ರಫೇಲ್ ಒಪ್ಪಂದದ ಯಾವುದೇ ದಾಖಲೆಗಳೂ ಕಳುವಾಗಿಲ್ಲ: ಅಟಾರ್ನಿ ಜನರಲ್​

ನವದೆಹಲಿ: ರಫೇಲ್​ ಯುದ್ಧ ವಿಮಾನ ಖರೀದಿ ಒಪ್ಪಂದದ ಯಾವುದೇ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳುವಾಗಿಲ್ಲ ಎಂದು ಅಟಾರ್ನಿ ಜನರಲ್​ ಕೆ.ಕೆ. ವೇಣುಗೋಪಾಲ್​ ಸ್ಪಷ್ಟಪಡಿಸಿದ್ದಾರೆ.

ಈ ವಿಚಾರವಾಗಿ ಸುಪ್ರೀಂಕೋರ್ಟ್​ನಲ್ಲಿ ದಾವೆ ಹೂಡಿರುವ ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ, ಅರುಣ್​ ಶೌರಿ ಹಾಗೂ ವಕೀಲ ಪ್ರಶಾಂತ್​ ಭೂಷಣ್​ ಅವರು ತಮ್ಮ ಅರ್ಜಿಯೊಂದಿಗೆ ರಫೇಲ್​ ಯುದ್ಧವಿಮಾನ ಖರೀದಿ ಒಪ್ಪಂದದ ಮೂಲ ದಾಖಲಾತಿಗಳ ನಕಲನ್ನು ಲಗತ್ತಿಸಿದ್ದಾರೆ. ಸರ್ಕಾರದ ಪ್ರಕಾರ ಈ ದಾಖಲೆಗಳು ಅತ್ಯಂತ ಗೌಪ್ಯವಾದವು ಎಂದು ವರ್ಗೀಕರಿಸಲ್ಪಟ್ಟಿವೆ. ಹಾಗಾಗಿ ತಾವು ಸುಪ್ರೀಂಕೋರ್ಟ್​ನಲ್ಲಿ ದಾಖಲೆಗಳು ಕಳುವಾಗಿವೆ ಎಂಬ ಪದ ಪ್ರಯೋಗ ಮಾಡಿದ್ದಾಗಿ ಹೇಳಿದ್ದಾರೆ.

ಕಳೆದ ವಾರ ಸುಪ್ರೀಂಕೋರ್ಟ್​ನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಅಟಾರ್ನಿ ಜನರಲ್​ ವೇಣುಗೋಪಾಲ್​ ದಾಖಲೆಗಳು ಕಳುವಾಗಿರುವುದಾಗಿ ಹೇಳಿದ್ದರು. ಇದನ್ನು ಆಧರಿಸಿ ಕಾಂಗ್ರೆಸ್​ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ