ಮಹಾಘಟ್‍ಬಂಧನ್ ಸ್ವಾರ್ಥಕ್ಕಾಗಿ ಹುಟ್ಟಿಕೊಂಡಿದೆ-ಬಿಜೆಪಿ ಮುಖಂಡ ಶಿವರಾಜ್‍ಸಿಂಗ್ ಚೌಹಾಣ್

ಬೆಂಗಳೂರು,ಮಾ.8 -ಇಂದು ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್‍ಸಿಂಗ ಚೌಹಾಣ್ ಅವರು, ನಮ್ಮ ಯೋಧರು ಏರ್ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಭಾರತ ಶಕ್ತಿ ಏನೆಂದು ಪಾಕಿಸ್ತಾನಕ್ಕೆ ತೋರಿಸಿಕೊಟ್ಟಿದ್ದಾರೆ. ಆದರೆ ರಾಹುಲ್ ಗಾಂಧಿ ಅವರು ದಿನಕ್ಕೊಂದು ಹೇಳಿಕೆಗಳನ್ನು ನೀಡುವ ಮೂಲಕ ರಾಜಕೀಯಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಯಾವಾಗ ಬಿದ್ದು ಹೋಗತ್ತದೋ ಗೊತ್ತಿಲ್ಲ ಎಂದ ಅವರು, ಮಹಾಘಟ್‍ಬಂಧನ್ ಸ್ವಾರ್ಥಕ್ಕಾಗಿ ಹುಟ್ಟಿಕೊಂಡಿದೆ.

ಮಹಾಘಟ್‍ಬಂಧನ್‍ನಲ್ಲಿರುವ ಪಕ್ಷಗಳಿಗೆ ಪರಸ್ಪರ ವಿಶ್ವಾಸವಿಲ್ಲ. ಅಧಿಕಾರವೊಂದೇ ಇದರ ಉದ್ದೇಶ ಎಂದು ಕಿಡಿಕಾರಿದರು.

ಇದೇ ಸಂದರ್ಭದಲ್ಲಿ ಶಾಸಕರಾದ ಲಕ್ಷ್ಮಣ್ ಸವದಿ, ಜಿ.ಬಿ.ಜ್ಯೋತಿ ಗಣೇಶ್, ಜೆ.ಸಿ.ಮಾಧುಸ್ವಾಮಿ, ಮಾಜಿ ಸಂಸದರಾದ ಜೆ.ಎಚ್.ಬಸವರಾಜ್, ಮಾಜಿ ಶಾಸಕರಾದ ಕೆ.ಎಸ್.ಕಿರಣ್‍ಕುಮಾರ್ ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ