಸಚಿವ ಕೆಟಿ ರಾಜೇಂದ್ರ ಬಾಲಾಜಿ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಆಡಳಿತ ರೂಢ ಎಐಎಡಿಎಂಕೆ ನಡುವೆ ಮೈತ್ರಿ ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಸಚಿವ ಕೆಟಿ ರಾಜೇಂದ್ರ ಬಾಲಾಜಿ ಅವರು, ‘ಎಐಎಡಿಎಂಕೆ ಪಕ್ಷಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯೇ ತಂದೆಯಂತೆ. ತಮಗೆ ಮಾತ್ರವಲ್ಲ ದೇಶಕ್ಕೂ ಪ್ರಧಾನಿ ಮೋದಿ ತಂದೆಯಂತೆ ಎಂದು ಹೇಳಿದ್ದಾರೆ.
‘ತಮಿಳುನಾಡಿನ ವಿರುದನಗರ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಬಾಲಾಜಿ, ನಮ್ಮ ನಾಯಕಿ ಜಯಲಲಿತಾ ನಿಧನವಾದ ನಂತರ ಮೋದಿಯೇ ನಮಗೆ ತಂದೆಯ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡುತ್ತಿದ್ದಾರೆ. ಅಮ್ಮ (ಜಯಲಲಿತಾ) ನಿಧನದ ನಂತರ ಎಐಎಡಿಎಂಕೆ ಪಕ್ಷಕ್ಕೆ ಮೋದಿಯವರೇ ಡ್ಯಾಡಿ.. ಪ್ರಧಾನಿ ಮೋದಿ ಬರೀ ತಮಿಳುನಾಡಿಗೆ ಮಾತ್ರ ತಂದೆಯಲ್ಲ, ಇಡೀ ದೇಶಕ್ಕೆ ಅವರೇ ತಂದೆ. ಹಾಗಾಗಿ, ನಾವು ತಮಿಳುನಾಡಿನಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
PM Modi our daddy, India’s daddy: AIADMK minister on alliance with BJP