ಜಿಎಸ್‌ಪಿ ಹಿಂತೆಗೆತದಿಂದಾಗಿ ಹೆಚ್ಚಿನ ಪರಿಣಾಮ ಬೀರದು ಎಂದ ಭಾರತ

ನವದೆಹಲಿ: ಜಿಎಸ್‌ಪಿಯಡಿ ಭಾರತದ ಉತ್ಪನ್ನಗಳಿಗೆ ನೀಡಿದ್ದ ಸೌಲಭ್ಯಗಳನ್ನು ಹಿಂತೆಗೆದುಕೊಳ್ಳುವ ಅಮೆರಿಕದ ನಿರ್ಧಾರದಿಂದ ಭಾರತದ ರಫ್ತುಗಳ ಮೇಲೆ ಮಹತ್ವದ ಪರಿಣಾಮವೇನೂ ಬೀರದು ಭಾರತ ತಿಳಿಸಿದೆ.

ಜಿಎಸ್‌ಪಿ ಅಡಿ ಭಾರತ ಅಮೆರಿಕಕ್ಕೆ 560 ಕೋಟಿ ಡಾಲರ್‌ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಆದರೆ ವಾರ್ಷಿಕವಾಗಿ 19 ಕೋಟಿ ಡಾಲರ್‌ ವಸ್ತುಗಳಿಗೆ ಮಾತ್ರ ಸುಂಕ ವಿನಾಯಿತಿ ದೊರೆಯುತ್ತಿತ್ತು ಎಂದು ವಾಣಿಜ್ಯ ಕಾರ್ಯದರ್ಶಿ ಅನೂಪ್‌ ವಾಧ್ವಾನ್‌ ತಿಳಿಸಿದ್ದಾರೆ. ಭಾರತ ಪ್ರಮುಖವಾಗಿ ಕಚ್ಚಾ ವಸ್ತುಗಳು ಹಾಗೂ ತಕ್ಷಣ ಬಳಸಬಹುದಾದ ಸಾವಯವ ರಾಸಾಯನಿಕಗಳನ್ನು ಅಮೆರಿಕಕ್ಕೆ ರಫ್ತು ಮಾಡುತ್ತಿದೆ. ಭಾರತದ ಜತೆ ಆದ್ಯತಾ ವ್ಯಾಪಾರದ ಸೌಲಭ್ಯಗಳನ್ನು ರದ್ದುಪಡಿಸುವುದಾಗಿ ಟ್ರಂಪ್‌ ಆಡಳಿತ ಹೇಳಿದ್ದು, ಇದರಿಂದ ಹೆಚ್ಚಿನ ಪರಿಣಾಮ ಬೀರದು ಎಂದು ತಿಳಿಸಿದ್ದಾರೆ.

ವೈದ್ಯಕೀಯ ಉಪಕರಣಗಳು ಮತ್ತು ಡೈರಿ ಉತ್ಪನ್ನಗಳ ರಫ್ತಿಗೆ ಸುಂಕ ವಿನಾಯಿತಿ ನೀಡಬೇಕೆಂಬ ಅಮೆರಿಕದ ಬೇಡಿಕೆ ಕುರಿತು ಭಾರತ ಚೌಕಾಶಿಗೆ ಸಿದ್ಧವಿಲ್ಲ ಎಂದು ಅವರು ತಿಳಿಸಿದರು.

GSP benefit withdrawal by US will not have much impact on India’s

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ