ಗಡಿಯೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನ ಡ್ರೋಣ್ ಹಿಮ್ಮೆಟ್ಟಿಸಿದ ಭದ್ರತಾ ಪಡೆಗಳು

ಜೈಪುರ: ಭಾರತೀಯ ವಾಯುಗಡಿಯೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಡ್ರೋಣ್ ವೊಂದನ್ನು ಭದ್ರತಾ ಪಡೆಗಳು ಹಿಂದಕ್ಕೆ ಓಡಿಸಿರುವ ಘಟನೆ ನಡೆದಿದೆ.

ರಾಜಸ್ಥಾನದ ಭಾರತ-ಪಾಕಿಸ್ತಾನ ಗಡಿಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಡ್ರೋಣ್‌ ಅನ್ನು ಗಡಿ ಭದ್ರತಾ ಪಡೆಯು ಹಿಮ್ಮೆಟ್ಟಿದ ಬಳಿಕ ವಾಪಸ್‌ ಹೋಗಿದೆ.

ಕಲೆದ ಸೋಮವಾರ ಬೆಳಗ್ಗೆ 11.30ರ ಹೊತ್ತಿಗೆ ಹಾರಾಡುತ್ತಿದ್ದ ಪಾಕಿಸ್ತಾನದ ಡ್ರೋಣ್‍ನ್ನು ಭಾರತೀಯ ವಾಯುಪಡೆ ವಿಮಾನ ಹೊಡೆದುರುಳಿಸಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನದ ಮತ್ತೊಂದು ಡ್ರೋಣ್ ಭಾರತೀಯ ಗಡಿಯೊಳಗೆ ನುಸುಳಲು ಯತ್ನಿಸಿದ್ದು, ಭದ್ರತಾ ಪಡೆಗಳ ಕರ್ತವ್ಯ ಪ್ರಜ್ಞೆಯಿಂದಾಗಿ ಡ್ರೋಣ್ ಬಂದದಾರಿಗೆ ಸುಂಕವಿಲ್ಲದಂತೆ ವಾಪಸ್ ಆಗಿದೆ.

ಭಾರತವನ್ನು ಪ್ರವೇಶಿಸಲು ಯತ್ನಿಸಿರುವ ಎರಡನೇ ಡ್ರೋಣ್‌ ಇದಾಗಿದ್ದು, ಶ್ರೀರಂಗನಗರದ ಸಮೀಪ ಹಿಂದುಮಲ್‌ಕೋಟ್‌ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಪ್ರದೇಶವನ್ನು ಮುಂಜಾನೆ 5 ಗಂಟೆ ವೇಳೆಗೆ ಪ್ರವೇಶಿಸಲು ಯತ್ನಿಸಿದೆ. ಅನುಮಾನಾಸ್ಪದ ಡ್ರೋಣ್‌ ಕಂಡ ನಂತರ ಸಿಬ್ಬಂದಿ ಫೈರಿಂಗ್‌ ನಡೆಸಿ ಅದನ್ನು ಹಿಮ್ಮೆಟ್ಟಿಸಿದ್ದಾರೆ ಎಂದು ಬಿಎಸ್‌ಎಫ್‌ ತಿಳಿಸಿದೆ.

ಪಾಕಿಸ್ತಾನ ಡ್ರೋಣ್‌ ರಾಜಸ್ಥಾನದ ಗಡಿಯಲ್ಲಿ ಭಾರತದೊಳಗೆ ನುಸುಳಲು ಮುಂದಾಗಿತ್ತು. ಈ ವೇಳೆ ಗಡಿ ಭದ್ರತಾ ಪಡೆಯು ಡ್ರೋಣ್‌ ಅನ್ನು ಪತ್ತೆಹಚ್ಚಿ ಶೂಟ್‌ ಮಾಡಲು ಯತ್ನಿಸಿದಾಗ ಮರಳಿ ಪಾಕ್‌ಗೆ ಹಿಂತಿರುಗಿದೆ ಎಂದು ಬಿಎಸ್‌ಎಫ್‌ ತಿಳಿಸಿದೆ.

Pakistan drone crosses Rajasthan border, returns after BSF firing

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ